ಬೆಂಗಳೂರು:ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಮುಂದಿನ ಮೂರು ವರ್ಷದಲ್ಲಿ 1,000 ಹೊಸ ಐಷರಾಮಿ ಬಸ್‌ಗಳನ್ನು ಖರೀದಿಸುವ ಗುರಿ ಹೊಂದಲಾಗಿದೆ’ ಎಂದು ವಿಜಯಾನಂದ ಟ್ರಾವೆಲ್ಸ್​ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ಹೇಳಿದರು.
ವೋಲ್ವೊ ಐಷರ್ ವಾಣಿಜ್ಯ ವಾಹನಗಳ ಕಂಪನಿ ಸೋಮವಾರ ಆಯೋಜಿಸಿದ್ದ ಐಷರ್ ಇಂಟರ್ ಸಿಟಿ 13.5 ಎಂ ಕೋಟ್ ಮಾದರಿ ಬಸ್​ಗಳನ್ನು ವಿಜಯಾನಂದ ಟ್ರಾವೆಲ್ಸ್​ಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಈ ಮಹತ್ವದ ತೀರ್ಮಾನ ಪ್ರಕಟಿಸಿದರು.
ಪ್ರಸ್ತುತ 100 ಬಸ್‌ಗಳ ಖರೀದಿಗೆ ಆರ್ಡರ್ ನೀಡಲಾಗಿದೆ. 50 ಬಸ್ ಹವಾನಿಯಂತ್ರಿತ ಸ್ಲೀಪರ್​, ಉಳಿದ 50 ಬಸ್​ ನಾನ್​ ಎಸಿ ವಾಹನಗಳಾಗಿವೆ. ವೋಲ್ವೊ ಐಷರ್ ಕಂಪನಿಯಿಂದ 50 ಎಸಿ ಸ್ಲೀಪರ್​ ಬಸ್​ ಖರೀದಿಸಿದರೆ, ಉಳಿದ 50 ನಾನ್​ ಎಸಿ ಬಸ್​ಗಳನ್ನು ಟಾಟಾ ಕಂಪನಿಯಿಂದ ಖರೀದಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಹೊಸದಾಗಿ ಖರೀದಿಸುವ ಬಸ್​ಗಳು ಕರ್ನಾಟಕ ಸೇರಿ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗುಜರಾತ್​ ರಾಜ್ಯಗಳ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ. ಭವಿಷ್ಯದಲ್ಲಿ ಇತರ ರಾಜ್ಯ ಹಾಗೂ ಹೊಸ ಮಾರ್ಗಗಳಲ್ಲೂ ಬಸ್​ಗಳನ್ನು `ರಸ್ತೆಗಳಿಸುವ ಗುರಿ ಇದೆ ಎಂದರು.
ಶೇ.21 ವಹಿವಾಟು ವೃದ್ಧಿ:ವಿಆರ್​‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಮಾತನಾಡಿ, ವಿಆರ್​ಲ್​ ಲಾಜಿಸ್ಟಿಕ್ಸ್​ ದೇಶದ ಮುಂಚೂಣಿ ಕಂಪನಿಯಾಗಿ ಬೆಳೆದು ನಿಂತಿದೆ. ಪ್ರಸ್ತುತ 6,500 ಟ್ರಕ್‌ಗಳಿದ್ದು, ದೇಶಾದ್ಯಂತ 1250 ಶಾಖೆಗಳನ್ನು ಹೊಂದಿದೆ. ಇತ್ತೀಚೆಗೆ ಲಡಾಖ್​ನಲ್ಲೂ ಹೊಸ ಶಾಖೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 160 ಶಾಖೆಗಳನ್ನು ಪಾರಂಭಿಸುವ ಗುರಿ ಹಾಕಿಕೊಳ್ಳಲಾಗಿದೆ. 2022-23ನೇ ಸಾಲಿನಲ್ಲಿ ದಾಖಲೆಯ ಶೇ.21 ವಹಿವಾಟು ವೃದ್ಧಿಯಾಗಿದ್ದು, 2023-24ರಲ್ಲಿ ಶೇ.25 ವೃದ್ಧಿ ಗುರಿ ಇದೆ ಎಂದು ತಿಳಿಸಿದರು.
