ಬೆಂಗಳೂರು: ಮುನ್ನೆಚ್ಚರಿಕೆ ಕ್ರಮವಾಗಿ ಕರೊನಾ ಸೋಂಕು ತಡೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವ 1,000 ವೆಂಟಿಲೇಟರ್ಸ್, 5 ಲಕ್ಷ ಪಿಪಿಇ ಕಿಟ್, 10 ಲಕ್ಷ ಎಲ್-95 (6 ಪದರು) ಹಾಗೂ 15 ಲಕ್ಷ 3 ಪದರುಳ್ಳ ಮಾಸ್ಕ್​ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ವಿಕಾಸ ಸೌಧದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಇಲಾಖೆ ಅಧಿಕಾರಿಗಳು, ವೆಂಟಿಲೇಟರ್ಸ್ ಉತ್ಪಾದಿಸುವ ಮೈಸೂರಿನ ಸ್ಕಾ್ಯನರ್ ಕಂಪನಿ ಹಾಗೂ ಮೈಸೂರು ಜಿಲ್ಲಾಧಿಕಾರಿ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ಕರೊನಾ ಚಿಕಿತ್ಸೆಗೆ ಮೀಸಲಿಟ್ಟ ಮಾದರಿಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಆಸ್ಪತ್ರೆ ಇದಕ್ಕಾಗಿ ಮೀಸಲಿಡಲಾಗುವುದು. ಅಗತ್ಯ ಸವಲತ್ತು, ವೈದ್ಯಕೀಯ ಪರಿಕರಗಳ ಖರೀದಿ, ಸಂಗ್ರಹಕ್ಕೆ ಒತ್ತು ನೀಡಲಾಗಿದ್ದು, ಆಯಾ ಕಂಪನಿಗಳಿಂದ ತಿಂಗಳೊಳಗೆ ಪೂರೈಕೆಯಾಗಲಿದೆ ಎಂದು ಸಚಿವರು ತಿಳಿಸಿದರು.
ಡಿಸಿಎಂ ವಿಶ್ವಾಸ: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಮಾತನಾಡಿ, ಆಸ್ಪತ್ರೆಗಳಲ್ಲಿ ಅಗತ್ಯ ಸವಲತ್ತು ಕಲ್ಪಿಸುವುದರ ಜತೆಗೆ ವೈದ್ಯಕೀಯ ಉಪಕರಣ ಹಾಗೂ ಪರಿಕರಗಳನ್ನು ಸಂಗ್ರಹಿಸುವುದು ಅಷ್ಟೇ ಮುಖ್ಯವಾಗಿದೆ. ಚೀನಾದಲ್ಲಿ ಕರೋನಾ ನಿಯಂತ್ರಣಕ್ಕೆ ಬಂದಿರುವ ಕಾರಣ ಈ ಉಪಕರಣ/ಪರಿಕರ ಅಲ್ಲಿಂದ ತ್ವರಿತವಾಗಿ ಆಮದು ಮಾಡಿಕೊಳ್ಳುವ ವಿಶ್ವಾಸವಿದೆ ಎಂದರು.
ಆರೋಗ್ಯ, ಬ್ಯಾಂಕಿಂಗ್ ಮತ್ತು ಸರ್ಕಾರಿ ಕೆಲಸಗಳು ಕಚೇರಿಯಿಂದಲೇ ನಿರ್ವಹಿಸುವುದು ಅನಿವಾರ್ಯ. ಇವುಗಳನ್ನು ನಿರ್ಬಂಧಿಸಿದರೆ ಇಡೀ ವ್ಯವಸ್ಥೆ ಸ್ತಬ್ಧವಾಗುತ್ತದೆ. ದೈನಂದಿನ ಅಗತ್ಯ ಹಾಗೂ ದಿನಸಿಗಳ ವಹಿವಾಟಿಗೆ ಅವಕಾಶ ನೀಡಲಾಗಿದೆ. ಕರೊನಾ ವೈರಸ್ ಸೋಂಕು ತಡೆಯುವಲ್ಲಿ ಜನರೂ ಸಹಿತ ದೂರ ಅಂತರವಿದ್ದು, ಸರ್ಕಾರದ ಜತೆಗೆ ಸಹಕರಿಸಬೇಕು ಎಂದು ಅಶ್ವಥ್ ನಾರಾಯಣ ತಿಳಿಸಿದರು.
ನಮಾಜ್ ನಿಲುಗಡೆಗೆ ಶಿಫಾರಸು
ಕರೊನಾ ವೈರಸ್ ಸೋಂಕು ತಡೆಗೆ ಮುಂಜಾಗ್ರತಾ ಕ್ರಮವಾಗಿ ಮಾ.31ರವರೆಗೆ ಮಸೀದಿಗಳಲ್ಲಿ ಪ್ರತಿದಿನ ನಡೆಸá-ವ ಪ್ರಾರ್ಥನೆ (ನಮಾಜ್) ಹಾಗೂ ಶುಕ್ರವಾರ (ಜುಮ್ಹಾ)ದ ವಿಶೇಷ ಸಾಮೂಹಿಕ ಪ್ರಾರ್ಥನೆ ನಿಲ್ಲಿಸಿ, ಮನೆಗಳಲ್ಲೇ ಪ್ರಾರ್ಥನೆ ಮಾಡಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಪ್ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ಶಿಫಾರಸು ಮಾಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಕಾರ್ಯದರ್ಶಿ ಜಾವೇದ್ ಅಖ್ತರ್​ಗೆ ಪತ್ರ ಬರೆದು ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಮವಹಿಸಲು ಕೋರಿದ್ದು, ವಕ್ಪ ಮಂಡಳಿ, ಧಾರ್ವಿುಕ ಆಲಮ್್ಸ, ಮುಸ್ಲಿಂ ವಿದ್ವಾಂಸ, ಮಂಗಳೂರಿನ ಖಾಜಿಗಳು ಹಾಗೂ ಮುಸ್ಲಿಂ ಮುಖಂಡರ ಜತೆ ರ್ಚಚಿಸಿದ ನಂತರವೇ ಸಾಮೂಹಿಕ ನಮಾಜ್ ಸ್ಥಗಿತಗೊಳಿಸಿ, ಅವರವರ ಮನೆಯಲ್ಲಿ ಪ್ರಾರ್ಥನೆ ಮಾಡಲು ಆದೇಶ ಹೊರಡಿಸಬೇಕು ಎಂದು ಶಿಫಾರಸು ಪತ್ರದಲ್ಲಿ ಇಬ್ರಾಹಿಂ ತಿಳಿಸಿದ್ದಾರೆ.
ಕರ್ನಾಟಕ ಬಂದ್​ – ನಾಳೆಯಿಂದ 31ರ ತನಕ ಕರ್ನಾಟಕ ಸಂಪೂರ್ಣ ಲಾಕ್​ಡೌನ್: 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿ ನಿಯಂತ್ರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − five =
Remember me
