| ಕೃಷ್ಣರಾಜ ಕುತ್ಪಾಡಿ
ಸಾಲೊಂದರಲ್ಲಿ ರಾಮಾಯಣವೇ? ಅದು ಹೇಗೆ ಸಾಧ್ಯ ಎಂದು ನಾವು ಹುಬ್ಬೇರಿಸಬಹುದು. ಆದರೆ ನಾವು ಮೂಗು ಮುರಿಯುವುದನ್ನು ವ್ಯಾಸರು ತಡೆದಿದ್ದಾರೆ. ‘ಸಂಕ್ಷೇಪ-ವಿಸ್ತಾರಾಭ್ಯಾಂ ಹಿ ಪ್ರವದಂತಿ ಮನೀಷಿಣಃ’ – ಸಾರವಾಗಿ ಸ್ವಲ್ಪದರಲ್ಲೇ, ಅದನ್ನೇ ವಿಸ್ತಾರವಾಗಿ ಹೇಳಬಲ್ಲವರನ್ನೇ ಬಲ್ಲಿದರು ಎನ್ನುವರು. ಭಾಗವತದಲ್ಲಿ ರಾಮನ ಕಥೆ ಹೀಗೆ ಒಂದೇ ಸಾಲಿನಲ್ಲಿ ಸೇರಿಕೊಂಡಿದೆ.
ಗುರ್ವರ್ಥೇ ತ್ಯಕ್ತರಾಜ್ಯಃ
* ಬ್ರಹ್ಮಾದಿ ಲೋಕ ಗುರುಗಳು ಪ್ರಾರ್ಥಿಸಿದ್ದಕ್ಕಾಗಿ ತನ್ನ ರಾಜ್ಯವನ್ನು ತೊರೆದು ನಾರಾಯಣ ಭೂಮಿಗೆ ಇಳಿದು ಬಂದನು. * ಗುರು- ಹೆಚ್ಚಿನ ಭಾರವಾಗಿ ಕಾಡುತ್ತಿರುವ ರಾವಣಾದಿಗಳ, ಅರ್ಥೇ- ನಿವೃತ್ತಿಗಾಗಿ ವೈಕುಂಠವನ್ನು ತೊರೆದು ಬಂದನು. * ಪುತ್ರಕಾಮೇಷ್ಟಿಯಂತಹ ಹಿರಿದಾದ ಯಜ್ಞದ ಫಲವಾಗಿ ಭಗವಂತ ಕೌಸಲ್ಯೆಯ ಮಡಿಲು ಸೇರಿದ. * ಗುರುಗಳಾದ ವಿಶ್ವಾಮಿತ್ರರ ಕರೆಗೆ ಓಗೊಟ್ಟು ರಕ್ಕಸರ ಸಂಹಾರ, ವಿದ್ಯಾಪ್ರಾಪ್ತಿ ರೂಪವಾದ ಮಹಾ ಫಲಗಳನ್ನು ಗಮನಿಸಿ ಶ್ರೀರಾಮ ಅಯೋಧ್ಯೆಯಿಂದ ಕಾಡಿಗೆ ಬಂದ. ಮಹಾಸಂಪತ್ತಿನ ಅಭಿಮಾನಿನಿ ಲಕ್ಷ್ಮಿಯೇ ಸೀತೆಯಾಗಿ ಬಂದವಳನ್ನು ಪರಿಗ್ರಹಿಸುವುದಕ್ಕಾಗಿ ಮಿಥಿಲೆಗೆ ತೆರಳಿದನು. * ಅವತಾರ ಕಾರ್ಯದ ದೊಡ್ಡ ಹೊಣೆಯನ್ನು ಪರಶುರಾಮನಿಂದ ವೈಷ್ಣವ ಧನುಸ್ಸನ್ನು ಸ್ವೀಕರಿಸಲೆಂದೇ ಶ್ರೀರಾಮ ಮಿಥಿಲೆಯಿಂದ ಅಯೋಧ್ಯೆಯ ಕಡೆಗೆ ಸಾಗಿದನು. * ಗುರುವೆನಿಸಿದ ತಂದೆಯ ಮಾತನ್ನು ಉಳಿಸಲೆಂದೇ, ಕಾಡಿನಲ್ಲಿ ಕಾಯುತ್ತಿರುವ ಶಬರಿ, ಗುಹ, ಶರಭಂಗ ಆಂಜನೇಯನೇ ಮೊದಲಾದ ನೂರಾರು ಭಕ್ತರನ್ನು ಉದ್ದರಿಸುವ, ವಿರಾಧ, ಖರ ಮೊದಲಾದ ರಕ್ಕಸರನ್ನು ವಧಿಸುವ ಪ್ರಯೋಜನಗಳಿರುವುದರಿಂದ ಅಯೋಧ್ಯೆಯಿಂದ ಕಾಡಿಗೆ ಬಂದನು. * ಭಕ್ತನಾದ ವಿಭೀಷಣನನ್ನು ಸ್ವೀಕರಿಸಿ, ಸರ್ವ ಸಮೃದ್ಧವಾದ ಲಂಕೆಯನ್ನು ವಿಭೀಷಣ ರಾಮನಿಗೆ ಕೈಯೆತ್ತಿ ನೀಡಿದಾಗಲೂ ಜನ್ಮಭೂಮಿಗೆ ಮಿಗಿಲಾದ ವಸ್ತು ಮತ್ತೊಂದಿಲ್ಲ ಎಂದು ತಿಳಿಸಿ ಲಂಕೆಯಿಂದ ಅಯೋಧ್ಯೆಗೆ ತೆರಳಿದನು. * ಸೀತಾ ಪ್ರಾಪ್ತಿಯಾಗಿ 11000 ವರ್ಷಗಳ ಕಾಲ ಭೂಮಿಯನಾಳಿ ಧರ್ಮವನ್ನು ಪ್ರತಿಷ್ಠಾಪಿಸಿದನು. ‘ಅವತಾರ ಕಾರ್ಯ ಮುಗಿಯಿತು. ಬಾ ಮರಳಿ ವೈಕುಂಠಕೆ’ ಎಂದು ಬ್ರಹ್ಮಾಧಯದಿಗಳು ಪ್ರಾರ್ಥಿಸಿದಾಗ ಮರಳಿ ತನ್ನ ಪುರವನ್ನು ಸೇರಿಕೊಂಡನು.
ಹೀಗೆ ಒಂದೇ ವಾಕ್ಯ ಇಷ್ಟೆಲ್ಲ ಅರ್ಥವನ್ನು ತುಂಬಿಕೊಂಡದ್ದು ವಿಶೇಷ. ‘ಗುರು’ ಎಂದರೆ ಉಪದೇಶಕ, ತಂದೆ, ಭಾರ, ದೊಡ್ಡ ಎಂಬ ಹಲವು ಅರ್ಥಗಳಿವೆ. ಹಾಗೆಯೇ ‘ಅರ್ಥ’ ಎಂದರೆ ಹೆಸರು, ಸಂಪತ್ತು, ವಸ್ತು, ಪ್ರಯೋಜನ, ನಿವೃತ್ತಿ ಎಂಬ ಹಲವು ಅರ್ಥಗಳಿಂದ ಕೂಡಿದೆ. ಈ ಅರ್ಥಗಳ ಆವಾಪ ಉದ್ವಾಪಗಳಿಂದ ನೂರಾರು ಘಟನೆಗಳು ಈ ಸಾಲಿನಲ್ಲಿ ತುಂಬಿಕೊಂಡಿದೆ. ರಾಮನ ಕಥೆ ಅತ್ಯಂತ ಸಮರ್ಪಕವಾಗಿ ಸಂಗ್ರಹಗೊಂಡಿದೆ.
(ಲೇಖಕರು ಸಂಸ್ಕೃತ ಉಪನ್ಯಾಸಕರು)
ಇದಪ್ಪಾ ಅದೃಷ್ಟ ಅಂದ್ರೆ! 279 ರೂ. ಕೊಟ್ಟು ಬಿರಿಯಾನಿ ತಿಂದಿದ್ದಕ್ಕೆ 7 ಲಕ್ಷ ರೂ. ಮೌಲ್ಯದ ಕಾರು ಗಿಫ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
