ಬೆಳಗಾವಿ:ಕರೊನಾ ಶಂಕಿತ ವ್ಯಕ್ತಿಯೊಬ್ಬರಿಗೆ ಪಾಸಿಟಿವ್‌- ನೆಗೆಟಿವ್‌ ಎರಡೂ ವರದಿ ಬಂದಿದ್ದು, ಎರಡೂ ರಿಪೋರ್ಟ್‌ ಹಿಡಿದು ವ್ಯಕ್ತಿ ತಲೆಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ.
ಇದು ನಡೆದಿರುವುದು ಬೆಳಗಾವಿ ಜಿಲ್ಲೆಯಲ್ಲಿ. ಜಿಲ್ಲೆಯ ಅಥಣಿಯ ಕರೊನಾ ಶಂಕಿತ ವ್ಯಕ್ತಿ ಎರಡು ಕಡೆ ಕರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು.
ಜುಲೈ 15ರಂದು ಅಥಣಿಯಲ್ಲಿ ಗಂಟಲು ದ್ರವದ ಮಾದರಿಯನ್ನು ನೀಡಿದ್ದರೆ, ಜುಲೈ 16ರಂದು ಬೆಳಗಾವಿಯ ಆಸ್ಪತ್ರೆಯಲ್ಲಿ ಕರೊನಾ ವೈರಸ್‌ ಪರೀಕ್ಷೆ ಮಾಡಿಸಿಕೊಂಡು ಅಲ್ಲಿಯೇ ದಾಖಲಾಗಿದ್ದರು. ಜುಲೈ 18ರಂದು ಬೆಳಗಾವಿ ಆಸ್ಪತ್ರೆ ವರದಿ ನೀಡಿದ್ದು ಅದರಲ್ಲಿ ಕರೊನಾ ನೆಗೆಟಿವ್ ಎಂದು ಇದೆ. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ ನೆಗೆಟಿವ್‌ ವರದಿ ನೋಡಿ ಆ ದಿನವೇ ಡಿಸ್ಚಾರ್ಜ್ ಮಾಡಲಾಗಿತ್ತು.
ಇದನ್ನೂ ಓದಿ:60ರಲ್ಲಿ ಬದುಕು ಮುಗಿಸಿಕೊಂಡ ಕರೊನಾ ವಾರಿಯರ್: ಸೋಂಕಿಗೆ ಬಲಿಯಾಗಿ ಆತ್ಮಹತ್ಯೆಗೆ ಶರಣಾದ ಅಜ್ಜಿ
ಸದ್ಯ ತಮಗೆ ಕರೊನಾ ನೆಗೆಟಿವ್ ಇದೆ ಎಂದು ಖುಷಿಯಿಂದ ಮನೆಗೆ ಅವರು ಹೋಗಿದ್ದರು. ಇದೀಗ ದೊಡ್ಡ ತಲೆನೋವಾಗಿರುವುದು ಜುಲೈ 15ರಂದು ನೀಡಿದ್ದ ಸ್ವ್ಯಾಬ್ ರಿಪೋರ್ಟ್ ಬಂದ ಮೇಲೆ. ಇದು ಇವರ ಕೈ ಸೇರಿರುವುದು ಜುಲೈ 25ರಂದು.
ಅದರಲ್ಲಿ ಕರೊನಾ ಪಾಸಿಟಿವ್‌ ಎಂದು ವರದಿ ಬಂದಿದೆ. ಇದರಿಂದ ಗಾಬರಿಗೊಂಡ ಅವರು ಆಸ್ಪತ್ರೆಗೆ ತೆರಳಿ ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇವಲ ಒಂದು ದಿನದ ಅಂತರದಲ್ಲಿ ಈ ರೀತಿ ಭಿನ್ನ ಭಿನ್ನ ರಿಪೋರ್ಟ್‌ ಬರಲು ಹೇಗೆ ಸಾಧ್ಯ? ಹಿಂದಿನ ದಿನ ಒಂದು ಕಡೆ ಮಾರನೆಯ ದಿನ ಇನ್ನೊಂದು ಕಡೆ ಸ್ವ್ಯಾಬ್ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ಒಂದೇ ದಿನದಲ್ಲಿ ಈ ಅಂತರ ಏಕೆ? ನನಗೆ ನಿಜವಾಗಿಯೂ ಪಾಸಿಟಿವ್‌ ಇದೆಯೋ, ನೆಗೆಟಿವ್‌ ಇದೆಯೋ ಎಂದು ಹೇಗೆ ಗೊತ್ತಾಗುವುದು ‌? ಇಂಥ ರಿಪೋರ್ಟ್‌ ನಂಬೋದಾದ್ರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಸದ್ಯ ಅಧಿಕಾರಿಗಳು ಏನೂ ಹೇಳದೇ ಸುಮ್ಮನಾಗಿದ್ದಾರಂತೆ.
ಆಸ್ಪತ್ರೆಯಲ್ಲಿ ಅಪ್ಪನ ನೆನೆದು ಭಾವುಕರಾದ ಅಮಿತಾಭ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 1 =
Remember me
