ಸ್ಮಾರ್ಟ್​ಫೋನ್​ಗಳು ಕೈಗೆ ಬಂದ ಮೇಲೆ ಬದುಕಿನ ವೇಗದೊಂದಿಗೆ ಆರ್ಥಿಕ ಚಟುವಟಿಕೆಗಳೂ ಹೆಚ್ಚಿವೆ. ಡಿಜಿಟಲ್ ಶಾಪಿಂಗ್ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಅಲ್ಲದೆ, ಗ್ರಾಮೀಣ ಭಾರತ ಈ ಪ್ರಕ್ರಿಯೆಯಲ್ಲಿ ಒಳಗೊಳ್ಳಬೇಕಿರು ವುದರಿಂದ ಮುಂಬರುವ ವರ್ಷಗಳಲ್ಲಿ ಡಿಜಿಟಲ್ ವೇದಿಕೆಗಳ ಮೂಲಕ ಖರೀದಿ ಇನ್ನಷ್ಟು ಹೆಚ್ಚಲಿದೆ ಎಂಬುದರಲ್ಲಿ ಅನುಮಾನ ವೇ ಇಲ್ಲ. ಗ್ರಾಮೀಣ ಭಾಗಕ್ಕೂ ಆನ್​ಲೈನ್ ಶಾಪಿಂಗ್ ವಿಸ್ತರಿಸುವ ಪ್ರಯತ್ನಗಳು ಹಲವು ವೇದಿಕೆಗಳಿಂದ ನಡೆಯುತ್ತಿದ್ದು, ಡಿಜಿಟಲ್ ಮೂಲಸೌಕರ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಯತ್ನಗಳು ಸಫಲಗೊಳ್ಳುವ ನಿರೀಕ್ಷೆ ಇದೆ. 10 ವರ್ಷಗಳ ಹಿಂದಿನ ಸ್ಥಿತಿಯನ್ನೇ ಅವಲೋಕಿಸಿದರೆ, ಇನ್ನೂ ಬಹುತೇಕ ಜನಸಾಮಾನ್ಯರ ಕೈಗೆ ಸ್ಮಾರ್ಟ್ ಫೋನ್​ಗಳು ಬಂದಿರಲಿಲ್ಲ. ಅಲ್ಲದೆ, ಇಂಟರ್​ನೆಟ್ ದರಗಳು ಕೂಡ ಭಾರಿ ದುಬಾರಿಯಾಗಿದ್ದವು. ಈಗ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್​ಫೋನ್​ಗಳು ಮತ್ತು ಇಂಟರ್​ನೆಟ್ ಸಂಪರ್ಕ ಸಿಗುತ್ತಿರು ವುದರಿಂದ ವಾಣಿಜ್ಯ ಚಟುವಟಿಕೆಗಳಿಗೆ ದೊಡ್ಡ ವರದಾನವಾಗಿ ಪರಿಣಮಿಸಿದೆ. ಮಹಾನಗರಗಳ ಯುವಕರಂತೂ ಖರೀದಿಗೆ ಆನ್​ಲೈನ್ ಜಾಲತಾಣಗಳನ್ನೇ ಅವಲಂಬಿಸಿದ್ದು, ಶಾಪಿಂಗ್ ಸುಲಭ ಮತ್ತು ಗ್ರಾಹಕಸ್ನೇಹಿಯಾಗಿಯೂ ಪರಿಣಮಿಸಿದೆ. ಹೀಗಾಗಿ, ಆನ್​ಲೈನ್ ಶಾಪಿಂಗ್ ವೇದಿಕೆಗಳು ಮತ್ತು ರಿಟೆಲ್ ಕಂಪನಿಗಳು ಗ್ರಾಹಕರ ಆನ್​ಲೈನ್ ಶಾಪಿಂಗ್ ಟ್ರೆಂಡ್ ಮತ್ತು ಆದ್ಯತೆಗಳನ್ನು ಅಭ್ಯಸಿಸಲು ಹೆಚ್ಚು ಆಸಕ್ತಿ ವಹಿಸಿವೆ. ಭಾರತೀಯ ಗ್ರಾಹಕರ ಆನ್​ಲೈನ್ ಶಾಪಿಂಗ್ ಟ್ರೆಂಡ್ ಕುರಿತಂತೆ ಇತ್ತೀಚೆಗೆ ಅಹಮದಾಬಾದ್​ನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೆಜ್​ವೆುಂಟ್ (ಐಐಎಂ-ಎ) Digital retail channels and consumers: the indian perspective ಎಂಬ ವಿವರವಾದ ಸಮೀಕ್ಷೆ ನಡೆಸಿದ್ದು, ಹಲವು ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬಂದಿವೆ. ದೇಶದ 25 ರಾಜ್ಯಗಳಲ್ಲಿ, 35 ಸಾವಿರ ಜನರನ್ನು ಮಾತನಾಡಿಸಿ ಈ ಸಮೀಕ್ಷೆ ನಡೆಸಲಾಗಿದೆ. ಈ ಮೂಲಕ ಆನ್​ಲೈನ್ ಶಾಪಿಂಗ್​ನ ಧೋರಣೆ, ಆದ್ಯತೆಗಳು ಅನಾವರಣಗೊಂಡಿವೆ. ಆನ್​ಲೈನ್ ಶಾಪಿಂಗ್​ನಲ್ಲಿ ಮಹಿಳೆಯರೇ ಹೆಚ್ಚು ಖರ್ಚು ಮಾಡುತ್ತಾರೆ ಎಂಬುದು ಸಾಮಾನ್ಯ ಗ್ರಹಿಕೆ. ಆದರೆ, ಈ ಸಮೀಕ್ಷೆಯ ಪ್ರಕಾರ, ಆನ್​ಲೈನ್ ಖರೀದಿಯಲ್ಲಿ ಮಹಿಳೆಯರಿಗಿಂತ ಪುರುಷರೇ ಮುಂದಿದ್ದಾರೆ. ಅಷ್ಟೇ ಅಲ್ಲ. ಒಬ್ಬ ಪುರುಷ ಸರಾಸರಿಯಾಗಿ ಆನ್​ಲೈನ್ ಪ್ಲಾಟ್​ಫಾಮರ್್​ಗಳ ಮೂಲಕ ಮಾಡುವ ಖರೀದಿಯು, ಒಬ್ಬ ಮಹಿಳೆ ಮಾಡುವ ಶಾಪಿಂಗ್​ಗಿಂತ ಶೇಕಡ 36ರಷ್ಟು ಅಧಿಕವಾಗಿದೆ ಎಂಬುದು ಆಸಕ್ತಿಕರ ಅಂಶ. ಒಬ್ಬ ಪುರುಷ ಸರಾಸರಿ 2,484 ರೂಪಾಯಿ ವೆಚ್ಚ ಮಾಡಿದರೆ, ಮಹಿಳೆ ಮಾಡುವ ವೆಚ್ಚ 1,830 ರೂ. ಮಾತ್ರ.
ಕೋವಿಡ್ ಸಂಕಷ್ಟ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿದ್ದೇನೋ ನಿಜ. ಆದರೆ, ಭಾರತದಲ್ಲಿ ಡಿಜಿಟಲ್ ಮೂಲಸೌಲಭ್ಯ ಮತ್ತು ಇಂಟರ್​ನೆಟ್​ನೊಂದಿಗೆ ಸ್ಮಾರ್ಟ್​ಫೋನ್ ಬಳಕೆ ಹೆಚ್ಚಿರುವುದರಿಂದ ಜನರ ಕೊಳ್ಳುವ ಶಕ್ತಿ ಏರಿಕೆಯಾಗಿದೆ. ಮೂರು ವರ್ಷಗಳ ಹಿಂದೆ ಆನ್​ಲೈನ್ ಶಾಪಿಂಗ್​ನಲ್ಲಿ ಜಾಗತಿಕವಾಗಿ 12ನೇ ಸ್ಥಾನದಲ್ಲಿದ್ದ ಭಾರತ ಈಗ 7ನೇ ಸ್ಥಾನಕ್ಕೇರಿದೆ. ಆದರೆ, ಗ್ರಾಮೀಣಿಗರು ಇನ್ನೂ ಡಿಜಿಟಲ್ ಶಾಪಿಂಗ್​ನಲ್ಲಿ ದೂರವೇ ಉಳಿದಿರುವುದು ವಾಸ್ತವ.
