ದೇವರಾಜ್ ಎಲ್. ಬೆಂಗಳೂರು
ಆಡುತ್ತಾ, ಕುಣಿಯುತ್ತ ಕಲಿಯಬೇಕಾದ ಶಾಲಾ ಮಕ್ಕಳನ್ನು ಗಂಟೆಗಟ್ಟಲೆ ಮೊಬೈಲ್, ಲ್ಯಾಪ್​ಟಾಪ್ ಮುಂದೆ ಕೂರಿಸಿ ಪಾಠ ಹೇಳಿಕೊಡುವ ಆನ್​ಲೈನ್ ತರಗತಿಗಳಿಗೆ ಪಾಲಕರ ವಿರೋಧ ತೀವ್ರಗೊಂಡಿರುವ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲೂ ಆಕ್ರೋಶ ಭುಗಿಲೆದ್ದಿದೆ. ಕರೊನಾ ಕಾರಣಕ್ಕಾಗಿ ಮಕ್ಕಳ ವಯಸ್ಸು, ಆರೋಗ್ಯ ಲೆಕ್ಕಿಸದೆ ಆನ್​ಲೈನ್ ತರಗತಿಯ ಗುಮ್ಮ ಹೇರುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಶಿಕ್ಷಣ ತಜ್ಞರು, ವೈದ್ಯರು, ಸಿನಿಮಾ ನಟರ ಜತೆಗೆ ಶಿಕ್ಷಣ ಇಲಾಖೆಯಲ್ಲೂ ಅಪಸ್ವರ ಎದ್ದಿದೆ.
ಈಗಾಗಲೇ ಹಲವು ಖಾಸಗಿ ಶಾಲೆಗಳು ಪಾಲಕರಿಂದ ವಾರ್ಷಿಕ ಶುಲ್ಕ ಪಡೆದು ಎಲ್ಲ ವಿದ್ಯಾರ್ಥಿಗಳಿಗೂ ತರಗತಿ ಆರಂಭಿಸಿವೆ. ಆದರೆ ತಿಂಗಳು ಕಳೆಯುವ ಮೊದಲೇ ಮಕ್ಕಳು ಹಾಗೂ ಪಾಲಕರು ಇ-ಶಿಕ್ಷಣದ ಕಿರಿಕಿರಿಯಿಂದ ಸುಸ್ತಾಗಿದ್ದಾರೆ. ಮಕ್ಕಳ ಆರೋಗ್ಯದ ಕತೆಯೇನೆಂದು ಚಿಂತಿತರಾಗಿ ತಲೆ ಮೇಲೆ ಕೈ ಇಟ್ಟು ಕುಳಿತಿದ್ದಾರೆ.
ಫೋನ್ ತಲೆನೋವು: ಮಕ್ಕಳಿಗೆ ಮೊಬೈಲ್ ಕೊಡಲೇಬೇಡಿ ಎಂಬ ವೈದ್ಯರ ಎಚ್ಚರಿಕೆ ಹೊರತಾಗಿಯೂ ಆನ್​ಲೈನ್ ತರಗತಿಗಾಗಿ ಮಕ್ಕಳು ಇಯರ್ ಫೋನ್ ಹಾಕಿಕೊಂಡು ಮೊಬೈಲ್ ಅಥವಾ ಲ್ಯಾಪ್​ಟಾಪ್ ಮುಂದೆ ತಾಸುಗಟ್ಟಲೆ ಕುಳಿತು ಪಾಠ ಕೇಳುವಂತಾಗಿದೆ. ಎಳೆಯ ಮಕ್ಕಳು ನಿರಂತರವಾಗಿ ಗಂಟೆಗಟ್ಟಲೆ ಆನ್​ಲೈನ್​ನಲ್ಲೇ ಇರುವ ಕಾರಣ ಹಲವು ದೈಹಿಕ, ಮಾನಸಿಕ ತೊಂದರೆಗಳಾಗುತ್ತಿವೆ.
ಇದನ್ನೂ ಓದಿಸಾಂಕ್ರಾಮಿಕ ರೋಗಗಳ ಭೀತಿ
ನಿಯಮವೇ ಇಲ್ಲ:ಅನವಶ್ಯಕ ಮತ್ತು ಅವೈಜ್ಞಾನಿಕವಾಗಿ ನಡೆಸುತ್ತಿರುವ ಆನ್​ಲೈನ್ ತರಗತಿಗಳಿಗೆ ಕಡಿವಾಣ ಹಾಕಲು ಕೂಡಲೇ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮೇನಲ್ಲೇ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದರು. ಆದರೆ, ಈವರೆಗೆ ಆನ್​ಲೈನ್ ತರಗತಿಗಳನ್ನು ಯಾವ ವಯಸ್ಸಿನ ಮಕ್ಕಳಿಗೆ ಆಯೋಜಿಸಬೇಕು? ಎಷ್ಟು ಅವಧಿ ಬೋಧಿಸಬೇಕು? ಈ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಗಳೇನೇನು ಎಂಬ ಸ್ಪಷ್ಟತೆ ಇಲ್ಲ. ಇದರಿಂದಾಗಿ ಖಾಸಗಿ ಶಾಲೆಗಳಿಗೆ ಕಡಿವಾಣವೇ ಇಲ್ಲದಂತಾಗಿದೆ.
