ಸುಂಟಿಕೊಪ್ಪ(ಮೈಸೂರು):ಗ್ರಾಹಕರೇ ಆನ್​ಲೈನ್​ ಶಾಪಿಂಗ್​ ಮಾಡುವ ಮುನ್ನ ಎಚ್ಚರ! ಇಲ್ಲೊಬ್ಬ ಗ್ರಾಹಕರು ಫ್ಯಾನ್​ ಬುಕ್​ ಮಾಡಿದ್ದರು. ಆದ್ರೆ ಅವರಿಗೆ ಬಂದದ್ದು ಮಾತ್ರ ನಾಲ್ಕು ಥರ್ಮಾಕೋಲ್​ ಹಾಗೂ ಎರಡು ಮಣ್ಣಿನ ಇಟ್ಟಿಗೆ!
ಹೀಗೆ ಮೋಸ ಹೋದವರು ಸುಂಟಿಕೊಪ್ಪ ಆಸ್ಪತ್ರೆ ರಸ್ತೆಯ ಟಿ.ಆರ್​.ಜಯದೇವ. ಸೆ.25ರಂದು ದೆಹಲಿ ಮೂಲದ ಶಾಪಿಂಗ್​ ಸಂಸ್ಥೆಯ ಜಾಲತಾಣದಲ್ಲಿ ಎಕ್ಸಿಟ್​ ಫ್ಯಾನ್​ಅನ್ನು ಜಯದೇವ ಬುಕ್​ ಮಾಡಿದ್ದರು. ಅದರಂತೆ ಅ.3ರಂದು ಕೊರಿಯರ್​ ಮೂಲಕ ಪಾರ್ಸೆಲ್​ ಬಂದಿತ್ತು. 4,500 ರೂಪಾಯಿ ಪಾವತಿಸಿ ಪಾರ್ಸೆಲ್​ ಪಡೆದಿದ್ದರು. ನಂತರ ಅದನ್ನು ಬಿಚ್ಚಿ ನೋಡಿದಾಗ ಪಾರ್ಸೆಲ್​ ಒಳಗೆ 4 ಥರ್ಮಾಕೋಲ್​ ಹಾಗೂ 2 ಮಣ್ಣಿನ ಇಟ್ಟಿಗೆ ಇತ್ತು.
ಇದನ್ನೂ ಓದಿರಿಆರ್​ಆರ್​ ನಗರ ಬೈ ಎಲೆಕ್ಷನ್​: ಕಾಂಗ್ರೆಸ್​ ಅಭ್ಯರ್ಥಿ ಯಾರು ಗೊತ್ತಾ? ಇಲ್ಲಿದೆ ಡಿಕೆಶಿ ಫೈನಲ್​ ಲಿಸ್ಟ್
ಈ ಕುರಿತು ಆನ್​ಲೈನ್​ ಶಾಪಿಂಗ್​ ಸಂಸ್ಥೆಯವರಿಗೆ ದೂರವಾಣಿ ಕರೆ ಮಾಡಿ ಜಯದೇವ್​ ಮಾತನಾಡಿದಾಗ, ಪಾರ್ಸೆಲ್​ ವಿತರಿಸುವವರು ಈ ರೀತಿ ವಂಚಿಸಿರುವ ಹಲವು ಪ್ರಕರಣಗಳಿವೆ. ನಮ್ಮ ಕಂಪನಿ ಆ ರೀತಿ ಗ್ರಾಹಕರಿಗೆ ಮೋಸ ಮಾಡುವುದಿಲ್ಲ, ಎಲ್ಲವನ್ನೂ ವಿಚಾರಿಸಿ ನಿಮಗೆ ಫ್ಯಾನ್​ ತಲುಪಿಸುವುದಾಗಿ ಭರವಸೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಆನ್​ಲೈನ್​ ಶಾಪಿಂಗ್​ ಸಂಸ್ಥೆ ಮೋಸ ಮಾಡಿಲ್ಲ, ಯಾರೋ ಪಾರ್ಸೆಲ್​ ಬದಲಾಯಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇಂತಹ ವಂಚನೆ ಪ್ರಕರಣಗಳು ನಿತ್ಯ ಸಂಭವಿಸುತ್ತಲೇ ಇವೆ. ಗ್ರಾಹಕರು ಕೊರಿಯರ್​ ತಂದವರ ಮುಂದೆಯೇ ತಾವು ಬುಕ್​ ಮಾಡಿದ ವಸ್ತು ಇದೆಯೇ ಎಂಬುದನ್ನು ಒಮ್ಮೆ ಖಚಿತ ಮಾಡಿಕೊಳ್ಳುವುದು ಒಳ್ಳೆಯದು.
ಬಂಧನ ಭೀತಿಯಲ್ಲಿ ತನಗೆ ಕರೊನಾ ಇದೆಯೆಂದು ಅನುಶ್ರೀ ಡ್ರಾಮ ಮಾಡ್ತಾರಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 6 =
Remember me
