ಬೆಂಗಳೂರು: ಆನ್​ಲೈನ್ ತರಗತಿಗಳಲ್ಲಿ ನೆಟ್​ವರ್ಕ್ ಸಮಸ್ಯೆ ಹೆಚ್ಚಾಗಿದ್ದು ವಿದ್ಯಾರ್ಥಿಗಳಿಗೆ ಕಿರಿರಿ ಉಂಟು ಮಾಡುತ್ತಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ (ಎಂಎಚ್​ಆರ್​ಡಿ) ಸಚಿವಾಲಯ ಆನ್​ಲೈನ್ ಕ್ಲಾಸ್​ಗೆ ಹಸಿರುನಿಶಾನೆ ತೋರಿದ ಬೆನ್ನಲ್ಲೇ ಎಲ್ಲ ಖಾಸಗಿ ಶಾಲೆಗಳು ಪೂರ್ವ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಎಲ್ಲ ತರಗತಿಗೆ ಆನ್​ಲೈನ್ ಕ್ಲಾಸ್ ಆರಂಭಿಸಿವೆ.
ನಗರದ ಹೊರ ವಲಯಗಳಾದ ಬನ್ನೇರುಘಟ್ಟ, ಅನೇಕಲ್, ರಾಜಾನುಕುಂಟೆ, ಸುಂಕದಕಟ್ಟೆ ಸೇರಿ ಹಲವಾರು ಪ್ರದೇಶಗಳಲ್ಲಿ ಮೊಬೈಲ್ ಫೋನ್ ನೆಟ್ ವರ್ಕ್ ಮತ್ತು ಇಂಟರ್​ನೆಟ್ ಸಮಸ್ಯೆಯಿಂದಾಗಿ ಮಕ್ಕಳು ಆನ್​ಲೈನ್ ತರಗತಿಯಲ್ಲಿ ಪಾಲ್ಗೊಳ್ಳುವುದು ಪ್ರತಿನಿತ್ಯದ ಸವಾಲಾಗಿದೆ. ಒಂದುವೇಳೆ ಕ್ಲಾಸ್​ಗೆ ಲಾಗಿನ್ ಆದರೂ ಶಿಕ್ಷಕರು ಮಾಡುವ ಬೋಧನೆ ಕೇಳಿಸುವುದು ಇಲ್ಲ, ಕಾಣಿಸುವುದೂ ಇಲ್ಲ. ನೆಟ್​ವರ್ಕ್​ಗಾಗಿ ಮನೆ ಮೇಲೆ ಹೋದರೂ ಪ್ರಯೋಜನವಾಗುತ್ತಿಲ್ಲ.ಆನ್​ಲೈನ್ ತರಗತಿಗೆ ಹೆಚ್ಚುವರಿ ಶುಲ್ಕ ಪಡೆಯಬಾರದು. ಇದು ಶಿಕ್ಷಣದ ಮತ್ತೊಂದು ಪರ್ಯಾಯ ಮಾರ್ಗವಷ್ಟೇ ಎಂದಿದ್ದರೂ ಶಾಲೆಗಳು ಪಾಲಕರಿಂದ ಹಣ ವಸೂಲಿ ಮಾಡಿವೆ. ಇದರಿಂದ ಬೇಸತ್ತ ಪಾಲಕರು ಸಮಸ್ಯೆಯನ್ನು ಶಾಲೆ ಮುಂದಿಟ್ಟಿದ್ದಾರೆ. ಹೀಗಾಗಿ ಪಾವತಿಸಿರುವ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ, ಶಾಲೆಗಳು ಶುಲ್ಕ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಹೇಳಿವೆ.
ಇದನ್ನೂ ಓದಿ:ವಾಹಿನಿ ಮುಂದೆ ಕುಳಿತು ಪಾಠ ಆಲಿಸಿದ ಮಕ್ಕಳು
ನೆಟ್​ವರ್ಕ್ ದೊರಕುವಂತೆ ಮಾಡಲು ಟವರ್ ಅಳವಡಿಸಲು ಜಾಗ ನೀಡುವುದಾಗಿ ಪಾಲಕರು ಟೆಲಿಕಾಂ ಸೇವಾ ಕಂಪನಿಗಳಿಗೆ ಕರೆ ಮಾಡಿ ಕೇಳಿದರೂ ಯಾವುದೇ ಸಹಾಯವಾಗುತ್ತಿಲ್ಲ. ಇದರಿಂದ ಬೇಸತ್ತಿರುವ ಪಾಲಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಮ್ಮಾ…. ಒಮ್ಮೆ ನಿನ್ನ ಕಣ್ತುಂಬಿಕೊಂಡು ಬಿಡುವೆ: ಐಸಿಯು ಕಿಟಕಿ ಬಳಿ ಕುಳಿತ ಪ್ಯಾಲೆಸ್ತೈನ್ ಯುವಕನ ಕಣ್ಣೀರ ಕಥೆ
ಸರ್ಕಾರದ ನಿರ್ಲಕ್ಷ್ಯ: ಆನ್​ಲೈನ್ ಕ್ಲಾಸ್ ಬಗ್ಗೆ ತಜ್ಞರ ವರದಿ ಪಡೆದಿರುವ ಶಿಕ್ಷಣ ಇಲಾಖೆಯು ವರದಿ ಪರಿಶೀಲಿಸಿ ಸೂಕ್ತ ಸೂಚನೆಗಳನ್ನು ಹೊರಡಿಸಬೇಕಿದೆ. ಆದರೆ, ಈ ಬಗ್ಗೆ ಯಾವುದೇ ಗಮನ ನೀಡುತ್ತಿಲ್ಲ. ಮತ್ತೊಂದು ಕಡೆ ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿ ಆನ್​ಲೈನ್ ಕ್ಲಾಸ್ ಒಂದು ರೀತಿಯಲ್ಲಿ ಮಕ್ಕಳ ಸಂವಿಧಾನದ ಹಕ್ಕು ಎಂದಿದೆ. ಇದರಿಂದಾಗಿ ಪಾಲಕರು ನೆಟ್​ವರ್ಕ್ ಇಲ್ಲದಿದ್ದರೂ, ಅರ್ಥವಾಗದಿದ್ದರೂ ಆನ್​ಲೈನ್ ಕ್ಲಾಸಿಗಾಗಿ ಮೊಬೈಲ್​ಫೋನ್ ಮುಂದೆ ಮಕ್ಕಳನ್ನು ಕೂರಿಸುವುದು ಅನಿವಾರ್ಯವಾಗಿದೆ.
710 ಕೋಟಿ ರೂಪಾಯಿ ಲಾಟರಿ ಗೆದ್ರೆ ನೀವೇನು ಮಾಡ್ತಿದ್ರಿ?- ಆದ್ರೆ ಗೆದ್ದವನು ಮಾಡಿದ್ದೇನು ನೋಡಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen − 5 =
Remember me
