ಕೊಡಗು:ಜಿಲ್ಲೆಯ ಕಾಫಿ ತೋಟವೊಂದರಲ್ಲಿ ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆಯೊಬ್ಬರು ಪಾರಾಗಿದ್ದು, ಈ ರೋಚಕ ಕ್ಷಣದ ದೃಶ್ಯ ವೈರಲ್​ ಆಗಿದೆ.
ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದಲ್ಲಿ ಗುರುವಾರ ಸಂಜೆ ಒಂಟಿಸಲಗ ಸಂಚರಿಸಿದೆ. ಗ್ರಾಮದ ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ಕಳ್ಳಹಳ್ಳ ನಿವಾಸಿ ಉಷಾ ಮನೆಗೆ ವಾಪಸ್​ ಬರುತ್ತಿದ್ದರು. ಆ ವೇಳೆ ಮಾರ್ಗ ಮಧ್ಯೆ ಒಂಟಿಸಲಗ ಎದುರಾಯ್ತು!
ಇದನ್ನೂ ನೋಡಿಪ್ರೇಯಸಿಯನ್ನೇ ಕೊಂದ ಮಾಜಿ ಲವರ್​.. ಟ್ರೈಂಗಲ್​ ಲವ್​ ಸ್ಟೋರಿ ದುರಂತ ಅಂತ್ಯ ಕಂಡಿದ್ಹೇಗೆ?
ವೇಗವಾಗಿ ಬರುತ್ತಿದ್ದ ಕಾಡಾನೆಯನ್ನ ಕಂಡ ಉಷಾ ಎದ್ನೋಬಿದ್ನೋ ಎಂದು ರಸ್ತೆ ಪಕ್ಕದ ತೋಟಕ್ಕೆ ನುಗ್ಗಿ ಆನೆ ಕಣ್ಣಿಂದ ಮರೆಯಾಗುವ ಮೂಲಕ ಸಾವಿನ ದವಡೆಯಿಂದ ಪಾರಾದರು. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ವೈರಲ್​ ಆಗಿದೆ.
ಈ ಭಾಗದಲ್ಲಿ ಕಾಡಾನೆಗಳು ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಆನೆಯಿಂದ ಮಹಿಳೆ ಬಚಾವ್​ ಆದ ದೃಶ್ಯ ನೋಡಲು ಕೆಳಗಿನ ಲಿಂಕ್​ ಕ್ಲಿಕ್​ ಮಾಡಿ.
ಈ ವಿಡಿಯೋ ನೋಡಿ
https://www.facebook.com/VVani4U/videos/894144247758899/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 4 =
Remember me
