ಶಿವಮೊಗ್ಗ:ಮಟನ್ ತರಲೆಂದು ಸ್ನೇಹಿತನ ಜತೆ ಬೈಕ್‌ನಲ್ಲಿ ತೆರಳಿದ್ದ ವ್ಯಕ್ತಿಯೊಬ್ಬರು ಜೀವಂತವಾಗಿ ಮರಳದ ಪ್ರಕರಣವೊಂದು ನಡೆದಿದೆ. ಈ ಪ್ರಕರಣದಲ್ಲಿ ಅವರನ್ನು ಮಿನಿಲಾರಿಯೊಂದು ಬೈಕ್​ಸಮೇತ ಎಳೆದೊಯ್ದಿದೆ. ಇಂಥದ್ದೊಂದು ಭೀಕರ ಅಪಘಾತ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗದ ಬಿ.ಬಿ.ಸ್ಟ್ರೀಟ್‌ನ ಚಂದ್ರಶೇಖರ್ (65) ಸಾವಿಗೀಡಾದವರು. ಭಾನುವಾರ ಬೆಳಗ್ಗೆ ಮಲವಗೊಪ್ಪದಲ್ಲಿ ಮಿನಿ ಲಾರಿಯೊಂದು ಡಿಕ್ಕಿಯಾಗಿ ಇವರು ಮೃತಪಟ್ಟಿದ್ದಾರೆ. ಇವರು ಮಟನ್ ತರಲೆಂದು ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ.
ಶಿವಮೊಗ್ಗದಿಂದ ಭದ್ರಾವತಿಗೆ ತೆರಳುತ್ತಿದ್ದ ಮಿನಿ ಲಾರಿ ಚಂದ್ರಶೇಖರ್​​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಚಕ್ರದಡಿ ಸಿಲುಕಿದ್ದ ಅವರನ್ನು ಬೈಕ್ ಸಮೇತ ಮಿನಿ ಲಾರಿ ಸ್ವಲ್ಪ ದೂರ ಎಳೆದೊಯ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಹಿಂಬದಿ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಿನಿ ಲಾರಿ ಚಾಲಕನ ಮೇಲೆ ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೀಕರ ಅಪಘಾತ: 30ಕ್ಕೂ ಅಧಿಕ ಪ್ರಯಾಣಿಕರಿದ್ದ ಬಸ್ ಪಲ್ಟಿ!

ಮೋದಿ-ಯೋಗಿ ಬಿಟ್ಟರೆ ಇನ್ಯಾರು?; 25 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಖರ ಹಿಂದೂವಾದಿಗಳೇ ಅಭ್ಯರ್ಥಿಗಳು!

ಯಂತ್ರಕ್ಕೆ ಸೀರೆ ಸಿಲುಕಿ ಪ್ರಾಣ ಕಳ್ಕೊಂಡ ಮಹಿಳೆ; ಗೋವಿನಜೋಳ ರಾಶಿ ಮಷಿನ್​ಗೆ ಸಿಕ್ಕಿ ದೇಹ ಛಿದ್ರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 14 =
Remember me
