ನಾಂದೇಡ್​:ಮಹಾರಾಷ್ಟ್ರದ ನಾಂದೇಡ್​ ಜಿಲ್ಲೆಯ ಉಮರಿ ತಾಲೂಕಿನ ನಾಗಠಾಣದ ನಿರ್ವಾಣಿ ಮಠದ ರುದ್ರಪಶುಪತಿ ಶಿವಾಚಾರ್ಯ ಶ್ರೀಗಳ ಕೊಲೆಗಾರರ ಪೈಕಿ ಒಬ್ಬನನ್ನು ಬಂಧಿಸಿರುವುದಾಗಿ ನಾಂದೇಡ್​ ಎಸ್​ಪಿ ವಿಜಯ್​ಕುಮಾರ್​ ಮಗರ್​ ತಿಳಿಸಿದ್ದಾರೆ.ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೊಲೆಗಾರ ಮತ್ತು ಕೊಲೆಯಾಗಿರುವ ಸ್ವಾಮೀಜಿ ಒಂದೇ ಧರ್ಮಕ್ಕೆ ಸೇರಿದವರು. ಈ ಪ್ರಕರಣದ ಹಿಂದೆ ಮತೀಯ ದ್ವೇಷದ ಆಯಾಮ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದೀಗ ಬಂಧಿತನಾಗಿರುವ ವ್ಯಕ್ತಿ 10 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ. ಅಲ್ಲದೆ, ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲೂ ಬಂಧಿತನಾಗಿದ್ದ ಎಂದು ಹೇಳಿದರೂ, ಆತನ ಹೆಸರನ್ನು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ:ಶೀಘ್ರದಲ್ಲೇ ನಾಶವಾಗಲಿದೆ ಆಧುನಿಕ ಸಂವಹನ ವ್ಯವಸ್ಥೆ; ಉಪಗ್ರಹ, ಫೋನ್​ ಎಲ್ಲವೂ ಸ್ತಬ್ಧ!
ಸ್ವಾಮೀಜಿ ಅವರ ಹತ್ಯೆಯಲ್ಲಿ ಭಾಗಿಯಾದ ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ. ಅವರೆಲ್ಲರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದರು.
ರುದ್ರಪಶುಪತಿ ಸ್ವಾಮೀಜಿ ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಂದಿಪುರದವರು. ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಉಮರಿ ತಾಲೂಕಿನಲ್ಲಿರುವ ಉಜ್ಜಯಿನಿ ಪೀಠದ ಶಾಖಾಮಠವಾದ ನಾಗಠಾಣದ ನಿರ್ವಾಣಿ ಮಠದ ಪೀಠಾಧಿಪತಿಯಾಗಿದ್ದರು.ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಮಠದ ಪೀಠಾಧಿಪತಿ ಮಹೇಶ್ವರ ಮಹಾಸ್ವಾಮಿಗಳು ಹತ ಸ್ವಾಮೀಜಿ ಅವರ ಸಹೋದರರಾಗಿದ್ದಾರೆ.
VIDEO: ಈ ಪುಟಾಣಿಗೆ ಇನ್​ಸ್ಟಾಗ್ರಾಮ್​ನಲ್ಲಿ 13 ಲಕ್ಷ ಫಾಲೋವರ್ಸ್​: ಅಂಥದ್ದೇನು ವಿಶೇಷ ಅಂತೀರಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − two =
Remember me
