ಬೆಂಗಳೂರು:ವ್ಯಕ್ತಿಯೊಬ್ಬರ ಜನ್ಮದಿನಾಚರಣೆಯ ಸಲುವಾಗಿ ಮನೆಗೆ ತೆರಳಿದ್ದ ಸಂಸ್ಥೆಯೊಂದರ ಇಬ್ಬರು ಕೆಲಸಗಾರರ ಪೈಕಿ ಒಬ್ಬನ ದೇಹ ಛಿದ್ರಗೊಂಡು ಸಾವಿಗೀಡಾಗಿದ್ದರೆ, ಮತ್ತೊಬ್ಬ ಗಾಯಗೊಂಡಿದ್ದಾನೆ. ತಮಿಳುನಾಡು ಮೂಲದ ಪರಪ್ಪನ ಅಗ್ರಹಾರ ನಿವಾಸಿಯಾದ ದಿನೇಶ್ (32) ಮೃತಪಟ್ಟ ವ್ಯಕ್ತಿ. ಮಹದೇಶ್​ ಗಾಯಾಳು. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಿಚ್ಮಂಡ್ ಸರ್ಕಲ್ ಬಳಿ ಇರುವ ಖಾಸಗಿ ಅಪಾರ್ಟ್​ಮೆಂಟ್​ ಆವರಣದಲ್ಲಿ ಈ ಅವಘಡ ಸಂಭವಿಸಿದೆ.
ಅಪಾರ್ಟ್​ಮೆಂಟ್​ನ ನಿವಾಸಿಗರು ಕುಟುಂಬ ಸದಸ್ಯರೊಬ್ಬರ ಜನ್ಮದಿನಾಚರಣೆ ಸಲುವಾಗಿ ಮೈಪಾರ್ಟಿ.ಕಾಂ ಮೂಲಕ ಬರ್ತ್​ಡೇ ಅಲಂಕಾರಕ್ಕಾಗಿ ಬಲೂನ್ ಅಳವಡಿಸುವವರನ್ನು ಆಹ್ವಾನಿಸಿದ್ದರು. ಹೀಗಾಗಿ ದಿನೇಶ್​, ತನ್ನೊಂದಿಗೆ ಮಹದೇಶ್​ ಎಂಬಾತನನ್ನು ಕರೆದುಕೊಂಡು ಆ ಅಪಾರ್ಟ್​ಮೆಂಟ್​ಗೆ ತೆರಳಿದ್ದ.
ಅಪಾರ್ಟ್​ಮೆಂಟ್​ನಲ್ಲಿನ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಮೇಲೆ ಸಿಲಿಂಡರ್ ಇಟ್ಟುಕೊಂಡು ಬಲೂನ್‌ಗೆ ಗ್ಯಾಸ್ ಫಿಲ್ ಮಾಡುತ್ತಿರುವ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ದಿನೇಶ್ ದೇಹ ಛಿದ್ರವಾಗಿ, ಗಂಭೀರ ಗಾಯಗೊಂಡು ಸಾವಿಗೀಡಾಗಿದ್ದಾರೆ. ಸಹ ಕೆಲಸಗಾರ ಮಹದೇಶ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಶೋಕನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ದಿನೇಶ್ ಹಾಗೂ ಮಹದೇಶ್ ನಾಲ್ಕು ವರ್ಷಗಳಿಂದ ಮೈ ಪಾರ್ಟಿ ಡಾಟ್‌ಕಾಮ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

ಗರ್ಭಿಣಿಯರು ಕರೊನಾ ಲಸಿಕೆ ತೆಗೆದುಕೊಳ್ಳಬಹುದೇ?; ಕೇಂದ್ರ ಸರ್ಕಾರದ ಸ್ಪಷ್ಟನೆ ಹೀಗಿದೆ…

ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

ಕೋವಿಡ್​ನಿಂದ ಸತ್ತ 75 ದಿನಗಳ ಬಳಿಕ ನಡೆಯಿತು ಶವಸಂಸ್ಕಾರ; ಹಣಕ್ಕಾಗಿ ಹೆಣ ಇಟ್ಕೊಂಡ್ರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 2 =
Remember me
