ಬೆಂಗಳೂರು:ರಾಜ್ಯದಲ್ಲಿ ಈ ವರ್ಷ ಸರಿಯಾಗಿ ಮಳೆಯಾಗದೆ ಬರಗಾಲ ಉಂಟಾದ ಪರಿಣಾಮ ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳು ಬೆಲೆ ಗಗನಕ್ಕೇರಿದೆ. ಇದೀಗ ಈರುಳ್ಳಿಯ ಬೆಲೆ ದಿನದಿಂದ ದಿನ್ಕಕೆ ಹೆಚ್ಚಳವಾಗುತ್ತಿದ್ದು, ಗ್ರಾಹಕರ ಕಣ್ಣಲ್ಲಿ ನೀರು ಬರಿಸುತ್ತಿದೆ.
ಬೆಂಗಳೂರಿನಲ್ಲಿ ಕಳೆದೆರಡು ವಾರಗಳಿಂದ ನಿರಂತರವಾಗಿ 35 ರಿಂದ 40 ರೂ.ಗಳ ನಡುವೆ ಇದ್ದ ಈರುಳ್ಳಿಯ ಸಗಟು ಬೆಲೆ ಗುರುವಾರದ ವೇಳೆಗೆ ಕೆಜಿಗೆ 65 ರೂಪಾಯಿಗೆ ಹೆಚ್ಚಳವಾಗಿದೆ.
ಅನಾವೃಷ್ಟಿಯಿಂದ ಈ ಬಾರಿ ರಾಜ್ಯದಲ್ಲಿ ಈರುಳ್ಳಿ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗಿದೆ. ಪಕ್ಕದ ಮಹಾರಾಷ್ಟ್ರ ಹಾಗೂ ಗುಜರಾತ್‌ನಿಂದಲೂ ಈ ವೇಳೆಗೆ ಈರುಳ್ಳಿ ಪೂರೈಕೆ ಆಗದಿರುವುದರಿಂದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಹೀಗೆಯೇ ಮುಂದುವರೆದರೆ ಶೀಘ್ರವೇ ದರ ಏರಿಕೆಯಾಗಬಹುದು ಎಂದು ವರ್ತಕರು ವಿಶ್ಲೇಷಿಸಿದ್ದಾರೆ.
ಗುರುವಾರ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳಪೆ, ಸಾಧಾರಣ ಗುಣಮಟ್ಟದ ಈರುಳ್ಳಿಯೂ ಕ್ವಿಂಟಲ್‌ಗೆ ₹3800-4200 ನಂತೆ ಮಾರಾಟವಾಗಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ (NAFED) ಮೂಲಕ ಬೆಲೆ ನಿಯಂತ್ರಣದ ಉದ್ದೇಶಕ್ಕಾಗಿ ಬೆಂಗಳೂರಿಗೆ ಪೂರೈಸುತ್ತಿರುವ ಈರುಳ್ಳಿಯೂ ಕ್ವಿಂಟಲ್‌ಗೆ ₹4000- 4600 ನಂತೆ ಮಾರಾಟವಾಗಿ ದಾಖಲೆ ಬರೆದಿದೆ. ಅತ್ಯುತ್ತಮ ಎಂದರೆ ಮಹಾರಾಷ್ಟ್ರದ ಈರುಳ್ಳಿ ₹5000 – ₹6000 ವರೆಗೆ ವ್ಯಾಪಾರವಾದ ಮಧ್ಯಗಿದೆ. ಈ ಗುಣಮಟ್ಟದ ಈರುಳ್ಳಿ ಪ್ರಮಾಣ ಕಡಿಮೆ ಇದೇ ಎನ್ನಲಾಗಿದೆ.