ಬಸ್‌ ಪ್ರಯಾಣಕ್ಕೆ ವಿಪುಲಾವಕಾಶ:ವೋಲ್ಸ್-ಐ‌ಷರ್​ ವಾಣಿಜ್ಯ ವಾಹನಗಳ ಬಸ್‌ ವಿಭಾಗದ ಅಧ್ಯಕ್ಷ ಆಕಾಶ್ ಪಾಸಿ ಮಾತನಾಡಿ, ನಮ್ಮ ಕಂಪನಿಯು ವಿಶ್ವದರ್ಜೆಯ ಗುಣಮಟ್ಟದ ಬಸ್‌ಗಳನ್ನು ತಯಾರಿಸುತ್ತಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಪ್ರಸ್ತುತ ದೇಶದಲ್ಲಿ ಬಸ್‌ ತಯಾರಿಕೆ ಕ್ಷೇತ್ರದ ಶೇ.24, ಪಾಲನ್ನು ಹೊಂದಿದೆ. ಸ್ಲೀಪರ್​ ಸೌಲಭ್ಯವುಳ್ಳ ಬಸ್‌ಗಳನ್ನು ಪ್ರಯಾಣಿಕರು ಇಷ್ಟಪಡುತ್ತಾರೆ. ಮುಂದಿನ 5 ವರ್ಷದಲ್ಲಿ ತಯಾರಾಗುವ ಬಹುತೇಕ ಬಸ್​ಗಳು ಇಂತಹ ಸೌಲಭ್ಯವನ್ನು ಹೊಂದಿರುತ್ತವೆ ಎಂದರು.
ಇದೇ ವೇಳೆ ವೋಲ್ವೊ ಐಷರ್ ಕಂಪನಿ ವತಿಯಿಂದ ಡಾ.ವಿಜಯ ಸಂಕೇಶ್ವರ ಹಾಗೂ ಶಿವ ಸಂಕೇಶ್ವರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವೋಲ್ವೊ-ಐಷರ್ ಕಂಪನಿ ಉಪಾಧ್ಯಕ್ಷ ಸುರೇಶ್ ಚೆಟ್ಟಿಯಾರ್ ನೂತನ ಬಸ್​ಗಳ ವಿಶೇಷತೆಯನ್ನು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಅಭಿವೃದ್ಧಿ ಪಥದತ್ತ ದಾವುಗಾಲು ಇಟ್ಟಿದೆ. ಹೆದ್ದಾರಿಗಳ ಮೇಲ್ದರ್ಜೆ, ಮೂಲಸೌಕರ್ಯ ಕ್ಷೇತ್ರದ ಬೆಳವಣಿಗೆಯಿಂದಾಗಿ ಲಾಜಿಸ್ಟಿಕ್ಸ್, ಟ್ರಾವೆಲ್ಸ್​ ಕ್ಷೇತ್ರ ಇನ್ನಷ್ಟು ಬೆಳವಣಿಗೆ ಹೊಂದಬಹುದಾಗಿದೆ. ಶಿಸ್ತು, ಕ್ತಿಯಾಶೀಲತೆ ಮೂಲಕ ಭಾರತದಾಚೆಗೂ ಉದ್ಯಮ ಒತ್ತರಿಸುವ ಗುರಿಯನ್ನು ಯುವಜನತೆ ಹೊಂದಬಹುದಾಗಿದೆ.