ಪ್ರಯೋಜನವಿದೆ ಆದರೆ…
ಆನ್​ಲೈನ್ ಶಿಕ್ಷಣದಿಂದ ಹಲವು ಉಪಯೋಗಗಳಿದ್ದರೂ ಭಾರತದ ಮಟ್ಟಿಗೆ ಸದ್ಯಕ್ಕೆ ಈ ಪದ್ಧತಿ ಕಷ್ಟಕರವೆಂದೇ ವ್ಯಾಖ್ಯಾನಿಸಲಾಗುತ್ತದೆ. ಮಕ್ಕಳಿಗೆ ಕಂಪ್ಯೂಟರ್, ಇಂಟರ್ನೆಟ್​ನಿಂದ ಲೋಕಜ್ಞಾನ ವೃದ್ಧಿಸುವ ಜತೆಗೆ ಶಾಲೆಗೆ ಹೋಗಿಬರುವ ಸಮಯ ಉಳಿಯುತ್ತದೆ. ಜತೆಗೆ ಒಂದೇ ಸಮಯದಲ್ಲಿ ಶಿಕ್ಷಕರ ಜತೆಗೆ ಹಲವು ಶಿಕ್ಷಣ ತಜ್ಞರಿಂದ ಪಾಠ ಹೇಳಿಸುವ ವ್ಯವಸ್ಥೆ ಮಾಡುವುದು ಆನ್​ಲೈನ್ ಪಾಠದಲ್ಲಿ ಸಾಧ್ಯ. ಆದರೆ ಇದಕ್ಕೆಲ್ಲ ಹೊಂದಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ.
ಆತಂಕಗಳೇನು?
ಗಂಟೆಗಟ್ಟಲೆ ಮೊಬೈಲ್/ಕಂಪ್ಯೂಟರ್ ಎದುರು ಕೂರಿಸಿದರೆ ಎಳೆಯ ಮಕ್ಕಳ ಕಣ್ಣಿಗೆ ಹಾನಿ ಆಗುವ ಆತಂಕ
ಮೊಬೈಲ್ ವಿಕಿರಣ ಅಪಾಯಕಾರಿಯಾದ್ದರಿಂದ ಆರೋಗ್ಯಕ್ಕೆ ಕಂಟಕವಾಗುವ ಆತಂಕ
ಮನೆಯ ಇಕ್ಕಟ್ಟಾದ ಸ್ಥಳದಲ್ಲಿ ಗಂಟೆಗಟ್ಟಲೆ ಎದ್ದುಹೋಗದಂತೆ ಕೂರಬೇಕಾದ್ದರಿಂದ ಮಾನಸಿಕ ಕಿರುಕುಳ
ಕೊಠಡಿ ಇಲ್ಲದ ಪುಟ್ಟ ಮನೆಗಳಲ್ಲಿ ಮಕ್ಕಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸುವುದು ಪಾಲಕರಿಗೆ ಕಷ್ಟ
ಶಾಲೆಯಲ್ಲಿ ಕ್ರೀಡೆ, ದೈಹಿಕ ಚಟುವಟಿಕೆಗೆ ಇದ್ದ ಅವಕಾಶ ಆನ್​ಲೈನ್ ಶಿಕ್ಷಣದಲ್ಲಿ ಸಿಗುವುದಿಲ್ಲ
ಆನ್​ಲೈನ್ ಪಾಠದಲ್ಲಿ ಮಕ್ಕಳಿಗೆ ಪ್ರತಿಸ್ಪಂದನೆಗೆ ಅವಕಾಶ ಕಡಿಮೆ. ವಿಡಿಯೊ ಆಫ್ ಮಾಡಿ, ಸೌಂಡ್ ಮ್ಯೂಟ್ ಮಾಡಿ ಶಿಕ್ಷಕರು ಹೇಳುವುದನ್ನು ಮಾತ್ರ ಕೇಳಿಸಿಕೊಂಡು ಕುಳಿತುಕೊಳ್ಳಬೇಕು. ತರಗತಿ ಮುಗಿಯುವ ಹೊತ್ತಿಗೆ ಮಕ್ಕಳಲ್ಲಿ ತಲೆನೋವು, ಮೈಜಡ, ಒತ್ತಡ ಹೆಚ್ಚುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಿ ಕೆಲಸಕ್ಕೆ ಹೋಗುತ್ತಿದ್ದವರಿಗೆ ಮನೆಯಲ್ಲೇ ಮಕ್ಕಳನ್ನು ಕಾಯಬೇಕಾದ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ1983ರ ವಿಶ್ವಕಪ್ ತಾರೆಯರ ಪಾತ್ರದಲ್ಲಿ ಪುತ್ರರದ್ದೇ ನಟನೆ!
