ಯಲಹಂಕ: ಸಾಮಾಜಿಕ ಜಾಲತಾಣದಲ್ಲಿ ಅಮಾಯಕ ವ್ಯಕ್ತಿಯೊಬ್ಬನಿಗೆ ಕರೊನಾ ಸೋಂಕಿದೆ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಪಾಲಿಕೆ ಸದಸ್ಯೆಯ ಪತಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿಯ ಚೌಡೇಶ್ವರಿ ವಾರ್ಡ್-2ರ ಕಾಪೋರೇಟರ್ ಪದ್ಮಾವತಿ ಅವರ ಪತಿ ಯಲಹಂಕ ನಗರಸಭೆ ಮಾಜಿ ಸದಸ್ಯ ಅಮರ್​ನಾಥ್ ಬಂಧಿತ. ಯಲಹಂಕದಲ್ಲಿ ನೆಲೆಸಿರುವ ವ್ಯಕ್ತಿಗೆ ಕರೊನಾ ಸೋಂಕು ಇದೆ ಎಂದು ಅಮರನಾಥ್ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದ.
ಕೊಂಡಪ್ಪ ಲೇಔಟ್​ನಲ್ಲಿ ಮೊದಲ ಕರೊನಾ ಪಾಸಿಟಿವ್ ಕೇಸ್ ಎಂದು ತೆಲುಗಿನಲ್ಲಿ ಸುಳ್ಳು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದ. ಈ ಸುಳ್ಳು ವದಂತಿಯಿಂದಾಗಿ ಆಂಧ್ರ ಹಾಗೂ ತೆಲಂಗಾಣದ ಕೂಲಿ ಕಾರ್ವಿುಕರು ಭಯಭೀತರಾಗಿ ಊರಿಗೆ ಹೋಗಲು ತಂಡೋಪತಂಡವಾಗಿ ಕೋಗಿಲು ಕ್ರಾಸ್ ಬಸ್ ನಿಲ್ದಾಣದ ಬಳಿ ಬಂದಿರುವುದನ್ನು ಕಂಡ ಪೊಲೀಸರು ವಿಚಾರಿಸಿದಾಗ ಅಮರನಾಥನ ಸುಳ್ಳು ಸುದ್ದಿಯ ವಿಚಾರ ಬಯಲಾಗಿದೆ.
ಏರ್​ಗನ್​ನಿಂದ ನಾಯಿಗಳ ಮೇಲೆ ದಾಳಿ ನಡೆಸಿದ ಮಹಿಳೆ: ಪ್ರಕರಣ ದಾಖಲಿಸಿದ್ರು ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 14 =
Remember me
