ಬೆಂಗಳೂರು:ಭಾದ್ರಪದ ಮಾಸದ ಮೊದಲನೇ ಮಂಗಳವಾರದ ನಿಮಿತ್ತ ನಗರದ ವಿವಿಧೆಡೆ ಶ್ರೀವೀರಭದ್ರ ದೇವರ ಜಯಂತಿಯನ್ನು ಆಚರಿಸಲಾಯಿತು.ಶಿವ ಸಂಸ್ಕೃತಿಗೆ ಧಕ್ಕೆಯಾದಾಗ ವೀರಭದ್ರ ಸ್ವಾಮಿಯು ಅವತರಿಸಿದ ಭಾದ್ರಪದ ಮಾಸದ ಮೊದಲನೇ ಮಂಗಳವಾರದಂದು ವೀರಭದ್ರ ಜಯಂತಿಯನ್ನು ಆಚರಿಸಲಾಗುತ್ತದೆ.
ಬೆಂಗಳೂರಿನ ಪ್ರಾಚೀನ ವಿಭೂತಿಪುರ ವೀರಸಿಂಹಾಸ ಮಠದ ಶ್ರೀವೀರಭದ್ರಸ್ವಾಮಿ ದೇವಾಲಯದಲ್ಲಿ ಜಯಂತಿ ಅಂಗವಾಗಿ ವಿಶೇಷ ರುದ್ರಾಭಿಷೇಕ ಹಮ್ಮಿಕೊಳ್ಳಲಾಗಿತ್ತು.ಶ್ರೀಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು ವೀರಭದ್ರ ಸ್ವಾಮಿಯು ಸನಾತನ ಧರ್ಮ ರಕ್ಷಣೆಗಾಗಿ ಅವತರಿಸಿದ ದೇವರು.ವೀರಭದ್ರ ಸ್ವಾಮಿಗೆ ಎಲ್ಲಿ ಪೂಜೆ ನಡೆಯುತ್ತದೆಯೋ ಅಲ್ಲಿ ಧರ್ಮ ನೆಲೆಗೊಳ್ಳುತ್ತದೆ.ವಿಭೂತಿಪುರದ ವೀರಭದ್ರ ಸ್ವಾಮಿ ಕ್ಷೇತ್ರವು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿದ್ದು,ನಾಡಪ್ರಭು ಕೆಂಪೇಗೌಡರ ವಂಶಸ್ಥರು ಜೀರ್ಣೋದ್ಧಾರ ಮಾಡಿದ ಇತಿಹಾಸವಿದೆ.ವೀರಭದ್ರನ ಜಯಂತಿ ಹಿನ್ನೆಲೆಯಲ್ಲಿ ನಾಡಿಗೆ ಕಲ್ಯಾಣವಾಗಲಿ ಎಂದು ಸಂಕಲ್ಪಿಸಿ ಪೂಜೆ ಮಾಡಲಾಗಿದೆ ಎಂದರು.

ಮಾಗಡಿ ರಸ್ತೆಯಲ್ಲಿರುವ ಮಾಚೋಹಳ್ಳಿ ಶ್ರೀಜೋಡಿ ರುದ್ರೇಶ್ವರ ದೇವಾಲಯದಲ್ಲಿ ವೀರಭದ್ರ ಜಯಂತಿ ಅಂಗವಾಗಿ ಪ್ರಾತಃಕಾಲ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಿ ಬಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಇನ್ನುಳಿದಂತೆ ಕೆಂಪೇಗೌಡ ನಗರದಲ್ಲಿರುವ ಪುರಾತನ ಪ್ರಳಯ ಕಾಲದ ವೀರಭದ್ರ ದೇವಸ್ಥಾನ,ಕನ್ನಳ್ಳಿ ವೀರಭದ್ರೇಶ್ವರ ದೇವಸ್ಥಾನ,ತಿಂಡ್ಲು ವೀರಭದ್ರಸ್ವಾಮಿ ದೇವಾಲಯ,ಮಾಸ್ತೇನಹಳ್ಳಿ ವೀರಭದ್ರ ಕ್ಷೇತ್ರ ಹಾಗೂ ವಿವಿಧ ಸಂಘಟನೆಗಳು ವೀರಭದ್ರ ಜಯಂತಿಯನ್ನು ಆಚರಿಸಿದವು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 19 =
Remember me
