|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಕುಲಕಸುಬು ಆಧಾರಿತ ಪಾರಂಪರಿಕ ಕೌಶಲ ಉಳಿಸುವುದರೊಂದಿಗೆ ಉದ್ಯೋಗಾವಕಾಶವನ್ನೂ ಸೃಷ್ಟಿಸಲು ಸರ್ಕಾರ ‘ಒಂದು ಜಿಲ್ಲೆ ಒಂದು ಕೌಶಲ’ ಎಂಬ ವಿನೂತನ ಕಾರ್ಯಕ್ರಮವನ್ನು ರೂಪಿಸುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಕಸುಬು ಆಧಾರಿತ ಕಲೆಗಳಿವೆ. ಆದರೆ, ಇಂದಿನ ಸ್ಪರ್ಧಾ ಪ್ರಪಂಚಕ್ಕೆ ತಕ್ಕಂತೆ ತಂತ್ರಜ್ಞಾನ ಬಳಕೆ ಹಾಗೂ ಹೊಸ ವಿನ್ಯಾಸಗಳಿಲ್ಲದೆ ನಶಿಸುತ್ತಿವೆ. ಇಂತಹ ಕಲೆಯನ್ನು ಉಳಿಸಲು ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ರಾಜ್ಯ ಕೌಶಲಾಭಿವೃದ್ಧಿ ನಿಗಮದ ಮೂಲಕ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಪಾರಂಪರಿಕ ಕರ:ಕುಶಲ ವಸ್ತುಗಳು ಸ್ಪರ್ಧಾ ಪ್ರಪಂಚದಲ್ಲಿ ಪೈಪೋಟಿ ನೀಡಲಾಗದೆ ಸೋಲುತ್ತಿವೆ. ಅದರಿಂದ ಇವುಗಳನ್ನು ನಂಬಿದ ಕುಶಲಕರ್ವಿುಗಳು ಜೀವನ ನಿರ್ವಹಣೆಗೆ ಪರ್ಯಾಯ ಉದ್ಯೋಗ ಹುಡುಕಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಯುವಜನರಿಗೆ ಧೈರ್ಯ ಹಾಗೂ ವಿಶ್ವಾಸವನ್ನು ತುಂಬುವ ಮೂಲಕ ಪಾರಂಪರಿಕ ಕಲೆ ಉಳಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಕಾರ್ಯಕ್ರಮದ ಮೂಲಕ ಕೈಗಾರಿಕೆ ಮತ್ತು ಕೃಷಿಗೆ ಆದ್ಯತೆ ನೀಡುತ್ತಿದೆ. ಕೇಂದ್ರ ಸರ್ಕಾರದ ವೋಕಲ್ ಫಾರ್ ಲೋಕಲ್ ಎಂಬ ಘೋಷಣೆಗೆ ತಕ್ಕಂತೆ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮ ಅನುಷ್ಠಾನವಾಗುತ್ತಿದೆ. ಅದೇ ಮಾದರಿಯಲ್ಲಿ ಕೌಶಲಾಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಿದೆ.
ಯಾವಾಗ ಆರಂಭ?:ಪ್ರತಿವರ್ಷ ಜುಲೈ 15ನ್ನು ವಿಶ್ವ ಯುವ ಕೌಶಲ ದಿನವನ್ನಾಗಿ ಆಚರಿಸಲಾಗುತ್ತದೆ. ಅದೇ ದಿನ ‘ಒಂದು ಜಿಲ್ಲೆ ಒಂದು ಕೌಶಲ’ಯೋಜನೆ ಆರಂಭಿಸಲಾಗುತ್ತದೆ. ನಂತರ ಪ್ರತಿ ಜಿಲ್ಲೆಯಲ್ಲಿ ತರಬೇತಿ ಕಾರ್ಯಕ್ರಮಗಳು ಶುರುವಾಗಲಿವೆ.