ಸಿಒಡಿಯೇ ಹೆಚ್ಚು ಆಪ್ತ
ಆನ್​ಲೈನ್ ಶಾಪಿಂಗ್ ಮಾಡುವವರ ಪೈಕಿ ಶೇಕಡ 65ರಷ್ಟು ಜನರು ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಮೆಚ್ಚಿಕೊಂಡಿದ್ದಾರೆ. ಕಡಿಮೆ ಆದಾಯ ವರ್ಗದ (ವಾರ್ಷಿಕವಾಗಿ 3.6 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರು) ಗ್ರಾಹಕರು ಸಿಒಡಿಯನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದಲ್ಲದೆ, ಎಲ್ಲ ಆದಾಯ ವರ್ಗದವರೂ ಬಟ್ಟೆ ಮತ್ತು ಸೌಂದರ್ಯವರ್ಧಕ ಸೇರಿ ಫ್ಯಾಶನ್​ಗೆ ಸಂಬಂಧಿಸಿದ ಉತ್ಪನ್ನಗಳನ್ನು ಕೊಳ್ಳಲು ಸಿಒಡಿಯನ್ನು ಬಳಸುತ್ತಿದ್ದಾರೆ.
ಇಎಂಐ ಆಯ್ಕೆ ಪರಿಶೀಲಿಸುವ ಪುರುಷರು
ಮಹಿಳೆಯರು ಫ್ಯಾಶನ್ ಉತ್ಪನ್ನ ಮತ್ತು ಬಟ್ಟೆಗಳನ್ನು ಕೊಳ್ಳುವ ಮುಂಚೆ ಹಲವು ವೆಬ್​ಸೈಟ್​ಗಳಿಗೆ ಭೇಟಿ ನೀಡಿ, ಉತ್ಪನ್ನ, ದರ, ಗುಣಮಟ್ಟವನ್ನು ಪರಾಮಶಿಸುತ್ತಾರೆ. ಪುರುಷರು ಕೂಡ ಇಲೆಕ್ಟ್ರಾನಿಕ್ ಗ್ಯಾಜೆಟ್ ಖರೀದಿಗೆ ಮುನ್ನ ಇದೇ ತಂತ್ರವನ್ನು ಬಳಸುತ್ತಾರೆ. ಮಹಿಳೆಯರು, ಉತ್ಪನ್ನದ ಡೆಲಿವರಿ ಸಮಯ ಎಷ್ಟಿದೆ, ರೀಟರ್ನ್ ಮತ್ತು ರೀಫಂಡ್ ಪಾಲಿಸಿ ಹೇಗಿದೆ ಅಂತ ಗಮನಿಸಿ, ಅವಲೋಕಿಸಿ ಆರ್ಡರ್ ಮಾಡುತ್ತಾರೆ. ಆದರೆ ಪುರುಷರು ಮಾಸಿಕ ಸಮಾನ ಕಂತು (ಇಎಂಐ) ಲಭ್ಯವಿದೆಯೇ, ಅದರ ನೀತಿ ಏನು ಎಂದು ಅವಲೋಕಿಸಿ, ಖರೀದಿಗೆ ಮುಂದಾಗುತ್ತಾರೆ.
ಸಾಮಾಜಿಕ ಮಾಧ್ಯಮಗಳಿಂದ ಪ್ರಭಾವಿತರು
35 ವರ್ಷದೊಳಗಿನ ಯುವಕರು ಖರೀದಿಗಾಗಿ ಆನ್​ಲೈನ್ ಶಿಫಾರಸು ಮತ್ತು ಸಾಮಾಜಿಕ ಮಾಧ್ಯಮದಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. 35 ವರ್ಷದ ಮೇಲ್ಪಟ್ಟವರು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಲಹೆಯನ್ನು ಆಧರಿಸಿ ಖರೀದಿಗೆ ಮುಂದಾಗುತ್ತಾರೆ.
ಹೆಚ್ಚು ಖರೀದಿ ಯಾವುದು?
