ಬೆಂಗಳೂರು:ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ ಸ್ನೇಹಿತರ ದಿನಾಚರಣೆ ಪ್ರಯುಕ್ತ ಆ.4 ರಂದು ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಉಚಿತವಾಗಿ ನೀಡುವ ಕೊಡುಗೆ ಘೋಷಿಸಿದೆ.
ಈ ಕುರಿತು ಮಾಹಿತಿ ನೀಡಿರುವ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಅರುಣ್, ಸ್ನೇಹಿತರ ದಿನವನ್ನು ಮತ್ತಷ್ಟು ವಿಶೇಷಗೊಳಿಸಲು ವಂಡರ್‌ಲಾ ಟಿಕೆಟ್ ಖರೀದಿಯ ಮೇಲೆ ಕೊಡುಗೆ ನೀಡಿದೆ. ಪ್ರತಿಯೊಬ್ಬರು ಹೆಚ್ಚು ಮನರಂಜನೆ ಅನುಭವಿಸುವುದು ಸ್ನೇಹಿತರ ಜೊತೆಗಿದ್ದ ಸಂದರ್ಭದಲ್ಲಿ. ಈ ಮನರಂಜನೆಗೆ ವೇದಿಕೆಯಾಗಿ ವಂಡರ್‌ಲಾ ಈ ಕೊಡುಗೆ ನೀಡಿದ್ದು, ತಮ್ಮ ಸ್ನೇಹಿತರೊಂದಿಗೆ ವಂಡರ್‌ಲಾಗೆ ಆಗಮಿಸಿ ಇಲ್ಲಿನ ಇನ್ನಷ್ಟು ಮೋಜು ಮಸ್ತಿ ಮಾಡಲು ಆಹ್ವಾನ ನೀಡಿದರು.
ಈ ವಿಶೇಷ ಕೊಡುಗೆಗಳಲ್ಲಿ ಲೈವ್ ಡಿಜೆ, ಸಂಜೆ ಜುಂಬಾ ಸೆಷನ್‌ಗಳು, ಮೋಜಿನ ಆಟಗಳು ಮತ್ತು ಬಹುಮಾನಗಳು, ಎಲ್ಲಾ ರೋಮಾಂಚಕ ರೈಡ್‌ಗಳು ಮತ್ತು ಸೌಕರ್ಯಗಳನ್ನು ಒಳಗೊಂಡಿದ್ದು, ಎಲ್ಲಾ ವಿಭಾಗಗಳು ವಿಸ್ತೃತ ಅವಧಿಯವರೆಗೆ ತೆರೆದಿರಲಿವೆ ಎಂದು ಅವರು ವಿವರಿಸಿದ್ದಾರೆ.
ಆನ್‌ಲೈನ್ ಮುಖಾಂತರ ತಮ್ಮ ಪ್ರವೇಶ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಅಥವಾ ನೇರವಾಗಿ ಪಾರ್ಕ್ ಕೌಂಟರ್‌ಗಳಿಂದ ಟಿಕೆಟ್‌ಗಳನ್ನು ಖರೀದಿಸಬಹುದು. ಹೆಚ್ಚಿನ ಮಾಹಿತಿಗೆ 8037230333, 8035073966 ಸಂಪರ್ಕಿಸಬಹುದು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