ಜಿಲ್ಲೆಗೆ ನೂರು ಜನ:ಪ್ರತಿ ಜಿಲ್ಲೆಯಲ್ಲಿ ನೂರು ಜನರನ್ನು ಗುರುತಿಸಿ ತರಬೇತಿ ನೀಡಲಾಗುತ್ತದೆ. ಅವರು ಉದ್ಯಮಿಗಳಾಗಿಯೂ ಪರಿವರ್ತನೆ ಆಗುವ ಮೂಲಕ ಉದ್ಯೋಗಗಳನ್ನು ನೀಡಬಹುದಾಗಿದೆ. ನೂರು ಜನ ತಲಾ ಹತ್ತು ಜನರಿಗೆ ಕೆಲಸ ಕೊಟ್ಟರೂ ಒಂದು ಜಿಲ್ಲೆಯಲ್ಲಿ ಪಾರಂಪರಿಕ ಕಲೆಯನ್ನು ಕಾಪಾಡಲು ಸಾವಿರ ಜನ ಸಿಕ್ಕಂತಾಗುತ್ತದೆ. ಆ ಮೂಲಕ ಉದ್ಯಮ ಬೆಳೆಯಲು ಮತ್ತು ಕಲೆ ಉಳಿಯಲು ಸಹಾಯ ಆಗುತ್ತದೆ. ಮೊದಲ ಹಂತದಲ್ಲಿ 31 ಜಿಲ್ಲೆಗಳಿಂದ 3,100 ಜನರಿಗೆ ತರಬೇತಿ ನೀಡಲಾಗುತ್ತದೆ.

ತಾಂತ್ರಿಕತೆಯನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ಎಲ್ಲೆಡೆ ಬಳಸಿಕೊಳ್ಳಬೇಕಾಗುತ್ತದೆ. ಉದ್ಯೋಗಗಳ ಸೃಷ್ಟಿಗೆ ಕೌಶಲ ಅತ್ಯಂತ ಅಗತ್ಯ. ಆದ್ದರಿಂದ ‘ಒಂದು ಜಿಲ್ಲೆ ಒಂದು ಕೌಶಲ’ ಯೋಜನೆ ರೂಪಿಸಲಾಗಿದೆ.
|ಡಾ.ಸಿ.ಎನ್. ಅಶ್ವತ್ಥನಾರಾಯಣಕೌಶಲಾಭಿವೃದ್ಧಿ ಸಚಿವ
ಕುಶಲಕರ್ವಿುಗಳಿಗೆ ತರಬೇತಿ ಜತೆಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತದೆ. ಆ ಮೂಲಕ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇಡೀ ದೇಶದಲ್ಲಿ ಇದೊಂದು ವಿನೂತನ ಯೋಜನೆೆ.
|ಅಶ್ವಿನ್​ಗೌಡಕೌಶಲಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ
ಪ್ರಾದೇಶಿಕ ಕಲೆಗಳ ಗುರುತು:ಜಿಲ್ಲಾ ಪಂಚಾಯಿತಿಗಳ ಸಿಇಒಗಳ ಅಧ್ಯಕ್ಷತೆಯಲ್ಲಿ ಕೌಶಲಾಭಿವೃದ್ಧಿ ಅಧಿಕಾರಿ ಸೇರಿದಂತೆ ಅಧಿಕಾರಿಗಳ ತಂಡವನ್ನು ಪ್ರತಿ ಜಿಲ್ಲೆಯಲ್ಲಿ ರಚನೆ ಮಾಡಲಾಗಿದೆ. ಆ ತಂಡಗಳು ಆಯಾ ಜಿಲ್ಲೆಯಲ್ಲಿರುವ ಕೌಶಲವನ್ನು ಗುರುತಿಸುತ್ತವೆ. ಈಗ ಹದಿನೆಂಟು ಜಿಲ್ಲೆಗಳಿಂದ ತರಬೇತಿ ನೀಡಬೇಕಾದ ಕೌಶಲಗಳನ್ನು ಗುರುತಿಸಲಾಗಿದೆ. ಈ ತಿಂಗಳ ಅಂತ್ಯಕ್ಕೆ ಉಳಿದ ಜಿಲ್ಲೆಗಳ ಮಾಹಿತಿಯೂ ಕೌಶಲಾಭಿವೃದ್ಧಿ ನಿಗಮದ ಕೈ ಸೇರಲಿದೆ.
