ಹಾಸನ:ಹಾಸನ ಜಿಲ್ಲೆಯ ಸಕಲೇಶಪುರ ಮಾರ್ಗ ಮಂಗಳೂರಿಗೆ ತೆರಳುವ ರೈಲು ಸಂಚಾರಕ್ಕೆ ಇದೀಗ ಮತ್ತೊಮ್ಮೆ ತೊಡಕು ಉಂಟಾಗಿದೆ. ಇತ್ತೀಚೆಗಷ್ಟೇ ಸಕಲೇಶಪುರದಲ್ಲಿ ರೈಲಿನ ಹಳಿ ಮೇಲೆ ಗುಡ್ಡ ಕುಸಿದು, ಸಂಚಾರಕ್ಕೆ ಭಾರೀ ತೊಂದರೆಯಾಗಿತ್ತು. ಇದೀಗ ಮತ್ತೆ ಅದೇ ರೀತಿ ಭೂಕುಸಿತ ಉಂಟಾಗಿ, ರೈಲು ಸಂಚಾರ ದಿಢೀರ್ ಸ್ಥಗಿತಗೊಂಡಿದೆ.
ಇದನ್ನೂ ಓದಿ:ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರು ಕೂಡ ಹಿಂದೂಗಳೇ: ವಚನಾನಂದ ಶ್ರೀ
ಹಾಸನದ ಸಕಲೇಶಪುರ ತಾಲ್ಲೂಕಿನ ಆಚಂಗಿ-ದೊಡ್ಡಸಾಗರ ಬಳಿ ಘಟನೆ ಸಂಭವಿಸಿದೆ. ಕಳೆದ ಒಂದು ವಾರದ ಹಿಂದೆಯಷ್ಟೇ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿತ್ತು. ತಕ್ಷಣವೇ ಮಣ್ಣು ತೆರವು ಕಾರ್ಯಾಚರಣೆಗೊಳಿಸಿದ ಅಧಿಕಾರಿಗಳು, ರೈಲ್ವೆ ಸಂಚಾರಕ್ಕೆ ಗ್ರೀನ್​​ ಸಿಗ್ನಲ್​ ಕೊಟ್ಟಿದ್ದರು. ಇದೀಗ ಅದೇ ಸ್ಥಳದಲ್ಲಿ ಮತ್ತೇ ಭೂಕುಸಿತವಾಗಿದ್ದು, ಮಂಗಳೂರಿನತ್ತ ಹೊರಟಿದ್ದ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲು, ಕೆಲವು ಗಂಟೆಗಳಿಂದ ನಿಂತಲ್ಲೇ ನಿಂತಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಸ್ವಾತಂತ್ರ್ಯ ದಿನಾಚರಣೆ, ವರಮಹಾಲಕ್ಷ್ಮೀ ಹಬ್ಬ ಸೇರಿದಂತೆ ಸರಣಿ ರಜೆ ಪಡೆದವರು ತಮ್ಮ ಊರಿಗೆ ಹೋಗುವ ಆಸೆಯಿಂದ ರೈಲು ಹತ್ತಿ, ಸೀಟಿನಲ್ಲಿ ವಿಶ್ರಾಂತಿಸುತ್ತಿದ್ದರು. ಆದ್ರೆ, ಸಕಲೇಶಪುರ ಮಾರ್ಗದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿದೆ ಎಂದು ಮಾಹಿತಿ ನೀಡಿರುವ ರೈಲ್ವೆ ಇಲಾಖೆ, ಇದೀಗ ಬೆಂಗಳೂರು-ಮಂಗಳೂರು ನಡುವಿನ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.
1 ಗ್ಲಾಸ್​ ಜ್ಯೂಸ್​… ಒಲಿಂಪಿಕ್ ಫೈನಲ್​ ಹಿಂದಿನ ರಾತ್ರಿ ನಡೆದಿದ್ದೇನು? ಅಚ್ಚರಿ ಮೂಡಿಸುತ್ತೆ ಈ ವರದಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 + seven =
Remember me
