ಬೆಂಗಳೂರು:ಅಕ್ಕಪಕ್ಕದ ಮನೆಯವರ ಜಗಳ ಬಿಡಿಸಲು ಹೋದ ಬಿಬಿಎಂಪಿ ನೌಕರರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ನಂದಿನಿ ಲೇಔಟ್ ಸಮೀಪದ ಕೂಲಿನಗರದ (ಜೈಭುವನೇಶ್ವರಿನಗರ) ಕಾರ್ತಿಕ್ (24) ಕೊಲೆಯಾದ ವ್ಯಕ್ತಿ. ಈತ ಬಿಬಿಎಂಪಿ ಕಸದ ಆಟೋ ಚಾಲಕ. ಭಾನುವಾರ ಸಂಜೆ 5.30ರಲ್ಲಿ ಘಟನೆ ನಡೆದಿದ್ದು, ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ಗುತ್ತಿಗೆ ಆಧಾರದ ಮೇಲೆ ಕಸದ ಆಟೋ ಚಾಲಕನಾಗಿ ಕಾರ್ತಿಕ್ ಕೆಲಸ ಮಾಡುತ್ತಿದ್ದ. ಭಾನುವಾರ ಕೂಲಿನಗರದಲ್ಲಿ ಅಕ್ಕಪಕ್ಕದ ಮನೆಯವರು ಮಕ್ಕಳ ಆಟದ ವಿಚಾರಕ್ಕೆ ಜಗಳ ಮಾಡಿಕೊಳ್ಳುತ್ತಿದ್ದರು. ಒಂದು ಮನೆಯವರು ಬೇರೆ ಏರಿಯಾದ ಯುವಕರನ್ನು ಬೆಂಬಲಕ್ಕೆ ಕರೆಸಿದ್ದರು. ಇದೇ ವೇಳೆ ಸ್ಥಳಕ್ಕೆ ಬಂದ ಕಾರ್ತಿಕ್, ಅಕ್ಕಪಕ್ಕದವರು ಯಾಕೆ ಕಿತ್ತಾಡುತ್ತೀರ ಸುಮ್ಮನಿರಿ. ಮಕ್ಕಳ ವಿಚಾರಕ್ಕೆ ಬೇರೆ ಏರಿಯಾದ ಯುವಕರನ್ನು ಯಾಕೆ ಕರೆಸಿದ್ದು ಎಂದು ಬುದ್ಧಿ ಹೇಳಿ ಜಗಳ ಬಿಡಿಸಲು ಮುಂದಾಗಿದ್ದ. ಎರಡು ಗುಂಪಿನ ಪೈಕಿ ಅರುಣ್ ಗ್ಯಾಂಗ್ ಸಹಚರರು, ಕುಪಿತಗೊಂಡು ಮಾರಕಾಸ್ತ್ರಗಳಿಂದ ಕಾರ್ತಿಕ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ತೀವ್ರ ರಕ್ತಸ್ರಾವ ಉಂಟಾಗಿ ಕಾರ್ತಿಕ್ ಸ್ಥಳದಲ್ಲೇ ಅಸುನೀಗಿದ್ದಾನೆ. ವಿಷಯ ತಿಳಿದ ನಂದಿನಿ ಲೇಔಟ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸ್ಥಳೀಯರು ನೀಡಿದ ಹೇಳಿಕೆ ಮೇರೆಗೆ ಆರೋಪಿಗಳ ಸುಳಿವು ಲಭ್ಯವಾಗಿದೆ. ಬಂಧನಕ್ಕಾಗಿ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂದಿನಿ ಲೇಔಟ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಪೊಲೀಸ್ ಕೈಗೇ ಕಚ್ಚಿದ ಯುವತಿ; ಚಿಕ್ಕಪೇಟೆಯಲ್ಲಿ ಸಣ್ಣ ವಿಷಯಕ್ಕೇ ನಡೆಯಿತು ದೊಡ್ಡ ರಾದ್ಧಾಂತ!

ಆನ್​ಲೈನ್​ನಲ್ಲಿ ಗೋಣಿಚೀಲ ಖರೀದಿಸಲು ಹೋಗಿ 1.13 ಲಕ್ಷ ರೂ. ಕಳೆದುಕೊಂಡ ಶಿಕ್ಷಕಿ!

ಬಾಲಕಿಯರಿಬ್ಬರ ಮೇಲೆ ಗ್ಯಾಂಗ್​ರೇಪ್​: ರಾತ್ರಿ ಇಡೀ ಮಕ್ಕಳು ಹೊರಗಿದ್ದಾಗ ಮನೆಯವರು ಯಾಕೆ ಸುಮ್ಮನಿದ್ದರು ಎಂದ ಸಿಎಂ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
