ಬೆಂಗಳೂರು:ರಾಜ್ಯದ ಜನತೆಗೆ ಇದು ಶಾಕಿಂಗ್ ನ್ಯೂಸ್ ಎಂದರೂ ತಪ್ಪೇನಲ್ಲ. ಏಕೆಂದರೆ ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಮತ್ತೆ ಹೆಚ್ಚಿಸಿದೆ. ಆ ಮೂಲಕ ಜನರಿಗೆ ಶಾಕ್​ ಕೊಟ್ಟಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್​ಸಿ) ಈ ಏರಿಕೆಯನ್ನು ಮಾಡಿದೆ.
ಇದೇ ಏಪ್ರಿಲ್​ನಲ್ಲಿ ವಿದ್ಯುತ್ ಬೆಲೆ ಏರಿಕೆ ಬಿಸಿ ಅನುಭವಿಸಿದ್ದ ಗ್ರಾಹಕರು ಈಗ ಮತ್ತೆ ಇನ್ನೊಮ್ಮೆ ದರ ಹೆಚ್ಚಳದ ಹೊರೆ ಹೊರುವಂತಾಗಿದೆ. ಈ ಸಲ ಕೆಇಆರ್​​ಸಿ ಪ್ರತಿ ಯುನಿಟ್​ಗೆ 24 ಪೈಸೆಯಿಂದ 43 ಪೈಸೆ ತನಕ ಏರಿಕೆ ಮಾಡಿದೆ.
ಇಂಧನ ಹೊಂದಾಣಿಕೆ ಮೂಲಕ ಪ್ರತಿ 3 ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡಲು ಕೇಂದ್ರೀಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸೂಚನೆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ನಡೆಯುತ್ತಿದೆ ಎಂದು ಕೆಇಆರ್​ಸಿ ಆದೇಶ ಸ್ಪಷ್ಟಪಡಿಸಿದೆ. ಈ ಬೆಲೆಗಳು 2023ರ ಮಾರ್ಚ್ ಅಂತ್ಯದ ತನಕ ಜಾರಿಯಲ್ಲಿರುತ್ತವೆ ಎಂದು ಆದೇಶದಲ್ಲಿ ತಿಳಿಸಿದೆ.
ಕಳೆದ ಏಪ್ರಿಲ್​ನಲ್ಲಿ ಪ್ರತಿ ಯುನಿಟ್​ಗೆ ಸರಾಸರಿ 35 ಪೈಸೆ ಏರಿಕೆ ಮಾಡಲಾಗಿತ್ತು. ಹಾಲಿ ಪರಿಷ್ಕರಣೆಯಿಂದ 6 ತಿಂಗಳ ಅವಧಿಯಲ್ಲಿ 70 ಪೈಸೆ ಏರಿಕೆ ಆದಂತಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯುನಿಟ್ ವಿದ್ಯುತ್ ಬೆಲೆ 40 ರಿಂದ 43 ಪೈಸೆ ಹೆಚ್ಚಳವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + fifteen =
Remember me
