ಚನ್ನಪಟ್ಟಣ:ವಿಭಿನ್ನ ಸಾಧನೆಗಾಗಿ ತಾಲೂಕಿನ ರಾಂಪುರ ಗ್ರಾಮದ ಸಾಹಿತಿ ವಿಜಯ್ ರಾಂಪುರ 2020ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಅಂಚೆಪತ್ರದ ಒಂದೇ ಬದಿಯಲ್ಲಿ ಇಂಡಿಯಾ ಎಂಬ ಪದವನ್ನು 11856 ಬಾರಿ, 59325 ಅಕ್ಷರಗಳನ್ನು ಬಳಸಿ ಬರೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
14.5 ಸೆಂ.ಮೀ ಉದ್ದ ಹಾಗೂ 9.5 ಸೆಂ.ಮೀ ಅಗಲದ ಅಂಚೆಪತ್ರದಲ್ಲಿ ಅವರು ಇದನ್ನು ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಕಳಿಸಿದ್ದರು. ಸಂಸ್ಥೆ ಇವರ ಸಾಧನೆಯನ್ನು ಪರಿಶೀಲಿಸಿ ದಾಖಲು ಮಾಡಿ ಗೌರವಿಸಿದೆ.
ಇದನ್ನೂ ಓದಿಮನೆ ಹಾನಿ ಪರಿಹಾರ ವಿತರಣೆಯಲ್ಲಿ ನುಡಿದಂತೆ ನಡೆದ ಎಚ್​ಡಿಕೆ
ವಿಜಯ್ ರಾಂಪುರ ಸಾಹಿತಿಯಾಗಿ, ಸಾಂಸ್ಕೃತಿಕ ಸಂಘಟಕರಾಗಿ, ಖಾಸಗಿ ವಿದ್ಯಾಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ, ಜಾನಪದ ವಸ್ತುಗಳ ಸಂಗ್ರಹಕಾರರಾಗಿ, ಕಸಾಪ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಅಂಚೆಪತ್ರದ ಮೇಲಿನ ಬರಹಕ್ಕೆ ಈಗಾಗಲೇ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಹೊಂದಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ವಿಜಯ್ ರಾಂಪುರ, ದೇಶದ ಬಗ್ಗೆ ಯುವಜನತೆಗೆ ಅಭಿಮಾನ ಮೂಡಿಸುವ ಸದುದ್ದೇಶದಿಂದ ‘ಇಂಡಿಯಾ’ ಎಂಬ ಪದವನ್ನು ಅಂಚೆಪತ್ರದ ಒಂದು ಬದಿಯಲ್ಲಿ ಬರೆದಿದ್ದೆ. ಇದಕ್ಕಾಗಿ 33 ದಿನ 108 ಗಂಟೆ ಶ್ರಮಿಸಿದ್ದು, ಇದೀಗ ಈ ದಾಖಲೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವುದಕ್ಕೆ ಅತೀವ ಸಂತೋಷವಾಗಿದೆ. ಪ್ರತಿ ಸಾಲಿನ ಮಧ್ಯೆ ನನ್ನ ಹೆಸರನ್ನು ದಾಖಲಿಸಲಾಗಿತ್ತು ಎಂದು ತಿಳಿಸಿದ್ದಾರೆ.
ರಂಜಾನ್ ಮನೆಯಲ್ಲೇ ಆಚರಿಸಿ: ರಾಜ್ಯ ಸರ್ಕಾರದ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − sixteen =
Remember me