ಇದನ್ನೂ ಓದಿ:VIDEO| ವಿದೇಶಕ್ಕೆ ಹಾರಲು ಸಜ್ಜಾದ ವಾರಣಾಸಿಯ ಮತ್ತೊಂದು ಬೀದಿ ನಾಯಿ; ವೀಸಾ, ಪಾಸ್​​​ಪೋರ್ಟ್​ ಬಂದಾಯ್ತು
ಸಾಗಾಟ ವೆಚ್ಚ, ಕೂಲಿ, ಮತ್ತಿತರ ಕಾರಣದಿಂದ ಚಿಲ್ಲರೆ ಮಾರು ಪ್ರವ ಕಟ್ಟೆಗೆ ತಲುಪುವ ಹೊತ್ತಿಗೆ ಈರುಳ್ಳಿ ಬೆಲೆ ಮತ್ತಷ್ಟು ಹೆಚ್ಚಾಗುತ್ತಿದೆ. ನಗರದ ಕೆ.ಆರ್.ಮಾರುಕಟ್ಟೆ, ಶೇಷಾದ್ರಿ ಪುರ, ಮಲ್ಲೇಶ್ವರ, ಜಯನಗರ ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆಜಿಗೆ 250- 265ವರೆಗೆ ಮಾರಾಟವಾಗುತ್ತಿದೆ. ಹಾಪ್‌ಕಾಮ್, ಮಾಲ್‌ಗಳಲ್ಲಿ ಹೆಚ್ಚು ಬೆಲೆ ಇದೆ. ಕಳೆದ ಹದಿನೈದು ದಿನಗಳ ಹಿಂದೆ ₹100 ರೂ.ಗೆ 3 -4 ಕೆಜಿ ಲಭ್ಯ ವಾಗುತ್ತಿತ್ತು. ಆದರೆ, ಈಗ ಒಂದೂವರೆ ಎರಡು ಕೆಜಿ ಸಿಗುತ್ತಿದೆ ಎಂದು ವರ್ತಕರೊಬ್ಬರು ತಿಳಿಸಿದ್ದಾರೆ.
ರಾಜ್ಯದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆ ಎನಿಸಿದ ಯಶವಂತಪುರ ಎಪಿಎಂಸಿಗೆ ಸೀಸನ್ ಇರುವ ಈ ವೇಳೆಗೆ ಕನಿಷ್ಠವೆಂದರೂ ಒಂದು ಲಕ್ಷ ಮೂಟೆ ಈರುಳ್ಳಿ ಬರುತ್ತಿತ್ತು. ಆದರೆ, ಸದ್ಯ 50-55 ಸಾವಿರ ಮೂಟೆಗಳುಮಾತ್ರ ಬರುತ್ತಿವೆ. ಬಾಗಲಕೋಟೆ, ಗದಗ, ವಿಜಯಪುರ ಸೇರಿ ಉತ್ತರ ಕರ್ನಾಟಕ ಭಾಗದಿಂದ ನಿರೀಕ್ಷಿತ ಪ್ರಮಾಣದಷ್ಟು ಬರುತ್ತಿಲ್ಲ.
ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದಲ್ಲೂ ಮಳೆ ವಿಳಂಬ ಹಿನ್ನೆಲೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್ ಮಧ್ಯಂತರದಿಂದ ಆ ರಾಜ್ಯಗಳಿಂದ ಪೂರೈಕೆ ಆಗಬಹುದು ಎನ್ನಲಾಗಿದೆ. ಸದ್ಯ ಬೆಂಗಳೂರಿಂದ ತಮಿಳುನಾಡು, ಆಂಧ್ರಕ್ಕೆ ಸ್ವಲ್ಪ ಪ್ರಮಾಣದ ಈರುಳ್ಳಿ ರಫ್ತಾಗುತ್ತಿರುವುದು ಬಿಟ್ಟರೆ ಉಳಿದ ದಕ್ಷಿಣ ರಾಜ್ಯಗಳಿಗೆ ಹೋಗುತ್ತಿಲ್ಲ ಎಂದು ಎಪಿಎಂಸಿ ವರ್ತಕರೊಬ್ಬರು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eighteen =
Remember me