| ಡಾ. ವಿಜಯ ಸಂಕೇಶ್ವರ ಚೇರ್ಮನ್​, ವಿಆರ್​ಎಲ್​ ಸಮೂಹ ಸಂಸ್ಥೆಗಳು
ವಿಜಯಾನಂದ ಟ್ರಾವೆಲ್ಸ್​ಗೆ ಗ್ರಾಹಕರೇ ದೇವರು, ಪ್ರಯಾಣಿಕರ ಸುರಕ್ಷತೆ, ಗುಣಮಟ್ಟದ ಸೇವೆ ಒದಗಿಸಲು ಸಂಸ್ಥೆ ಸದಾ ಸಿದ್ಧವಿದೆ. ನಮ್ಮ ಸಂಸ್ಥೆ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಿ ಒಂದು ಅತ್ಯುತ್ತಮ ಸೇವೆ ಒದಗಿಸುವಲ್ಲಿ ಸಕ್ರಿಯರಾಗಿದ್ದೇವೆ. ಭವಿಷ್ಯದಲ್ಲಿ ಇನ್ನಷ್ಟು ಮಾರ್ಗಗಳಲ್ಲಿ ಬಸ್ ಓಡಿಸುವ ಚಿಂತನೆ ಇದೆ.
| ಶಿವ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ, ವಿಜಯಾನಂದ ಟ್ರಾವೆಲ್ಸ್​ ಪ್ರೈ.ಲಿ.
ಸದ್ಯ ನಮ್ಮಲ್ಲಿರುವ ಅಂದಾಜು 270 ಬಸ್‌ಗಳನ್ನು ಹಂಹಂತವಾಗಿ ತೆಗೆದು ಹೊಸ ಬಸ್​ಗಳನ್ನು ರಸ್ತೆಗೆ ಇಳಿಸಲಾಗುವುದು ಎಂದು ಶಿವ ಸಂಕೇಶ್ವರ ಹೇಳಿದರು. ನಮ್ಮ ಆಡಳಿತ ಮಂಡಳಿ ಆನೇಕ ಕಂಪನಿಗಳ ಜತೆ ಮಾತುಕತೆ ನಡೆಸುತ್ತಿದ್ದು ಸುರಕ್ಷತೆ, ಪಯಾಣಿಕ ಸ್ನೇಹಿ ಬಸ್‌ಗಳಿಗಷ್ಟೇ ನಮ್ಮ ಆದ್ಯತೆ ಇದೆ. ಇನ್ನು ಪ್ರತಿಯೊಬ್ಬರಿಗೂ ನಮ್ಮ ವೆಬ್‌ಸೈಟ್ ಮೂಲಕ ಟಿಕೆಟ್ ಖರೀದಿಸಿದರೆ ಶೇ. 15 ರಿಯಾಯಿತಿ ನೀಡುವುದಕ್ಕೆ ಯಾವತ್ತೂ ಬದ್ಧರಾಗಿರುತ್ತೇವೆ. ಎಂದು ಸ್ಪಷ್ಟಪಡಿಸಿದರು. ಟಿಕೆಟ್‌ ಬುಕ್ಕಿಂಗ್‌ಗೆ ವೆಬ್‌ಸೈಟ್:www.vribusin ಸಂಪರ್ಕಿಸಿ.
