ಬೆಂಗಳೂರು: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಮದುವೆಗಳು ಸರಳವಾಗಿ ನೆರವೇರುತ್ತಿದ್ದು, ವಿಡಿಯೋ ಕಾಲ್​ನಲ್ಲಿ ನವಜೋಡಿಯನ್ನು ಸಂಬಂಧಿಕರು ಕಣ್ತುಂಬಿಕೊಂಡು ಶುಭ ಹಾರೈಸಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ನಡೆದ ಬೆಂಗಳೂರು ಮೂಲದ ಇಂಡಿಗೋ ವಿಮಾನ ಸಂಸ್ಥೆಯ ಪೈಲಟ್ ಮದುವೆಯ ಅನುಭವವನ್ನು ಕುಟುಂಬ ಸದಸ್ಯರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಪ್ರಧಾನಿ ಮೋದಿ
ಪುತ್ರ ಪೈಲಟ್ ಸಮೀರ್ ವರ್ವ (28) ಮತ್ತು ಅಕ್ಸೆಂಚರ್ ಕಂಪನಿ ಉದ್ಯೋಗಿ ಗುರುಗ್ರಾಮ ಮೂಲದ ಆಯುಶಿ ಕಟಾರಿಯಾ (27) ಮದುವೆಗೆ ಬೆಂಗಳೂರಿನ ನಿವಾಸಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಇಂಡಿಗೋದ ಹಿರಿಯ ಕ್ಯಾಪ್ಟನ್ ರೋಹಿತ್ ವರ್ವ ಮತ್ತು ಕಿರಣ್ ವರ್ವ ದಂಪತಿ ನಿಶ್ಚಯಿಸಿದ್ದರು.
ಇದನ್ನೂ ಓದಿ:ಠಾಣೆಯಲ್ಲೇ ಆತ್ಮಹತ್ಯೆಗೆ ಮಹಿಳೆ ಯತ್ನ
ಗುರುಗ್ರಾಮದಲ್ಲಿ ಆಯುಶಿ ಕುಟುಂಬದ ಮನೆಯ ಸಮೀಪದಲ್ಲೇ ಸಮೀರ್ ವಾಸವಾಗಿದ್ದಾರೆ. ಮದುವೆಯನ್ನು ಮೂರು ದಿನ ಅದ್ದೂರಿಯಾಗಿ ಮಾಡಬೇಕೆಂದು ಕುಟುಂಬ ಸದಸ್ಯರು ಸಿದ್ಧತೆ ನಡೆಸಿದ್ದರು. ದೆಹಲಿಯ ರೆಸಾರ್ಟ್​ನಲ್ಲಿ ಮದುವೆ, ವರನ ಸ್ವಗೃಹ ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಪೂಜಾ ಕಾರ್ಯ ನಿಗದಿಯಾಗಿತ್ತು. ಆಸ್ಪ್ರೇಲಿಯಾ, ಬೆಲ್ಜಿಯಂನ ಅತಿಥಿಗಳು ಸೇರಿ ನೂರಾರು ಸ್ನೇಹಿತರು, ಸಂಬಂಧಿಕರು ಭಾಗವಹಿಸುವ ನಿರೀಕ್ಷೆಯಿತ್ತು. ಅಷ್ಟರಲ್ಲಿ ಲಾಕ್​ಡೌನ್ ಘೋಷಣೆಯಾಗಿ ಸಮೀರ್ ಗುರುಗ್ರಾಮದಲ್ಲಿಯೇ ಉಳಿಯಬೇಕಾಯಿತು. ಲಾಕ್​ಡೌನ್ ಮುಗಿಯುವ ಲಕ್ಷಣ ಕಂಡುಬಾರದ ಕಾರಣ ಕುಟುಂಬಸ್ಥರು ಸಂಬಂಧಿಕರ ಅನುಪಸ್ಥಿತಿಯಲ್ಲೇ ಮದುವೆ ನೆರವೇರಿಸಲು ನಿರ್ಧರಿಸಿದರು.
ಇದನ್ನೂ ಓದಿ:ಸ್ಥಳೀಯ ಉತ್ಪನ್ನಗಳ ಮಹತ್ವ ತಿಳಿಸಿದೆ ಕೊವಿಡ್​-19, ಸ್ವಾವಲಂಬಿಯಾಗುವುದೇ ಗುರಿ: ಪ್ರಧಾನಿ ಮೋದಿ
ಸ್ಥಳೀಯ ಜಿಲ್ಲಾಡಳಿತದಿಂದ ಅನುಮತಿ ಪಡೆದು ಮೇ 6ರಂದು ಗುರುಗ್ರಾಮದಲ್ಲಿ ಮದುವೆ ನಡೆಸಿದರು. ವಧು-ವರ, ವಧುವಿನ ಪಾಲಕರು, ಫೋಟೋಗ್ರಾಫರ್ ಮತ್ತು ಪುರೋಹಿತರು ಮಾತ್ರವೇ ಭಾಗವಹಿಸಿದ್ದರು. ಬೆಂಗಳೂರು, ಚಂಡೀಗಢ, ಫರಿದಾಬಾದ್, ನೋಯಿಡಾ, ಜೈಪುರ, ಪುಣೆ, ಸಿಂಗಾಪುರ ಸೇರಿ ಇತರೆಡೆಯಿಂದ 35 ಸಂಬಂಧಿಕರು ಆನ್​ಲೈನ್ ಮುಖಾಂತರ ಮದುವೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಅಗತ್ಯವಿಲ್ಲದಿದ್ದರೂ ಆನ್‌ಲೈನ್ ಶಿಕ್ಷಣ ನೀಡಿ ಶೋಷಿಸುವ ಶಾಲೆಗಳಿಗೆ ಸಚಿವರ ಎಚ್ಚರಿಕೆ
ಸಿಂಗಾಪುರದಲ್ಲಿರುವ ನನ್ನ ಹಿರಿಯ ಮಗ, ಸೊಸೆ ಮತ್ತು ಮೊಮ್ಮಗ ಕೂಡ ವಿಡಿಯೋ ಕಾಲ್​ನಲ್ಲಿ ಸಮೀರ್ ಮದುವೆ ಕಣ್ತುಂಬಿಕೊಂಡರು. ಚಿಕ್ಕಪ್ಪನ ಮದುವೆ ನೋಡಲು ನನ್ನ ಮೊಮ್ಮಗ ಮೊಬೈಲ್ ಪರದೆಗೆ ಅಂಟಿಕೊಂಡಿದ್ದ. ನಾವು ಕೂಡ ಮದುವೆಗೆ ಹೋಗಲು ಆಗಲಿಲ್ಲ ಎಂದು ಸಮೀರ್ ತಾಯಿ ಕಿರಣ್ ವಿವರಿಸಿದರು. ನವಜೀವನಕ್ಕೆ ಕಾಲಿಟ್ಟ ದಂಪತಿಗೆ ಆನ್​ಲೈನ್​ನಲ್ಲಿ ವರನ ಪಾಲಕರು ಶುಭ ಕೋರಿದರು. ವಾಟ್ಸ್​ಆಪ್ ವಿಡಿಯೋ ಕಾಲ್​ನಲ್ಲೇ ವರನ ತಾಯಿ ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನೆರವೇರಿಸಿದರು.
54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 12 =
Remember me
