ಬೆಂಗಳೂರು:ಕರೋನಾ ಹರಡುವಿಕೆ ತಡೆಯಲು ಲಾಕ್​ಡೌನ್ ಹೇರಲಾಗಿರುವ ಈ ಸಂದರ್ಭದಲ್ಲಿ ಯಾರಾದರೂ ಮೃತಪಟ್ಟಲ್ಲಿ ಅಂತ್ಯಸಂಸ್ಕಾರಕ್ಕೆ 20ಕ್ಕಿಂತ ಹೆಚ್ಚು ಜನರು ಭಾಗಿಯಾಗುವಂತಿಲ್ಲ ಎಂದು ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.
ಕರೋನಾ ಭೀತಿಯಿಂದಾಗಿ ಸತ್ತ ವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಂಬಂಧಿಕರಿಗೆ ವಿದಾಯ ಹೇಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರ ಅಂತ್ಯ ಸಂಸ್ಕಾರದಲ್ಲಿ 20 ಮಂದಿಗಿಂತ ಹೆಚ್ಚಿನವರು ಸೇರಬಾರದು ಎಂದು ಬಿಬಿಎಂಪಿ ಆಯುಕ್ತ ಅನಿಲ್​ಕುಮಾರ್ ಆದೇಶಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ 132 ಸ್ಮಶಾನಗಳಿದ್ದು, ಕೆಲವನ್ನು ಖಾಸಗಿ ಟ್ರಸ್ಟ್​ಗಳು ನಿರ್ವಹಿಸುತ್ತಿವೆ. ವಿದ್ಯುತ್ ಮತ್ತು ಉರುವಲು ಸೇರಿ 13 ಚಿತಾಗಾರಗಳಿದ್ದು, ಪಾಲಿಕೆ ನಿರ್ವಹಿಸುತ್ತದೆ. ಈಗ ಅಂತ್ಯಸಂಸ್ಕಾರದಲ್ಲಿ 15ರಿಂದ 20 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಸ್ಮಶಾನದಲ್ಲಿ ಸಾಬೂನು ಮತ್ತು ನೈರ್ಮಲ್ಯಕಗಳ ವ್ಯವಸ್ಥೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಿಕ್ಟೋರಿಯಾ ಸಿಬ್ಬಂದಿಗೆ ಪುನರ್ವಸತಿ
ಬೆಂಗಳೂರು: ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಯನ್ನು ಶ್ಲಾಘಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಸಂದೇಶ ನೀಡುತ್ತಿರುವುದು ಒಂದೆಡೆಯಾದರೆ, ವಿಕ್ಟೋರಿಯಾ ಆಸ್ಪತ್ರೆಯ ನೌಕರರು ಮನೆಯಿಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸೋಂಕು ಹರಡುವ ಭೀತಿಯಿಂದ ಮನೆ ಮಾಲೀಕರು ತಕ್ಷಣ ಖಾಲಿ ಮಾಡುವಂತೆ ಹೇಳಿದ್ದರಿಂದ ವಸತಿ ಕಳೆದುಕೊಂಡಿದ್ದ ವಿಕ್ಟೋರಿಯಾ ಆಸ್ಪತ್ರೆಯ 8 ಸಿಬ್ಬಂದಿಗೆ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ (ಎನ್​ಬಿಎಫ್) ವಸತಿ ಕಲ್ಪಿಸಿದೆ. ಕೋರಮಂಗಲದಲ್ಲಿರುವ ಡಿ ಓರಿಯಲ್ ಹೋಟೆಲ್​ನಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರ ವಾಸ್ತವ್ಯಕ್ಕೆ ಹೋಟೆಲ್​ನ ಮಾಲೀಕ
ಮುರಳಿ ಕೃಷ್ಣ ಸಹಾಯ ಮಾಡಿದ್ದಾರೆ ಎಂದು ಎನ್​ಬಿಎಫ್ ಶ್ಲಾಘಿಸಿದೆ. ಲಾಕ್​ಡೌನ್ ನಂತರ ಬಡವರ ಸಮಸ್ಯೆಗಳನ್ನು ಪರಿಹರಿಸಲು ಎನ್​ಬಿಎಫ್ ಆಹಾರ ಹಂಚಿಕೆ ಅಭಿಯಾನ ಪ್ರಾರಂಭಿಸಿದ್ದು, ಇಲ್ಲಿಯವರೆಗೆ 8,305 ಜನರಿಗೆ ಆಹಾರ ಪೊಟ್ಟಣಗಳು ಮತ್ತು ದಿನಸಿ ಚೀಲಗಳನ್ನು ತಲುಪಿಸಲಾಗಿದೆ.
ಗೌತಮ್ ಗಂಭೀರ್ ಎರಡು ವರ್ಷದ ವೇತನ ದೇಣಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 2 =
Remember me