ರಾಜ್ಯ ಸರ್ಕಾರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಸೌಲಭ್ಯ ಒದಗಿಸುತ್ತಿರುವುದರಿಂದ ನಮ್ಮ ಸಂಸ್ಥೆ ಮೇಲೆ ಪರಿಣಾಮ ಆಗಿಲ್ಲ ಮತ್ತು ವಹಿವಾಟಿಗೂ ಯಾವುದೇ ಧಕ್ಕೆ ಆಗಿಲ್ಲ, ಬದಲಾಗಿ ವಿಫುಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಪ್ರಯಾಣಿಕರಿಗೆ ಇನ್ನಷ್ಟು ಸೇವೆ ಒದಗಿಲಾಗುವುದು ಎಂದು ಶಿವ ಸಂಕೇಶ್ವರ ಪ್ರತಿಕ್ರಿಯಿಸಿದರು. ಇದಕ್ಕೆ ದನಿಗೂಡಿಸಿದ ಡಾ. ವಿಜಯ ಸಂಕೇಶ್ವರ ಅವರು ರಾಜ್ಯ ಸರ್ಕಾರದ ಈ ಯೋಜನೆ ಅತ್ಯುತ್ತಮವಾಗಿದೆ. ಮಹಿಳೆಯರಿಗೆ ಆರ್ಥಿಕ ಸದೃಢತೆ ಸಿಕ್ಕಿದೆ. ಪ್ರೀಬೀಸ್‌ನಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ, ನಮ್ಮ ಗ್ರಾಹಕರು ಬೇರೆ ವರ್ಗದಡಿ ಬರುವುದರಿಂದ ಪರಿಣಾಮ ಬೀರಿಲ್ಲ, ದೂರದ ಪ್ರಯಾಣಕ್ಕೆ ಬಸ್‌ ಸೌಲಭ್ಯ ಉತ್ತಮ ಎಂಬ ಮನೋಭಾವ ಹಲವು ಪ್ರಯಾಣಿಕರಲ್ಲಿದೆ. ಮುಂದೆಯೂ ಇನ್ನಷ್ಟು ಸೌಲಭ್ಯಗಳು ಕೈಗೆಟಕುವ ಹಿನ್ನೆಲೆಯಲ್ಲಿ ಬಸ್ ಸೇವೆ ಮತ್ತಷ್ಟು ವಿಸ್ತರಣೆ ಆಗಲಿದೆ ಎಂದರು. ವೋಲ್ವೊ ಕಂಪನಿ ತಯಾರಿಸುವ ಬಸ್‌ಗಳು ವಿಶ್ವದರ್ಜೆಯನ್ನು ಹೊಂದಿವೆ. ಸುರಕ್ಷತೆ ಸೇರಿ ಇತರ ಸೌಲಭ್ಯಗಳು ಪ್ರಯಾಣಿಕರ ಸ್ನೇಹಿಯಾಗಿವೆ, ವಿಜಯಾನಂದ ಅದೆಲ್ಲ ಹಾಗೂ ವೋಲ್ವೊ ಮಧ್ಯೆ 20 ವರ್ಷಗಳ ಸಂಬಂಧ ಇದೆ. ಬಸ್‌ಗಳ ತಯಾರಿಕೆ, ವಿನ್ಯಾಸ ಹಾಗೂ ತಾಂತ್ರಿಕತೆಯಲ್ಲಿ ವೋಲ್ವೊಗೆ ಬೇರೆ ಯಾರು ಸರಿಸಾಟ ಇಲ್ಲ. ಆ ಸಂಸ್ಥೆ ತಯಾರಿಸುವ ಹೊಸ ಮಾದರಿಯ ಬಸ್‌ಗಳನ್ನು ನಾವು ಖರೀದಿಸಿ ಪ್ರಯಾಣಿಕರ ಸೇವೆಗೆ ನೀಡಿದ್ದೇವೆ. ಮುಂದೆಯೂ ಕೂಡ ಭಾರತೀಯ ಗ್ರಾಹಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ವೋಲ್ವೊ ಮುಂದಾಗಲಿದೆ ಎಂಬ ವಿಶ್ವಾಸ ಇದೆ ಎಂದು ಡಾ. ವಿಜಯ ಸಂಕೇಶ್ವರ ತಿಳಿಸಿದರು.
ಮದುವೆಯಾಗಿ ನಾಲ್ಕು ತಿಂಗಳಾಗಿವೆ, ವಿಚ್ಛೇದನಕ್ಕೆ ಕೇಸು ಹಾಕಬಹುದೇ?

ಕರ್ನಾಟಕ ಮಾದರಿ, ಅಭಿವೃದ್ಧಿ ರಹದಾರಿ: ಐದು ವರ್ಷಗಳ ನೀಲಿನಕ್ಷೆ ಮುಂದಿಟ್ಟ ರಾಜ್ಯಪಾಲ ಗೆಹಲೋತ್; 16ನೇ ವಿಧಾನಸಭೆಗೆ ವಿಧ್ಯುಕ್ತ ಚಾಲನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
