| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿ ಕರೊನಾ ಸಂಕಷ್ಟದ ಸರಣಿ ಮುಂದುವರಿದಿರುವಂತೆಯೇ ಆರ್ಥಿಕ ಹೊರೆ ತಾಳಲಾರದೆ ಲಕ್ಷಕ್ಕೂ ಅಧಿಕ ಅಂಗಡಿ ಮುಂಗಟ್ಟಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಇದರ ಜತೆಗೆ, ಕರೊನಾದ ಒಟ್ಟಾರೆ ಪರಿಣಾಮವಾಗಿ ನಿರುದ್ಯೋಗ ಪ್ರಮಾಣ ಶೇ.228.2 ಹೆಚ್ಚಳವಾಗಿದೆ.
ವಿವಿಧ ವಾಣಿಜ್ಯೋದ್ಯಮ ಸಂಘಟನೆಗಳು ನಡೆಸಿರುವ ಆಂತರಿಕ ಸಮೀಕ್ಷೆಗಳು ರಿಟೇಲ್ ವಲಯಕ್ಕೆ ತಟ್ಟಿರುವ ಸಮಸ್ಯೆಗಳ ಭೀಕರತೆ ಅನಾವರಣಗೊಳಿಸಿವೆ. ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗಿಂತ ರಿಟೇಲ್ ವಲಯಕ್ಕೆ ತಟ್ಟಿರುವ ಆಘಾತ ಹೆಚ್ಚಾಗಿದೆ. ಯಾವ ಪ್ರದೇಶಕ್ಕೆ ಹೋದರೂ ಅಂಗಡಿಗಳು ಮುಚ್ಚಿರುವುದು ಕಂಡುಬರುತ್ತದೆ.
ಪೂರೈಕೆ ಸರಪಳಿ ಸ್ಥಗಿತ: ಅಂಗಡಿಗಳು ನಡೆಯಬೇಕೆಂದರೆ ಉತ್ಪಾದನೆಯಾಗುವ ವಸ್ತುಗಳ ಸರಬರಾಜು ಇರಬೇಕು. ಒಂದೆಡೆ ಕಾರ್ವಿುಕರ ಕೊರತೆಯಿಂದ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಸಣ್ಣ ಪ್ರಮಾಣದ ಉತ್ಪಾದನೆಯಾದರೂ ಸಾಗಾಟಕ್ಕೆ ಸಾರಿಗೆ ಉದ್ಯಮ ಚೇತರಿಸಿಕೊಂಡಿಲ್ಲ.
ಬಾಗಿಲು ಮುಚ್ಚುತ್ತಿರುವ ಅಂಗಡಿಗಳು ಒಂದೆಡೆಯಾದರೆ ಬೀದಿ ಬದಿ ವ್ಯಾಪಾರ ಮಾಡಿಕೊಂಡಿದ್ದವರ ಪೈಕಿ ವ್ಯಾಪಾರ ಸ್ಥಗಿತಗೊಳಿಸಿರುವವರ ಲೆಕ್ಕ ಸಿಗುತ್ತಿಲ್ಲ. ಏಕೆಂದರೆ ಇವರೆಲ್ಲ ಅಸಂಘಟಿತ ವಲಯದವರಾಗಿದ್ದಾರೆ. ಅಂದಾಜಿನ ಪ್ರಕಾರ ಐದರಿಂದ ಆರು ಲಕ್ಷ ಬೀದಿ ವ್ಯಾಪಾರಿಗಳು ವಹಿವಾಟು ಮುಚ್ಚಿರಬಹುದೆನ್ನಲಾಗಿದೆ. ಎಳನೀರು, ಊಟ, ಹಣ್ಣು ಮಾರಾಟ ಮಾಡುವವರ ಸಂಖ್ಯೆ ಕಡಿಮೆ ಆಗಿದೆ.
ನೌಕರರು ಬೀದಿಗೆ:ಅಂಗಡಿ ಮುಂಗಟ್ಟುಗಳು ಮುಚ್ಚಿರು ವುದು ಒಂದೆಡೆಯಾದರೆ, ನಿರುದ್ಯೋಗ ಪ್ರಮಾಣ ಶೇ. 228.2 ಹೆಚ್ಚಳವಾಗಿರುವುದಾಗಿ ವಾಣಿಜೋದ್ಯಮ ಸಂಘಟನೆಯೊಂದರ ಅಧ್ಯಯನ ವರದಿ ಹೇಳುತ್ತದೆ. ಪ್ರತಿ ಅಂಗಡಿಯಲ್ಲಿ ಸರಾಸರಿ ಇಬ್ಬರು- ಮೂವರು ಕೆಲಸ ಮಾಡುತ್ತಿರುತ್ತಾರೆ. ಬೀದಿ ಬದಿ ವ್ಯಾಪಾರ ಮಾಡುವವರ ಸಂಖ್ಯೆಯನ್ನು ಲೆಕ್ಕಕ್ಕೆ ಪರಿಗಣಿಸಿದರೆ ನಿರುದ್ಯೋಗದ ಪ್ರಮಾಣ ಇಷ್ಟು ಹೆಚ್ಚಳವಾಗಿದೆ ಎಂಬುದು ಅಧ್ಯಯನ ವರದಿ ಬೊಟ್ಟುಮಾಡಿದೆ.
