ಬೆಂಗಳೂರು:ರಾಜಧಾನಿಯಲ್ಲಿ ಸತತ 4ನೇ ದಿನವೂ ಉಷ್ಣಾಂಶ 40ರ ಗಡಿ ದಾಟಿದೆ. ಮೇ 1ರಂದು 41.3, ಮೇ 2 ರಂದು 41.1, ಮೇ 3ರಂದು 40.9 ಹಾಗೂ ಮೇ 4ರಂದು 40 ಡಿ.ಸೆ.ಉಷ್ಣಾಂಶ ದಾಖಲಾಗಿದೆ.
ಸತತ ಎರಡು ದಿನವೂ ಮಳೆ ಸುರಿದರೂ,ಮೋಡ ಕವಿದ ವಾತಾವರಣ ಇದ್ದರೂ ಉಷ್ಣಾಂಶ ತಗಿಲ್ಲ. ವಾಡಿಕೆಯಂತೆ 34 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು.ವಾಡಿಕೆಗಿಂತ 6 ಡಿ.ಸೆ.ಅಧಿಕ ದಾಖಲಾಗುತ್ತಿದ್ದು, ಇದರಿಂದಾಗಿ ಬಿಸಿಲಿನ ಧಗೆ ಇನ್ನಷ್ಟು ಹೆಚ್ಚುವಂತಾಗಿದೆ. ಈ ಬಾರಿ ನಗರದಲ್ಲಿ ಗರಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಬುಧವಾರ 41.3 ಡಿ.ಸೆ.ತಾಪಮಾನ ವರದಿಯಾಗಿತ್ತು. ಈ ಮೂಲಕ ಹಿಂದಿನ ಎಲ್ಲ ದಾಖಲೆಗಳು ಮುರಿದಂತಾಗಿದೆ.
18 ಜಿಲ್ಲೆಗಳಲ್ಲಿ ಶಾಖ ಅಲೆ ಮುಂದುವರಿಕೆ:7ರಿಂದ ರಾಜ್ಯದ ಕೆಲವೆಡೆ ಮಳೆ2017ರಲ್ಲಿ 39.6, 2018ರಲ್ಲಿ 38.1, 2019ರಲ್ಲಿ 39.9, 2020ರಲ್ಲಿ 38.9, 2021ರಲ್ಲಿ 38.9, 2022ರಲ್ಲಿ 39.7 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು. ಈವರೆಗೆ ದಾಖಲಾದ ಅತ್ಯಾಧಿಕ ತಾಪಮಾನ ಇದಾಗಿತ್ತು. ವರ್ಷದಿಂದ ವರ್ಷಕ್ಕೆ ನಗರದಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ಬೇಸಿಗೆಗಾಲ ಅಂದರೆ ಮಾರ್ಚ್​ನಿಂದ ಆರಂಭವಾಗಿ ಮೇ ತಿಂಗಳವರೆಗೆ ಇರುತ್ತದೆ. ಆದರೆ, ಈ ಬಾರಿ ನಗರದಲ್ಲಿ ವಾಡಿಕೆಗಿಂತ ಮುನ್ನ ಬೇಸಿಗೆ ಶುರುವಾಗಿತ್ತು. ಸಾಮನ್ಯವಾಗಿ ಮಾರ್ಚ್​ ಬಳಿಕ ಬಿಸಿಲು ಬೇಗೆ ಹೆಚ್ಚಾಗುತ್ತಿತ್ತು. ಫೆಬ್ರವರಿಯಲ್ಲೇ ಸುಡು ಬಿಸಿಲು ಕಾಣಿಸಿಕೊಂಡಿತ್ತು. ಏಪ್ರಿಲ್​ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್​ನಲ್ಲಿ ಅಧಿಕವಾಗಿತ್ತು. ಏಪ್ರಿಲ್​ನಲ್ಲಿಯೂ 38ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಿತ್ತು. ಪ್ರಸಕ್ತ ತಿಂಗಳು ಉಷ್ಣಾಂಶ 40ರ ಗಡಿ ದಾಟಿದೆ. ಕಳೆದ ವರ್ಷ ತೀವ್ರ ಮಳೆ ಅಭಾವ, ಗಾಳಿಯಲ್ಲಿ ತೇವಾಂಶ ಕುಂಠಿತ ಸೇರಿ ವಿವಿಧ ಕಾರಣಗಳಿಂದ ಉತ್ತರ ಕರ್ನಾಟಕದ ಮಾದರಿ ಉರಿ ಬಿಸಿಲು ಕಾಣಿಸಿಕೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − six =
Remember me