ಗ್ರಾಹಕರು ಇಲೆಕ್ಟ್ರಾನಿಕ್ ಉತ್ಪನ್ನ ಮತ್ತು ಬಟ್ಟೆಗಳ ಖರೀದಿಗೆ ಹೆಚ್ಚು ವೆಚ್ಚ ಮಾಡುತ್ತಿದ್ದಾರೆ. ಒಬ್ಬ ಗ್ರಾಹಕ ಇಲೆಕ್ಟ್ರಾನಿಕ್ ಉತ್ಪನ್ನದ ಖರೀದಿಗೆ ಸರಾಸರಿಯಾಗಿ 3,250 ರೂ. ವ್ಯಯಿಸುತ್ತಿದ್ದರೆ, ಬಟ್ಟೆಯ ಖರೀದಿಗಾಗಿ ಮಾಡುತ್ತಿರುವ ಖರ್ಚು 1,587 ರೂ.
ಬಟ್ಟೆ ಮತ್ತು ಫ್ಯಾಶನ್ ಉತ್ಪನ್ನಗಳು
ಯುಟಿಲಿಟಿ ಉತ್ಪನ್ನಗಳು
ಇಲೆಕ್ಟ್ರಾನಿಕ್ ಉತ್ಪನ್ನಗಳು
ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು
ಪ್ರವಾಸ ಸಂಬಂಧಿ ಉತ್ಪನ್ನಗಳು
ಮನೆ ಅಲಂಕಾರ ವಸ್ತುಗಳು
ಆಹಾರ ಮತ್ತು ಕಿರಾಣಾ
ಏನಂತಾರೆ?
76%
ಗ್ರಾಹಕರು ಆನ್​ಲೈನ್ ಶಾಪಿಂಗ್​ನಲ್ಲಿ ತಮಗೆ ನ್ಯಾಯಯುತವಾದ ದರದಲ್ಲಿ ಉತ್ಪನ್ನಗಳು ಸಿಗುತ್ತವೆ ಎಂದು ನಂಬಿದ್ದಾರೆ.
73%
ಖರೀದಿದಾರರು ಶಾಪಿಂಗ್ ಮೂಲಕ ಸಂತೋಷವನ್ನೂ ಅನುಭವಿಸು ತ್ತಿದ್ದಾರೆ. ಹೊಸ ಉತ್ಪನ್ನಗಳನ್ನು ಕೊಳ್ಳುವುದು, ಹೊಸ ಉಡುಪು ಗಳನ್ನು ಧರಿಸುವುದು, ಗ್ಯಾಜೆಟ್​ಗಳನ್ನು ಹೊಂದುವುದು ಆತ್ಮವಿಶ್ವಾಸ ಹೆಚ್ಚಿಸುತ್ತಿದೆ ಎಂದಿದ್ದಾರೆ.
74%
ಗ್ರಾಹಕರು ಆನ್​ಲೈನ್ ಶಾಪಿಂಗ್​ನಿಂದ ತಮ್ಮ ಸಾಮಾಜಿಕ ಪ್ರತಿಷ್ಠೆಯೂ ಹೆಚ್ಚುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಹುಟ್ಟುಹಬ್ಬ, ಇತರ ಹಬ್ಬಗಳು, ಮದುವೆಯಂಥ ಸಮಾರಂಭಗಳ ವೇಳೆ ತಮಗಾಗಿ ಖರೀದಿ ಮಾಡಲು ಮತ್ತು ಇತರರಿಗೆ ಉಡುಗೊರೆ ನೀಡಲು ಆನ್​ಲೈನ್ ಶಾಪಿಂಗ್ ಪ್ಲಾಟ್​ಫಾಮರ್್​ಗಳನ್ನು ನೆಚ್ಚಿಕೊಂಡಿದ್ದಾರೆ.