ಏನು ತರಬೇತಿ?:ಕೌಶಲಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್​ಗೌಡ ಅವರು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಜತೆ ಚರ್ಚೆ ನಡೆಸಿ ಯುವ ಸಮುದಾಯಕ್ಕೆ ಕೌಶಲ ನೀಡುವ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ‘ಒಂದು ಜಿಲ್ಲೆ ಒಂದು ಕೌಶಲ’ ಯೋಜನೆ. ಜಿಲ್ಲೆಗಳಲ್ಲಿ ಗುರುತಿಸಿರುವ ಪಾರಂಪರಿಕ ಕಲೆಗಳಿಗೆ ಅದೇ ವಿಷಯಪರಿಣತರನ್ನು ಕರೆಯಿಸಿ ತರಬೇತಿ ನೀಡಲಾಗುತ್ತದೆ. ಇತ್ತೀಚೆಗೆ ವಿಶ್ವಕರ್ಮ ಸೇರಿ ವಿವಿಧ ಸಮುದಾಯಗಳ ಜತೆ ಚರ್ಚೆ ನಡೆಸಿದಾಗ ಹೊಸ ಹೊಸ ವಿನ್ಯಾಸ, ತಂತ್ರಜ್ಞಾನ, ಯಂತ್ರೋಪಕರಣಗಳ ಬಳಕೆಯ ತರಬೇತಿ ಬಗ್ಗೆ ಮನವಿ ಮಾಡಿದ್ದಾರೆ. ಹೀಗಾಗಿ ಜಿಲ್ಲೆಗೊಂದು ಕೌಶಲ ಗುರುತಿಸಲಾಗಿದೆ.
ಆರ್ಥಿಕ ನೆರವು:ತರಬೇತಿ ಜತೆಗೆ ಉದ್ಯಮ ಸ್ಥಾಪನೆಗೆ ಆರ್ಥಿಕ ಸಹಾಯವನ್ನೂ ಸರ್ಕಾರ ಮಾಡುತ್ತದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಲ್ಲಿ ಶೇ.35 ರಷ್ಟು ಸಬ್ಸಿಡಿಯೊಂದಿಗೆ 50 ಲಕ್ಷ ರೂ.ಗಳ ತನಕ ಸಾಲ ಸೌಲಭ್ಯ ಸಿಗುತ್ತದೆ. ಅದನ್ನು ತರಬೇತಿ ಪಡೆಯುವವರಿಗೆ ಕೊಡಿಸಲಿದೆ. ಅದರೊಂದಿಗೆ ಕೇಂದ್ರ ಖಾದಿ ಮಂಡಳಿಯ ಜತೆಗೂ ಮಾತುಕತೆ ನಡೆಸಲಾಗಿದ್ದು, ಘಟಕ ಸ್ಥಾಪನೆಗೆ ಮಂಡಳಿ ಸಹಾಯ ಮಾಡಲಿದೆ.
ತರಬೇತಿ ಕೊಟ್ಟು ಮಧ್ಯದಲ್ಲಿ ಕೈಬಿಟ್ಟರೆ ಮತ್ತೆ ನಿರುದ್ಯೋಗಿಗಳಾಗುತ್ತಾರೆ. ಸಾಲದ ಹೊರೆಯೂ ಬರುತ್ತದೆ. ಆದ್ದರಿಂದ ಮೂರು ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ರೂಪಿಸಲಾಗುತ್ತಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − two =
Remember me
