ಬೆಂಗಳೂರು:ವಿಚ್ಛೇದಿತೆಯ ಒಡನಾಟ ಹೊಂದಿ ಅವಳೊಂದಿಗೆ ಲಿವಿಂಗ್ ಟುಗೆದರ್​ನಲ್ಲಿದ್ದ ಪ್ರೇಮಿಗೆ ಕೊನೆಗೆ ಆಕೆಯೇ ಕೈಕೊಟ್ಟು ಹೋಗಿದ್ದಾಳೆ. ಇದಕ್ಕೆ ಪ್ರತೀಕಾರವಾಗಿ ಶ್ರೀನಿವಾಸನೆಂಬ ಈತ ಮಾಡಿದ ಕೆಲಸ ಇವನು ಮಾತ್ರವಲ್ಲದೆ ಇನ್ನು ಐದು ಮಂದಿ ಸೆರೆವಾಸ ಅನುಭವಿಸುವಂತೆ ಮಾಡಿದೆ.
ಈ ಪ್ರಕರಣ ಸಂಬಂಧ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ರಾಜಗೋಪಾಲನಗರದ ಶ್ರೀನಿವಾಸ್ (32) ಹಾಗೂ ಆತನ ಸಹಚರರಾದ ಪ್ರತಾಪ್ (28), ಆಕಾಶ್ (31), ಹುಚ್ಚೇಗೌಡ (34), ಶಿವ (31), ಗಂಗಾಧರ್ (34) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ:#MarriageStrike : ಮದುವೆ ವಿರುದ್ಧ ಪುರುಷರ ಅಭಿಯಾನ!
ಆರೋಪಿ ಶ್ರೀನಿವಾಸ್ ಫೈನಾನ್ಸ್ ಕಂಪನಿಯಲ್ಲಿ ವಾಹನಗಳನ್ನು ಸೀಜ್ ಮಾಡುವ ಕೆಲಸ ಮಾಡಿಕೊಂಡಿದ್ದ. ಈತ ಆಂಧ್ರಹಳ್ಳಿ ಮುಖ್ಯರಸ್ತೆಯ ನಿವಾಸಿ 23 ವರ್ಷದ ಯುವತಿಯನ್ನು ಪ್ರೀತಿಸಿ 4 ತಿಂಗಳಿಂದ ಆಕೆಯೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿ ವಾಸಿಸುತ್ತಿದ್ದ. ಜ.17ರಂದು ಇಬ್ಬರ ನಡುವೆ ಸಣ್ಣ-ಪುಟ್ಟ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಇದರಿಂದ ನೊಂದು ಯುವತಿ ಆರೋಪಿ ಶ್ರೀನಿವಾಸನನ್ನು ತೊರೆದಿದ್ದಳು. ಪದೇಪದೆ ಯುವತಿಗೆ ಕರೆ ಮಾಡುತ್ತಿದ್ದ ಆರೋಪಿ, ಮತ್ತೆ ತನ್ನೊಂದಿಗೆ ಬಂದು ಇರುವಂತೆ ಒತ್ತಾಯ ಮಾಡುತ್ತಿದ್ದ. ಆದರೆ, ಯುವತಿ ಇದಕ್ಕೆ ನಿರಾಕರಿಸಿದ್ದಳು.
ಇದನ್ನೂ ಓದಿ:ಹೆಂಡತಿಯೊಂದಿಗೆ ಜಗಳವಾಡಿದ ಡಾಕ್ಟರ್​ ಸಾವು; ಬೆಡ್​ರೂಮ್​ನಲ್ಲಿ ಹೊತ್ತಿ ಉರಿದ ಬೆಂಕಿ..!
ಇದರಿಂದ ಸಿಟ್ಟಾದ ಶ್ರೀನಿವಾಸ ಆಕೆಯ ಸಹೋದರ ವೆಂಕಟೇಶ್​ ಎಂಬಾತನನ್ನು ಅಪಹರಿಸಿದ್ದ. ಜ.20ರಂದು ರಾತ್ರಿ 9 ಗಂಟೆಗೆ ವೆಂಕಟೇಶ್ ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ಆತನನ್ನು ಭೇಟಿಯಾದ ಶ್ರೀನಿವಾಸ್, ನಿನ್ನ ಬಳಿ ಸ್ವಲ್ಪ ಮಾತನಾಡಬೇಕು ಎಂದು ಕಾರಿನಲ್ಲಿ ಹೊಸಕೋಟೆ-ಕೋಲಾರಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದ. ಅಲ್ಲದೆ ತನ್ನ ಜೊತೆ ಬರದಿದ್ದರೆ ಸಹೋದರನನ್ನು ಕೊಲೆ ಮಾಡುವುದಾಗಿ ಆಕೆಗೆ ಕರೆ ಮಾಡಿ ಬೆದರಿಕೆಯನ್ನು ಒಡ್ಡಿದ್ದ.
ಇದನ್ನೂ ಓದಿ:ವಿದೇಶದಲ್ಲಿ ಸದ್ ಮಾಡ್ತಿದಾರೆ ಸಿದ್: ಆಸ್ಟ್ರೇಲಿಯನ್​ ಸಿನಿಮಾಗೆ ಕನ್ನಡಿಗನ ಸಂಗೀತ ನಿರ್ದೇಶನ
ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗಿಳಿದ ಪೊಲೀಸರು ಶ್ರೀನಿವಾಸನ ಜತೆಗೆ ಆತನಿಗೆ ಸಹಕರಿಸಿದ ಐವರು ಸಹಚರರನ್ನು ಕೂಡ ಬಂಧಿಸಿದ್ದಾರೆ.
‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + fourteen =
Remember me