ಇದನ್ನೂ ಓದಿನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ
ಮಕ್ಕಳ ದಿನಚರಿ ಏನು?
ಶಾಲಾ ಸಮಯಕ್ಕೆ ಸರಿಯಾಗಿ ಮೊಬೈಲ್/ಕಂಪ್ಯೂಟರ್ ಎದುರು ಕೂರಬೇಕು, ಕೆಲವು ಶಾಲೆಗಳಲ್ಲಿ ಸಮವಸ್ತ್ರ ಧರಿಸಿ ಕೂರಲು ಸೂಚನೆ ಇದೆ.
ನೀರು, ಪೆನ್ನು, ಪುಸ್ತಕ ಜತೆಯಲ್ಲೇ ಇಟ್ಟುಕೊಳ್ಳಬೇಕು
ಪದೇಪದೆ ಓಡಾಡುವಂತಿಲ್ಲ , ಶೌಚಗೃಹಕ್ಕೆ ಹೋಗಲೂ ಅನುಮತಿ ಪಡೆಯಬೇಕು
ಹೋಮ್ ವರ್ಕ್ ಮಾಡಿ ಆನ್​ಲೈನ್ ಮೂಲಕವೇ ಅಪ್​ಲೋಡ್ ಮಾಡಬೇಕು
ಪಾಲಕರ ಚಿಂತೆ ಏನು
ಮಕ್ಕಳಿಗಾಗಿಯೇ ಒಂದು ಮೊಬೈಲ್ ಅಥವಾ ಕಂಪ್ಯೂಟರ್ ಕೊಡಿಸಬೇಕು
ಇಬ್ಬರು ಮಕ್ಕಳಿದ್ದರೆ ಎರಡೆರಡು ಮೊಬೈಲ್, ಕಂಪ್ಯೂಟರ್ ವ್ಯವಸ್ಥೆ ಮಾಡಬೇಕು
ಒಂದಕ್ಕಿಂತ ಹೆಚ್ಚು
ಮಕ್ಕಳಿದ್ದರೆ ಮನೆಯಲ್ಲಿ ನಿಯಂತ್ರಿಸುವುದು ಕಷ್ಟ
ಇಯರ್ ಫೋನ್ ಕೊಡಿಸಬೇಕು, ಇಂಟರ್ನೆಟ್ ಹಾಕಿಸಬೇಕು
ಮೊಬೈಲ್ ಸಿಗ್ನಲ್, ಗಾಳಿ, ಬೆಳಕು ಇರುವ ಕಡೆ ಮಕ್ಕಳನ್ನು ಕೂರಿಸಬೇಕು
ಇಂಟರ್ನೆಟ್ ಸಮಸ್ಯೆ
ಗ್ರಾಮೀಣ ಪ್ರದೇಶ ಹಾಗಿರಲಿ, ಬೆಂಗಳೂರಿನಲ್ಲೇ ಮೊಬೈಲ್ ನೆಟ್​ವರ್ಕ್, ಇಂಟರ್ನೆಟ್ ಸಿಗ್ನಲ್ ಸಿಗದೆ ಪರದಾಡುವ ಪರಿಸ್ಥಿತಿ ಇದೆ. ಅಪಾರ್ಟ್​ವೆುಂಟ್​ಗಳಲ್ಲಿ, ಒತ್ತಟ್ಟಿನ ಮನೆಗಳಲ್ಲಿ, ಮೊಬೈಲ್​ನಲ್ಲಿ ಇಂಟರ್ನೆಟ್ ಸಿಗ್ನಲ್ ಸಿಗದೆ ಆನ್​ಲೈನ್ ತರಗತಿ ಪ್ರವೇಶಿಸುವುದೇ ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ನಡುವೆ ಸಂಪರ್ಕ ಕಡಿತಗೊಂಡರೆ ಮತ್ತೆ ಸಂಪರ್ಕ ಸಿಗುತ್ತಿಲ್ಲ. ಹೆಚ್ಚು ಹಣ ಖರ್ಚು ಮಾಡಿ ಮನೆಯಲ್ಲಿ ಸುಗಮ ಇಂಟರ್ನೆಟ್ ಲಭ್ಯವಾಗುವಂತೆ ನೋಡಿಕೊಳ್ಳುವ ಆರ್ಥಿಕ ಸ್ಥಿತಿ ಎಲ್ಲರಿಗೂ ಇರುವುದಿಲ್ಲ.
ಗ್ಲೋಬಲ್ ವ್ಯಾಕ್ಸಿನ್ ಅಲಯನ್ಸ್ “ಗವಿ” ಖಾತೆಗೆ 15 ದಶಲಕ್ಷ ಡಾಲರ್ : ಪ್ರಧಾನಿ ಮೋದಿ ವಾಗ್ದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 7 =
Remember me
