ನವದೆಹಲಿ:ಇಡೀ ಜಗತ್ತಿನ ಗಮನ ಸೆಳೆದಿರುವ ಭಾರತದ ಲೋಕಸಭಾ ಚುನಾವಣೆ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಆ ಮೂಲಕ ಸತತ ಮೂರನೇ ಬಾರಿ ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೇರುವುದೇ? ಅಥವಾ ವಿಪಕ್ಷಗಳ ಇಂಡಿ ಮೈತ್ರಿಕೂಟ ಖಾತೆ ತೆರೆಯುವುದೇ ಎಂಬ ಪ್ರಶ್ನೆಗೂ ಸ್ಪಷ್ಟ ಉತ್ತರ ಸಿಗಲಿದೆ. ಇನ್ನು ಫಲಿತಾಂಶಕ್ಕೂ ಮೊದಲೇ ದ್ವೇಷದ ಕಿಡಿ ಸ್ಪೋಟಿಸಿದೆ. ಮತ ಎಣಿಕೆಗೆ ಕೆಲವೇ ಗಂಟೆಗಳಿರುವಾಗ ಆಂದೋಲನ, ಬಲಿದಾನಕ್ಕೆ ಸಿದ್ಧರಾಗಿ ಎಂದು ದೇಶದ ಜನತೆಗೆ ಕರೆ ನೀಡುವ ಮೂಲಕ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಹಿಂಸೆಗೆ ಪ್ರಚೋದಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.
ದೇಶಾದ್ಯಂತ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದ್ದು, ಮಧ್ಯಾಹ್ನ 12ರ ಹೊತ್ತಿಗೆ ಫಲಿತಾಂಶದ ಚಿತ್ರಣ ಹೊರಬೀಳಲಿದೆ. ಒಟ್ಟು 543 ಅಭ್ಯರ್ಥಿಗಳ ಪೈಕಿ 272 ಸ್ಥಾನ ಗೆದ್ದವರು ಸಂಸತ್​ನ ಚುಕ್ಕಾಣಿ ಹಿಡಿಯಲಿದ್ದಾರೆ.
7 ಹಂತದ ಮತದಾನ:ಒಟ್ಟಾರೆ 543 ಲೋಕಸಭಾ ಕ್ಷೇತ್ರಗಳಿಗೆ ಏ.19ರಿಂದ ಜೂ.1ರವರೆಗೆ ಏಳು ಹಂತದಲ್ಲಿ ಮತದಾನ ನಡೆದಿತ್ತು. ಇದರ ಜತೆಯಲ್ಲೇ ಒಡಿಶಾ ಮತ್ತು ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ನಡೆದಿತ್ತು. ಈ 2 ರಾಜ್ಯಗಳ ಜತೆಗೆ ಇತರ ಕೆಲವು ರಾಜ್ಯಗಳ ವಿಧಾನಸಭೆ ಉಪಚುನಾವಣೆ ಫಲಿತಾಂಶವೂ ಮಂಗಳವಾರ ಹೊರಬೀಳಲಿದೆ.
