ಗದಗ:ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಸರ್ಕಾರಿ ಸಾರಿಗೆ ಬಸ್​ಗಳಲ್ಲಿ ಒಂದಲ್ಲ ಒಂದು ಅವಾಂತರಗಳು ನಡೆಯುತ್ತಲೇ ಇವೆ. ಇದೀಗ ಚಲಿಸುತ್ತಿರುವ ಬಸ್​​ನಿಂದ ಟೈಯರ್​ ಕಳಚಿಕೊಂಡು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿರುವ ಭಯಾನಕ ಘಟನೆ ವರದಿಯಾಗಿದೆ.​
ಗದಗ ತಾಲೂಕಿನ ತಗಡೂರು ಹಾಗೂ ಹೊಂಬಳ ಗ್ರಾಮದ ನಡುವೆ ಈ ಘಟನೆ ನಡೆದಿದೆ. ಗದಗ ಡಿಪೋಗೆ ಸೇರಿದ ವಾಯವ್ಯ ಕರ್ನಾಟಕ ಸಾರಿಗೆ ಬಸ್, ಗದಗದಿಂದ ನರಗುಂದದ ಕಡೆ ಹೊರಟಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಬಸ್​ನ ಹಿಂಬದಿಯ ಒಂದು ಚಕ್ರ ಕಳಚಿಕೊಂಡು ರಸ್ತೆ ಪಕ್ಕಕ್ಕೆ ಉರುಳಿಕೊಂಡು ಹೋಗಿ ಬಿದ್ದಿದೆ.
ಇದನ್ನೂ ಓದಿ:ವಿಶ್ವದರ್ಜೆಯ ಪೊಲೀಸಿಂಗ್ ವ್ಯವಸ್ಥೆಗೆ ಪಣ: ಬಾಡಿಗೆದಾರರ ಡೇಟಾ ಸಂಗ್ರಹಕ್ಕೆ ವಿಶೇಷ ಆ್ಯಪ್​, ಡ್ರಗ್ಸ್ ದಂಧೆ ತಡೆಯಲು ಹೊಸ ಯೋಜನೆ ಜಾರಿ
ಬಸ್​ ಹಿಂಬದಿಯ ಡಬಲ್ ಚಕ್ರದ ಪೈಕಿ ಒಂದು ಚಕ್ರ ಕಳಚಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಾರಿಗೆ ಬಸ್​ ಸುಮಾರು 50 ಜನ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಬಸ್​ನಲ್ಲಿದ್ದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಭಯಭೀತರಾದರು. ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಬಸ್​ನ ಹಿಂಬದಿ ಚಕ್ರ ಕಳಚಿಕೊಂಡು ಉರುಳಿ ಹೋಗ್ತಿದ್ದಂತೆ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ಘಟನೆ ದೃಶ್ಯವನ್ನು ಬಸ್​ನ ಹಿಂದೆ ಬರುತ್ತಿದ್ದ ಕಾರಿನಲ್ಲಿ ಇದ್ದವರು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ.
ಶಕ್ತಿ ಯೋಜನೆಯಿಂದಾಗಿ ಬಸ್​ಗಳೆಲ್ಲ ಡಕೋಟಾ ಬಸ್​ಗಳಾಗಿ ಪರಿವರ್ತನೆ ಆಗುತ್ತಿದೆ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ. ಬಸ್​ಗಳು ಸಿಕ್ಕಾಪಟ್ಟೆ ರಷ್ ಆಗುತ್ತಿದ್ದು, ಇದರಿಂದ ಬಸ್​ನ ಒಂದೊಂದೇ ವಸ್ತುಗಳು ಕಳಚಿಬೀಳ್ತಿವೆ. ಮಾರ್ಗಮಧ್ಯದಲ್ಲಿಯೇ ಕೆಲವು ಬಸ್​ಗಳು ಕೆಟ್ಟು ನಿಲ್ಲುತ್ತಿವೆ ಎಂಬುದಕ್ಕೆ ಈ ಘಟನೆ ಒಂದು ತಾಜಾ ಉದಾಹರಣೆಯಾಗಿದೆ.(ದಿಗ್ವಿಜಯ ನ್ಯೂಸ್​)
ಲ್ಯಾಂಡರ್​​ ವೇಗ ತಗ್ಗಿಸುವ ಕೊನೇ ಹಂತದ ಪ್ರಕ್ರಿಯೆ ಸಕ್ಸಸ್​: ಚಂದ್ರಯಾನ 3 ನೌಕೆಯ ಮುಂದಿನ ನಿಲ್ದಾಣ ಚಂದ್ರ!

ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ: ಇನ್ಮುಂದೆ RC-DL ಕಾರ್ಡ್​ಗೆ ಅಲೆದಾಡಬೇಕಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
