ನೆಲಮಂಗಲ:ಕಂಟೇನರ್​ ವಾಹನವೊಂದು ಬ್ರೇಕ್​ಫೇಲ್​ಗೀಡಾದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಅದರಲ್ಲೂ ಮೂರು ಕಂಟೇನರ್​, 1 ಐಷರ್ ವಾಹನ, 3 ಕಾರು, 2 ಬೈಕ್ ಮತ್ತು ಒಂದು ತಳ್ಳುವ ಗಾಡಿ ಅಪಘಾತಕ್ಕೆ ಒಳಗಾಗಿವೆ.
ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಸರಣಿ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಂಟೇನರ್ ವಾಹನವೊಂದು ನೆಲಮಂಗಲದ ಜಾಸ್ ಟೋಲ್ ಬಳಿ ಬ್ರೇಕ್​ಫೇಲ್​ಗೆ ಒಳಗಾಗಿತ್ತು. ಪರಿಣಾಮವಾಗಿ ಸರಣಿ ಅಪಘಾತ ಸಂಭವಿಸಿದ್ದಲ್ಲದೆ, ಭಾರಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸಂಚಾರ ಕೂಡ ಅಸ್ತವ್ಯಸ್ತಗೊಂಡಿತ್ತು.
ಈ ಒಂದು ಕಂಟೇನರ್​ ಬ್ರೇಕ್​ಫೇಲ್​ನಿಂದ 3 ಕಂಟೇನರ್, 1 ಐಷರ್​ ವಾಹನ, 3 ಕಾರು, 2 ಬೈಕ್ ಹಾಗೂ ರಸ್ತೆ ಪಕ್ಕದಲ್ಲಿ ಸೌತೆಕಾಯಿ ಮಾರಾಟ ಮಾಡುತ್ತಿದ್ದ ತಳ್ಳುವ ಗಾಡಿ ಕೂಡ ಅಪಘಾತಕ್ಕೆ ಒಳಗಾಗಿದೆ. ಅದಾಗ್ಯೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕಂಟೇನರ್ ವಾಹನ ಡಿಕ್ಕಿ ಪರಿಣಾಮ ಕಟ್ಟಿಗೆ ತುಂಡು ತುಂಬಿಕೊಂಡು ಹೋಗುತ್ತಿದ್ದ ಐಷರ್ ಪಲ್ಟಿಯಾಗಿ, ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ಐಸಿಯುನಲ್ಲಿ ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಆಗ್ತಿತ್ತು ಅಂತ ಆಫ್ ಮಾಡಿದ ವೃದ್ಧೆ; ಸಾವಿಗೀಡಾದ ರೋಗಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