ಮಹತ್ವವೇಕೆ:ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಕಳಂಕ ರಹಿತ ಆಡಳಿತ ಎನ್​ಡಿಎ ಮೈತ್ರಿಕೂಟದ ಟ್ರಂಪ್ ಕಾರ್ಡ್. ಮತ್ತೆ ಗೆದ್ದರೆ ಮುಂದಿನ ಐದು ವರ್ಷದಲ್ಲಿ ಆರ್ಥಿಕತೆಯಲ್ಲಿ ಭಾರತವನ್ನು ನಂ.3ರ ಸ್ಥಾನಕ್ಕೆ ಕೊಂಡೊಯ್ಯುವ ಜತೆಗೆ ವಿಕಸಿತ ಭಾರತವನ್ನು ಕಟ್ಟುವ ಸಂಕಲ್ಪವನ್ನು ಪ್ರಧಾನಿ ತೊಟ್ಟಿರುವುದು ಗಮನ ಸೆಳೆದಿದೆ. ಇದೇ ಹೊತ್ತಲ್ಲಿ ಕರ್ನಾಟಕದಲ್ಲಿ ಕೊಟ್ಟಂತಹ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಕಾಂಗ್ರೆಸ್ ಲೋಕಸಭೆ ಕಣದಲ್ಲಿ ಪ್ರಯೋಗಿಸಿದೆ. ಅದೇ ರೀತಿ ಕಾಂಗ್ರೆಸ್ ಒಳಗೊಂಡ ವಿಪಕ್ಷಗಳ ಇಂಡಿ ಒಕ್ಕೂಟದ ಸಂಕಲ್ಪವೂ ನರೇಂದ್ರ ಮೋದಿಯನ್ನು ಸೋಲಿಸುವುದೇ ಆಗಿದೆ. ಅಂತಿಮವಾಗಿ ಯಾರ ಕನಸು ಈಡೇರಲಿದೆ ಎಂಬ ಪ್ರಶ್ನೆಗೂ ಮಂಗಳವಾರ ಉತ್ತರ ಸಿಗಲಿದೆ. ಮೊದಲನೇ ಪುಟದಿಂದ…
ಕೌಂಟಿಂಗ್​ಗೆ ರಾಜ್ಯ ಸಜ್ಜು:ಕರ್ನಾಟಕದಲ್ಲೂ 28 ಕ್ಷೇತ್ರಗಳ ಲೋಕಸಭೆ ಚುನಾವಣೆ ಮತ ಎಣಿಕೆಗೆ ವೇದಿಕೆ ಸಜ್ಜಾಗಿದೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. ಮಧ್ಯಾಹ್ನ 2 ಗಂಟೆ ನಂತರ ಫಲಿತಾಂಶದ ಚಿತ್ರಣ ಹೊರಬೀಳಲಿದ್ದು, ಬಹುತೇಕ ಸಂಜೆಯೊಳಗೆ ಜನಾದೇಶ ಯಾರಿಗೆ ಎಂಬುದು ಸ್ಪಷ್ಟವಾಗಲಿದೆ.
ಯಾರೆಲ್ಲ ಹಾಜರು?:ಮತ ಎಣಿಕೆಗೆ ಸೂಕ್ಷ್ಮ ವೀಕ್ಷಕ, ಮತ ಎಣಕೆ ಮೇಲ್ವಿಚಾರಕರು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. ಗುರುತಿನ ಚೀಟಿ ಕಡ್ಡಾಯ ಮಾಡಲಾಗಿದೆ. ಮತ ಎಣಿಕೆ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕೆಲವು ಕಡೆ ವೀಡಿಯೋಗ್ರಫಿ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಲ್ಲೆಲ್ಲಿ?:ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ.
ನಿಷೇಧಾಜ್ಞೆ ಜಾರಿ:ಮತ ಎಣಿಕೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 6 ರಿಂದ ಜೂ. 5ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ಏನಾದರೆ ಏನಾಗುತ್ತೆ?
ಎನ್​ಡಿಎ ಗೆದ್ದರೆ ಮೋದಿ ಮತ್ತೆ ಪ್ರಧಾನಿ
9ರಂದು ಪ್ರಮಾಣವಚನ ಸಾಧ್ಯತೆ
ವಿಕಸಿತ ಭಾರತ ನಿರ್ವಣಕ್ಕೆ ಚಾಲನೆ
1 ದೇಶ, 1 ಚುನಾವಣೆಗೆ ಗ್ರೀನ್ ಸಿಗ್ನಲ್
ಇಂಡಿ ಗೆದ್ದರೆ ಪ್ರಧಾನಿ ಗಾದಿ ಸಸ್ಪೆನ್ಸ್
ಮಿತ್ರಕೂಟ ನಡೆ ಮೇಲೆ ಕುತೂಹಲ
ರಾಹುಲ್, ದೀದಿ, ಕೇಜ್ರಿ ನಡುವೆ ಫೈಟ್
08 ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಶುರು 543,  ಒಟ್ಟು ಸ್ಥಾನ 272ಸರಳ ಬಹುಮತ
ಹಿಂಸೆಗೆ ಕರೆಕೊಟ್ರಾ ಅಖಿಲೇಶ್?
