ಬೆಂಗಳೂರು:ರಾಜ್ಯ ಸರ್ಕಾರ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣವನ್ನು ರದ್ದು ಮಾಡಿದ್ದರೂ ಬಹುತೇಕ ಶಾಲೆಗಳು ತರಗತಿ ಮುಂದುವರಿಸುತ್ತಿರುವುದು ಕಂಡು ಬಂದಿದೆ.
ಎಲ್​ಕೆಜಿಯಿಂದ 5ನೇ ತರಗತಿವರೆಗೆ ಆನ್​ಲೈನ್ ಶಿಕ್ಷಣ ರದ್ದುಗೊಳಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬುಧವಾರ ಘೋಷಣೆ ಹೊರಡಿಸಿದ್ದರೂ ಈ ನಿರ್ಬಂಧ ಇನ್ನೂ ಆದೇಶದ ರೂಪದಲ್ಲಿ ತಲುಪಿಲ್ಲವೆಂದು ಬಹುತೇಕ ಖಾಸಗಿ ಶಾಲೆಗಳು ಆನ್​ಲೈನ್ ತರಗತಿ ಮುಂದುವರಿಸಿವೆ.
ಈ ಸಂಬಂಧ ನೂರಾರು ಪಾಲಕರು ಖಾಸಗಿ ಶುಲ್ಕ ಹೆಚ್ಚಳದ ದೂರು ಸ್ವೀಕಾರಕ್ಕಾಗಿ ತೆರೆದಿರುವ ಸಹಾಯವಾಣಿಗೆ ಕರೆ ಮಾಡಿ ಆನ್​ಲೈನ್ ತರಗತಿ ನಡೆಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ.ಇದನ್ನೂ ಓದಿ:ರಾಜ್ಯದಲ್ಲಿ 6 ಮತ್ತು 7ನೇ ತರಗತಿ ಮಕ್ಕಳಿಗೂ ಆನ್​ಲೈನ್​​ ಕ್ಲಾಸ್​ ರದ್ದು?
ಪ್ರೀ-ರೆಕಾರ್ಡ್: ಮತ್ತಷ್ಟು ಶಾಲೆಗಳು ಆನ್​ಲೈನ್ ತರಗತಿ ಬದಲಾಗಿ ಪೂರ್ವ ನಿಯೋಜಿತವಾಗಿ ಪಾಠಗಳ ಬೋಧನೆಯನ್ನು ವಿಡಿಯೋ ರೆಕಾರ್ಡ್ ಮಾಡಿ ಯು-ಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿ ಅದರ ಲಿಂಕ್ ಅನ್ನು ಪಾಲಕರ ಮೊಬೈಲ್​ಗೆ ಕಳುಹಿಸುತ್ತಿವೆ.
ಈ ರೀತಿಯ ಆಡಿಯೋ ಅಥವಾ ವಿಡಿಯೋ ಚಿತ್ರೀಕರಿಸಿದ ಪ್ರೀ-ರೆಕಾರ್ಡ್​ಗಳನ್ನು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಕಳುಹಿಸುವಂತಿಲ್ಲ. ಸಮಿತಿ ಈ ಎಲ್ಲ ವಿಚಾರಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲಿದೆ.
| ಎಸ್. ಸುರೇಶ್ ಕುಮಾರ್ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 10 =
Remember me