ಒಂದು ಲಕ್ಷ ಅಂಗಡಿಗಳಿಂದ ಸುಮಾರು 3 ಲಕ್ಷಕ್ಕೂ ಅಧಿಕ ನಿರುದ್ಯೋಗ ಸೃಷ್ಟಿಯಾಗಿದೆ. ಅಂಗಡಿ ತೆರೆಯುವುದಕ್ಕೆ ಮುನ್ನ ಕೊಟ್ಟಿದ್ದ ಮುಂಗಡ ಹಣ ಮುಗಿದ ಕೂಡಲೇ ಅಂಗಡಿಗಳನ್ನು ಮುಚ್ಚಿದ್ದಾರೆ. ಬೆಂಗಳೂರು ನಗರದಲ್ಲೇ 4 ಲಕ್ಷಕ್ಕಿಂತ ಹೆಚ್ಚಿನ ಶಾಪ್​ಗಳಿದ್ದವು. ಸದ್ಯ ಅವುಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮುಚ್ಚಿವೆ. ಬ್ರಿಗೇಡ್ ರಸ್ತೆ ವಹಿವಾಟುದಾರರ ಸಂಘಟನೆಯ ಮುಖಂಡರ ಪ್ರಕಾರ ಈಗಾಗಲೇ ಅಲ್ಲಿ 30 ಅಂಗಡಿಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಇನ್ನೂ 10 ರಿಂದ 15 ಅಂಗಡಿಗಳು ಬಾಗಿಲು ಹಾಕಲು ಸಿದ್ಧವಾಗುತ್ತಿವೆ.
ವಾಣಿಜ್ಯ ಸ್ಥಳಗಳ ಲೀಸ್​ಗೆ ಬೇಡಿಕೆಯೇ ಇಲ್ಲ
ಬೆಂಗಳೂರು ನಗರದಲ್ಲಿ ವಾಣಿಜ್ಯ ವಹಿವಾಟು ನಡೆಸಲು ಸ್ಥಳವನ್ನು ಗುತ್ತಿಗೆ ಪಡೆಯುವುದಕ್ಕೆ ಬೇಡಿಕೆಯೇ ಇಲ್ಲದಂತಾಗಿದೆ. ಒಟ್ಟಾರೆ ಶೇ. 60 ಬೇಡಿಕೆ ಕುಸಿದಿದೆ. 2019ರಲ್ಲಿ ಮೊದಲ ಆರು ತಿಂಗಳಿನಲ್ಲಿ 8.5 ದಶಲಕ್ಷ ಚ.ಅಡಿ ಜಾಗ ಲೀಸ್​ಗೆ ನೀಡಲಾಗಿತ್ತು. ಆದರೆ 2020ರ ಇದೇ ಅವಧಿಯಲ್ಲಿ ಕೇವಲ 3.3 ದಶಲಕ್ಷ ಚದುರ ಅಡಿ ಮಾತ್ರ ಗುತ್ತಿಗೆ ನೀಡಲಾಗಿದೆ. ಅದರಲ್ಲೂ ವಿಶೇಷ ಆರ್ಥಿಕ ವಲಯದಲ್ಲಿ ಈ ಪ್ರಮಾಣ ಶೇ. 85 ಕುಸಿದಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮದ ಮೂಲಗಳು ಹೇಳುತ್ತವೆ.
ಬೆಂಗಳೂರಲ್ಲೇ ಹೆಚ್ಚು
ರಾಜಧಾನಿ ಬೆಂಗಳೂರಿನಲ್ಲೇ ಅತೀ ಹೆಚ್ಚು ಸಣ್ಣ ಮತ್ತು ಮಧ್ಯಮ ಗಾತ್ರದ ಅಂಗಡಿಗಳು ಬಾಗಿಲು ಮುಚ್ಚಿವೆ. ಈ ಸಂಖ್ಯೆ ಸುಮಾರು ಅರ್ಧ ಲಕ್ಷ ದಾಟಿರುವ ಸಾಧ್ಯತೆ ಇದೆ.
ಕಾರಣಗಳೇನು?
ವ್ಯಾಪಾರಿಗಳ ನಿರೀಕ್ಷೆ
ಯಾವೆಲ್ಲ ಮಳಿಗೆ ಕ್ಲೋಸ್?
ಐಟಿ ಉತ್ಪಾದಕತೆ ಹೆಚ್ಚಳ
ರಾಜ್ಯದ ಸಣ್ಣ ಉದ್ಯಮ ಕ್ಷೇತ್ರ ತೊಂದರೆಗೆ ಒಳಗಾಗಿದ್ದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಇದಕ್ಕೆ ವ್ಯತಿರಿಕ್ತ ಬೆಳವಣಿಗೆ ಸಾಧಿಸಿದೆ. ಮನೆಯಿಂದಲೇ ಕೆಲಸದಿಂದಾಗಿ ಉತ್ಪಾದಕತೆ ಶೇ.40 ಹೆಚ್ಚಳವಾಗಿದೆ. ಐಟಿ ಕಂಪನಿಗಳಲ್ಲಿ ಶೇ.39 ರಿಂದ 40ರಷ್ಟು ವಿದ್ಯುತ್, ನೀರಿನ ಬಿಲ್ ಉಳಿತಾಯವಾಗಿದೆ. ಇದರಿಂದಾಗಿಯೇ ಅನೇಕ ದೊಡ್ಡ ಐಟಿ ಸಂಸ್ಥೆಗಳು ಮನೆಯಿಂದಲೇ ಕೆಲಸ ಮುಂದುವರಿಸಿ ಮಾನವ ಸಂಪನ್ಮೂಲ ವಿಭಾಗದ ಕರ್ತವ್ಯಕ್ಕೆ ಸಣ್ಣ ಕಚೇರಿ ತೆರೆಯಲು ಮುಂದಾಗಿರುವುದನ್ನು ಮೂಲಗಳು ಖಚಿತಪಡಿಸಿವೆ. ಅದಕ್ಕೆ ತಕ್ಕಂತೆ ಕಾರ್ವಿುಕ ಕಾನೂನು ಬದಲಾವಣೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಹ ಮಾಡಿಕೊಂಡಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + nineteen =
Remember me
