ಬೆಂಗಳೂರು: ಸರ್ಕಾರವು ಮುಂಗಾರಿನಲ್ಲಿ 161 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಮತ್ತು 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ.
ಬಿತ್ತನೆ ಪ್ರಮಾಣವು ಶೇ.60 ರಷ್ಟಿದ್ದು, ಬಿತ್ತನೆ ಮಾಡಿದ ಪ್ರದೇಶದ ಕೆಲವೆಡೆ ಬರ ಸನ್ನಿವೇಶದಿಂದ ಈಗಾಗಲೇ ಬೆಳೆ ನಷ್ಟವಾಗಿದೆ. ಇನ್ನುಳಿದ ಪ್ರದೇಶದಲ್ಲಿ ಬೆಳೆಗಳು ಬರ ಸನ್ನಿವೇಶವನ್ನು ಎದುರಿಸುತ್ತಿದ್ದು, ಇವುಗಳನ್ನು ಕೃಷಿ ಸಂಬಂಧಿ ಚಟುವಟಿಕೆಗಳ ಸುಸ್ತಿರತೆಗಾಗಿ ಉಳಿಸಿಕೊಳ್ಳವುದು ಅವಶ್ಯಕವಾಗಿದೆ. ಈ ವಿಷಮ ಕೃಷಿ ಪರಿಸ್ಥಿತಿಯನ್ನು ಮನಗೊಂಡು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಸಮೇತಿ (ದಕ್ಷಿಣ), ಧಾರವಾಡ ಕೃಷಿ ವಿಶ್ವವಿದ್ಯಾನಿಲಯ, ಸಮೇತಿ (ಉತ್ತರ) ಮತ್ತು ಕೃಷಿ ಇಲಾಖೆ ಜಂಟಿಯಾಗಿ ಸೆಪ್ಟೆಂಬರ್ 15 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಬರ ನಿರ್ವಹಣೆ: ಸೂಕ್ತ ಕೃಷಿ ತಂತ್ರಜ್ಞಾನಗಳು ಕುರಿತ ರಾಜ್ಯಮಟ್ಟದ ಆನ್‍ಲೈನ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.
ಈ ತರಬೇತಿಯಲ್ಲಿ ಒಂದೇ ಬಾರಿ 3 ಸಾವಿರ ಕೃಷಿಕರು ಮತ್ತು ವಿಸ್ತರಣಾ ಕಾರ್ಯಕರ್ತರು ಭಾಗವಹಿಸಬಹುದು. ಸಂಪನ್ಮೂಲವ್ಯಕ್ತಿಗಳಾಗಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ: ಎಂ.ಎನ್.ತಿಮ್ಮೇಗೌಡ, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಸಹಪ್ರಾಧ್ಯಾಪಕರಾದ ಡಾ: ಬಸವಣ್ಣಪ್ಪ, ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಸಹಪ್ರಾಧ್ಯಾಪಕರಾದ ಡಾ: ಬಸವರಾಜ ಎಣಗಿ, ಅವರು ಭಾಗವಹಿಸಲಿದ್ದಾರೆ. ಆನ್‍ಲೈನ್ ತರಬೇತಿಗೆ ಲಿಂಕ್https://zoom.us/j/96073893054?pwd=WGh3WExCSkt4d0dtZHM0aWg1bk9XQT09, ವೆಬಿನಾರ್ ಐಡಿ: 96073893054 ಮತ್ತು ಪಾಸ್ ಕೋಡ್: 123456 ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಯ ಆತ್ಮ ಸಿಬ್ಬಂದಿ ಅಥವಾ ಮೊಬೈಲ್ ಸಂ:9481425522 / 99646 89340ಗೆ ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 + 11 =
Remember me
