ಬೆಂಗಳೂರು/ಮಂಗಳೂರು:ಕಳೆದೊಂದು ವಾರದಿಂದ ಏರಿಕೆಯಲ್ಲೇ ಇರುವ ಈರುಳ್ಳಿ ಬೆಲೆ ಮಂಗಳವಾರವೂ ಏರುಗತಿ ಮುಂದುವರಿಸಿದೆ. ಸಗಟು ಮಾರುಕಟ್ಟೆಯಲ್ಲಿ 70ರಿಂದ 75 ರೂ. (ಕೆಜಿಗೆ) ಇರುವ ಈರುಳ್ಳಿ ದರ ರಿಟೇಲ್ ಮಾರುಕಟ್ಟೆಯಲ್ಲಿ 90ರಿಂದ 95 ರೂ.ಗೆ ಮಾರಾಟವಾಗುತ್ತಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ನಿರಂತರ ಮಳೆ ಆರ್ಭಟಕ್ಕೆ ಬೆಳೆ ನಾಶವಾಗಿದ್ದು, ಉತ್ಪಾದನೆ ಸ್ಥಗಿತವಾಗಿದೆ. ಇದರಿಂದ ಸರಬರಾಜು ಶೇ.50 ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಇದು ಪ್ರಮುಖ ಕಾರಣವಾಗಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಿಂದ ಅಂದಾಜು ಪ್ರತಿನಿತ್ಯ 3.75 ಲಕ್ಷದಿಂದ 5 ಲಕ್ಷ ಕೆಜಿಯಷ್ಟು ಬೆಂಗಳೂರಿಗೆ ಆಮದಾಗುತ್ತಿದೆ. ಸದ್ಯ 100 ಕೆಜಿ ಚೀಲಕ್ಕೆ 7 ಸಾವಿರದಿಂದ 7.500 ರೂ. ಇದೆ. ಮಳೆ ಹೀಗೆ ಮುಂದುವರಿದರೆ ಪ್ರತಿ ಚೀಲಕ್ಕೆ 10 ಸಾವಿರ ರೂ. ದಾಟಬಹುದು ಎನ್ನುತ್ತಾರೆ ಈರುಳ್ಳಿ ಮಂಡಿ ಮಾಲೀಕರು.
ಕರಾವಳಿಯಲ್ಲಿ ಜಿಗಿತ:ಕರಾವಳಿಯಲ್ಲಿ ವಾರದ ಹಿಂದೆ 40 ರೂ. ಇದ್ದ ಕೆ.ಜಿ. ಈರುಳ್ಳಿ ದರ 75 ರೂ.ಗೆ ಏರಿದೆ. ಮಂಗಳೂರು ಎಪಿಎಂಸಿಯಲ್ಲಿ ಸಣ್ಣ ಈರುಳ್ಳಿ 60 ರೂ.ನಿಂದ ಆರಂಭಗೊಂಡು ದೊಡ್ಡ ಈರುಳ್ಳಿ 85 ರೂ.ವರೆಗೆ ಏರಿದೆ.
ರಾಜ್ಯದ ಮಾರುಕಟ್ಟೆಗೆ ವಿವಿಧ ರಾಷ್ಟ್ರಗಳಿಂದ ಖಾದ್ಯ ತೈಲದ ಆಮದು ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆ ಲೀಟರ್​ಗೆ 110 ರೂ.ಗೆ ಇಳಿಕೆಯಾಗಿದೆ. ಜತೆಗೆ ಪಾಮೋಲಿನ್ ಎಣ್ಣೆ ಬೆಲೆಯೂ ಇಳಿಕೆಯಾಗಿದೆ. ಪ್ರತಿ ವರ್ಷ ಸೆಪ್ಟಂಬರ್​ನಿಂದ ಹಬ್ಬ, ಮದುವೆ ಸಮಾರಂಭಗಳು ಆರಂಭ ಆಗುವುದರಿಂದ ಖಾದ್ಯ ತೈಲ ಬೆಲೆ ಏರಿಳಿತವಾಗುತ್ತದೆ. ಸದ್ಯ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಾಸವಾದ್ದರಿಂದ ಕಳೆದ ತಿಂಗಳು (ಸೆ.15) ಸೂರ್ಯಕಾಂತಿ ಎಣ್ಣೆ ಲೀಟರ್​ಗೆ 140 ರೂ. ಹಾಗೂ ಪಾಮೋಲಿನ್ (ತಾಳೆ) 110 ರೂ.ಗೆ ಏರಿಕೆಯಾಗಿತ್ತು. ಒಂದು ವಾರದಿಂದ ಉಕ್ರೇನ್ ಮತ್ತು ಮಲೇಷ್ಯಾದಿಂದ ಖಾದ್ಯ ತೈಲ ಆಮದು ದಿಢೀರನೆ ಏರಿಕೆಯಾದ್ದರಿಂದ ಖಾದ್ಯ ತೈಲ ಬೆಲೆ ಮತ್ತೆ ಇಳಕೆಯಾಗಿದೆ. ಹಿಂದಿನ ಬೆಲೆ ಏರಿಕೆ ಬಿಸಿಯಿಂದ ಗ್ರಾಹಕರು, ಹೋಟೆಲ್ ಉದ್ಯಮದಾರರು ಖಾದ್ಯ ತೈಲ ಬಳಕೆ ಕಡಿಮೆ ಮಾಡಿದ್ದಾರೆ. ಪರಿಣಾಮ, ಖರೀದು ಪ್ರಮಾಣ ಸಾಮಾನ್ಯ ದಿನಕ್ಕಿಂತ ಶೇ.30 ಕಡಿಮೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
