ಶಿವಮೊಗ್ಗ:ಬಜರಂಗದ ದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದ ಒಂಬತ್ತನೇ ಆರೋಪಿಗೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಹರ್ಷ ಕೊಲೆ ಪ್ರಕರಣದ ಇನ್ನೊಬ್ಬ ಆರೋಪಿಗೂ ಜಾಮೀನು ಸಿಕ್ಕಂತಾಗಿದೆ.
ಪ್ರಕರಣದಲ್ಲಿ 9ನೇ ಆರೋಪಿ ಆಗಿರುವ ಸೈಯದ್ ನದೀಮ್ ಜಾಮೀನು ಪಡೆದ ವ್ಯಕ್ತಿ. ಬುಧವಾರ ಎನ್ಐಎ ಕೋರ್ಟ್​ ನ್ಯಾಯಾಧೀಶ ಗಂಗಾಧರ ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಹರ್ಷನ ಕೊಲೆ ಪ್ರಕರಣದಲ್ಲಿ ಕೊಲೆ ಮಾಡಿದ ಪ್ರಮುಖ ಆರೋಪಿಗಳು ಮೊಬೈಲ್​ಫೋನ್​ ಮತ್ತು ಬಟ್ಟೆಗಳನ್ನು ಬಿಚ್ಚಿ ಈತನಿಗೆ ಕೊಟ್ಟು ಹೋಗಿದ್ದರು. ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಕೇಳಿಬಂದಿತ್ತು. ಸೈಯದ್ ನದೀಮ್ ಪರ ರಹಮತ್ ಉಲ್ಲಾ ಕೊತ್ವಾಲ್ ಅವರು ವಾದ ಮಂಡಿಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಆರೋಪಿ ಜಾಫರ್ ಸಾದಿಕ್​ಗೆ ಜಾಮೀನು ದೊರೆತಿತ್ತು. ಜಾಫರ್ ಸಾದಿಕ್ ತನ್ನ ಕಾರನ್ನ ಕೊಲೆ ಹಂತಕರಿಗೆ ನೀಡಿದ್ದ ಆರೋಪ ಕೇಳಿಬಂದಿತ್ತು. ಆತನಿಗೂ ಜಾಮೀನು ದೊರೆತಿದೆ. ಹರ್ಷ ಕೊಲೆ ಪ್ರಕರಣದಲ್ಲಿ ಹತ್ತು ಆರೋಪಿಗಳನ್ನ ಪೊಲೀಸರು ಸೆರೆ ಹಿಡಿದು ಎನ್ಐಎಗೆ ಹಸ್ತಾಂತರಿಸಿದ್ದರು.
ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

ಗೃಹಪ್ರವೇಶದ ಮರುದಿನವೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ; ಮಗಳಿಂದಲೇ ಅಂತಿಮಸಂಸ್ಕಾರ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 + 1 =
Remember me
