ಬೆಂಗಳೂರು:ಓಣಂ ಹಬ್ಬದ ನಿಮಿತ್ತ ರಾಜ್ಯದಿಂದ ಕೇರಳಕ್ಕೆ ಕೆಎಸ್​ಆರ್​ಟಿಸಿ ವಿಶೇಷ ಬಸ್​ಗಳು ಸಂಚರಿಸಲಿವೆ. ಹಬ್ಬದ ನಿಮಿತ್ತ ಆಗಸ್ಟ್​ 24ರಿಂದ ಸೆಪ್ಟೆಂಬರ್​ 6ರವರೆಗೆ ಈ ವಿಶೇಷ ಬಸ್​​ಗಳ ವ್ಯವಸ್ಥೆ ಇರಲಿದೆ.
ಬೆಂಗಳೂರಿನಿಂದ ಕಣ್ಣೂರು, ಎರ್ನಾಕುಲಂ, ಕಾನ್ಹಂಗಾಡ್​, ಕಾಸರಗೋಡು, ಕೊಟ್ಟಾಯಂ, ಕಲ್ಲಿಕೋಟೆ, ಪಾಲಘಾಟ್​, ತ್ರಿಶೂರ, ತಿರುವನಂತಪುರಂ ಮತ್ತು ವಡಕರಾಗಳಿಗೆ ಬಸ್​ ತೆರಳಲಿದ್ದು, ಹಾಗೇ ಈ ಪ್ರದೇಶಗಳಿಂದಲೂ ಬೆಂಗಳೂರಿಗೆ ಬಸ್​ ಬರಲಿದೆ.ಇನ್ನು ಮೈಸೂರಿನಿಂದ ತಿರುವನಂತಪುರಂ, ಎರ್ನಾಕುಲಂ ಮತ್ತು ಕೊಟ್ಟಾಯಂಗೆ ಬಸ್​ ಬಿಡಲಾಗುವುದು ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ.ಇದನ್ನೂ ಓದಿ:ಐಪಿಎಲ್ ಭಾರತದಲ್ಲೇ ನಡೆಯಲಿ, ಹೈಕೋರ್ಟ್ ಮೆಟ್ಟಿಲೇರಿದ ಕ್ರಿಕೆಟ್ ಪ್ರೇಮಿ ವಕೀಲ!
ಹಾಗೇ, ಕರ್ನಾಟಕದಿಂದ ಕೇರಳಕ್ಕೆ ಹೋಗುವಾಗ ಕೇರಳ ಸರ್ಕಾರದ ಸೇವಾಸಿಂಧು ಪೋರ್ಟಲ್​​ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಕೇರಳದಿಂದ ಕರ್ನಾಟಕಕ್ಕೆ ಬರುವವರು ಕರ್ನಾಟಕದ ಸೇವಾಸಿಂಧು ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಹೇಳಲಾಗಿದೆ. ನೋಂದಣಿಯ ಗುರುತು ಇಲ್ಲದವರಿಗೆ ಬಸ್​ ಪ್ರಯಾಣಕ್ಕೆ ಅವಕಾಶ ಇಲ್ಲ ಎನ್ನಲಾಗಿದೆ.www.ksrtc.in ಮೂಲಕ ಈ ಬಸ್​​ಗಳಲ್ಲಿ ಮುಂಚಿತವಾಗಿಯೇ ಟಿಕೆಟ್​ ಕಾಯ್ದಿರಿಸಿಕೊಳ್ಳಬಹುದಾಗಿದೆ.
VIDEO: ಸ್ವಾಮಿ ನಿತ್ಯಾನಂದನ ಕೈಲಾಸದಲ್ಲಿ ಸ್ಥಾಪನೆಯಾಗಿದೆ ಹಿಂದು ರಿಸರ್ವ್​ ಬ್ಯಾಂಕ್​; ಗಣೇಶ್​ ಚೌತಿಯಂದು ನೋಟು ಬಿಡುಗಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − three =
Remember me