ಆನ್​ಲೈನ್ ಮೂಲಕ ಖರೀದಿ ಮಾಡುವುದರಿಂದ ಯಾವುದೇ ಉತ್ಪನ್ನದ ಕುರಿತಾದ ಅರಿವು ಮತ್ತು ಮಾಹಿತಿ ದೊರೆಯುತ್ತದೆ ಎಂದು ಶೇಕಡ 70 ಖರೀದಿದಾರರ ಅನಿಸಿಕೆ. ಹಾಗಾಗಿ, ಉತ್ಪನ್ನಗಳ ಆಯ್ಕೆಗೆ ಅಥವಾ ನಿರಾಕರಣೆಗೆ ಈ ಖರೀದಿ ವಿಧಾನ ಸೂಕ್ತ ಮತ್ತು ತುಂಬ ಅನುಕೂಲಕರವಾಗಿದೆ ಎಂಬುದು ಇವರ ಅಭಿಪ್ರಾಯ. ಆಯಾ ಉತ್ಪನ್ನಗಳ ಮಾಹಿತಿ, ಅವುಗಳಿಗೆ ಸಿಕ್ಕಿರುವ ರೇಟಿಂಗ್, ಬಂದಿರುವ ರಿವೀವ್​ಗಳನ್ನು ಗಮನಿಸಿಯೇ ಹೊಸ ಗ್ರಾಹಕರು ಖರೀದಿಗೆ ಮುಂದಾಗುತ್ತಿದ್ದಾರೆ.
ಶೇಕಡ 33ರಷ್ಟು ಜನರು ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಆನ್​ಲೈನ್ ಶಾಪಿಂಗ್ ಪ್ಲಾಟ್​ಫಾಮರ್್​ಗಳಿಗೆ ಭೇಟಿ ನೀಡುವುದನ್ನು ರೂಢಿಸಿಕೊಂಡಿದ್ದಾರೆ. ಹೊಸ ಉತ್ಪನ್ನ ಗಳು, ರಿಯಾಯಿತಿ ಏನಾದರೂ ಇವೆಯೇ ಎಂದು ಗಮನಿಸಿ ಕಾರ್ಟ್​ಗೆ ತುಂಬುತ್ತಾರೆ, ಹೋಲಿಕೆ ಮಾಡುತ್ತಾರೆ. ಇಷ್ಟವಾಗದಿದ್ದಲ್ಲಿ ಮತ್ತೆ 2-3 ದಿನಗಳ ಬಳಿಕ ಭೇಟಿ ನೀಡುತ್ತಾರೆ.
60 ವರ್ಷಕ್ಕೆ ಮೇಲ್ಪಟ್ಟವರು ಒಂದೇ ಆನ್​ಲೈನ್ ಶಾಪಿಂಗ್ ಪ್ಲಾಟ್​ಫಾಮರ್್​ನ್ನು ನೆಚ್ಚಿಕೊಳ್ಳುತ್ತಾರೆ. ಖರೀದಿಯ ಆರಂಭಿಕ ಅನುಭವ ಚೆನ್ನಾಗಿದ್ದರೆ, ಅದೇ ಪ್ಲಾಟ್​ಫಾಮರ್್​ನ್ನು ಹಿರಿಯ ನಾಗರಿಕರು ಆಯ್ಕೆ ಮಾಡಿಕೊಂಡು, ಅವಶ್ಯವಿದ್ದಾಗ ಆರ್ಡರ್ ಮಾಡುತ್ತಾರೆ. ಹಲವು ವೆಬ್​ಪೋರ್ಟಲ್​ಗಳಿಗೆ ಭೇಟಿ ನೀಡುವುದರಿಂದ ಅನವಶ್ಯಕವಾಗಿ ಗೊಂದಲ ಹೆಚ್ಚುತ್ತದೆ, ಖರೀದಿ ಪ್ರಕ್ರಿಯೆ ವಿಳಂಬವಾಗುತ್ತದೆ ಮತ್ತು ಬೇಕಾಗಿರುವ ಉತ್ಪನ್ನಕ್ಕಿಂತ ಬೇಡವಾದ ಉತ್ಪನ್ನವನ್ನು ಆಯ್ಕೆ ಮಾಡಿ, ಖರೀದಿಸುವ ಸಾಧ್ಯತೆಯೂ ಇರುತ್ತದೆ ಎಂಬುದು ಹಿರಿಯ ನಾಗರಿಕರ ವಿವರಣೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