ಮತದಾನೋತ್ತರ ಸಮೀಕ್ಷೆ ನಿರಾಕರಿಸುವ ಭರದಲ್ಲಿ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ವಿವಾದ ಸೃಷ್ಟಿಸಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಆಂದೋಲನ, ಬಲಿದಾನಕ್ಕೆ ಸಿದ್ಧರಾಗಿ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ. ಆ ಮೂಲಕ ಫಲಿತಾಂಶದ ವಿರುದ್ಧ ಹೋರಾಟ ನಡೆಸುವ ಪರೋಕ್ಷ ಸುಳಿವು ಹೊರಹಾಕಿದ್ದಾರೆ.
ಸಮೀಕ್ಷೆ ದಿಕ್ಸೂಚಿ
2024ರ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಕೇಂದ್ರದಲ್ಲಿ ಮತ್ತೆ ಎನ್​ಡಿಎ ಸರ್ಕಾರ ಖಚಿತ. ಚಾಣಕ್ಯ, ದೈನಿಕ್ ಭಾಸ್ಕರ್, ಇಂಡಿಯಾ ನ್ಯೂಸ್, ಜನ್ ಕಿ ಬಾತ್ ಸೇರಿದಂತೆ 7 ಸಂಸ್ಥೆಗಳ ಸಮೀಕ್ಷೆ ಎನ್​ಡಿಎ ಕನಿಷ್ಠ 342ರಿಂದ ಗರಿಷ್ಠ 400 ಸ್ಥಾನ ಗೆಲ್ಲಲಿದೆ. ಅದೇ ರೀತಿ ಇಂಡಿ ಕೂಟ 118ರಿಂದ ಗರಿಷ್ಠ 201 ಸ್ಥಾನ ಗೆಲ್ಲಬಹುದೆಂದು ಭವಿಷ್ಯ ನುಡಿಯಲಾಗಿದೆ.
ಕರ್ನಾಟಕದಲ್ಲೇನು?
ಸಮೀಕ್ಷೆಗಳ ಪ್ರಕಾರ ಕನಾಟಕ ದಲ್ಲೂ ಎನ್​ಡಿಎ ಮುಂದಿದೆ. ಇಂಡಿಯಾ ಟುಡೇ ಸೇರಿದಂತೆ 4 ಸಮೀಕ್ಷೆಗಳ ಪ್ರಕಾರ ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಕನಿಷ್ಠ 19ರಿಂದ 23 ಸ್ಥಾನ ಗೆದ್ದರೆ, ಕಾಂಗ್ರೆಸ್ 3ರಿಂದ 8 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ.
ಷೇರುಪೇಟೆ ಜಿಗಿತ
ಮತದಾನೋತ್ತರ ಸಮೀಕ್ಷೆ ಎನ್​ಡಿಎಗೆ ಜೈಕಾರ ಹಾಕಿದ ಬೆನ್ನಲ್ಲೇ ಭಾರತೀಯ ಷೇರುಪೇಟೆ ಭಾರಿ ಜಿಗಿತ ಕಂಡಿದೆ. ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ರೂ. ಏರಿಕೆ ಆಗಿದೆ. ಸೋಮವಾರ ಸೆನ್ಸೆಕ್ಸ್ ಬರೋಬ್ಬರಿ 2,507.47 ಅಂಶ ಏರಿಕೆಯಾಗಿ 76,468ರಲ್ಲಿ ಕೊನೆಗೊಂಡರೆ ನಿಫ್ಟಿ 733 ಅಂಶ ಏರಿಕೆ ಆಗಿ 23,263 ಅಂಕದಲ್ಲಿ ವಹಿವಾಟು ಮುಗಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + four =
Remember me
