ಬೆಂಗಳೂರು:ಶಿಕ್ಷಣ ಇಲಾಖೆ ಜ.1ರಿಂದ ಶಾಲಾ-ಕಾಲೇಜು ಆರಂಭಿಸುತ್ತಿದ್ದು, ಪಿಯು ಕಾಲೇಜುಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಪ್ರಮಾಣಿತ ಕಾರ್ಯಚರಣಾ ವಿಧಾನ(ಎಸ್​ಒಪಿ) ಬಿಡುಗಡೆ ಮಾಡಿದೆ. ಕಾಲೇಜು ಆವರಣ, ತರಗತಿ ಕೊಠಡಿ, ಪ್ರಯೋಗಾಲಯ ಹಾಗೂ ಹೆಚ್ಚು ಬಳಕೆಯಾಗುವ ಸ್ಥಳಗಳನ್ನು ಸೋಂಕುನಿವಾರಕಗಳನ್ನು ಬಳಸಿ ಶುಚಿಗೊಳಿಸಲು ತಿಳಿಸಲಾಗಿದೆ. ದ್ವಿತೀಯ ಪಿಯು ತರಗತಿಗಳಿಗೆ ಪ್ರತಿದಿನ 45 ನಿಮಿಷಗಳ ನಾಲ್ಕು ತರಗತಿಗಳನ್ನು ನಡೆಸಲು ಇಲಾಖೆ ಸೂಚನೆ ನೀಡಿದೆ. ಆದರೆ, ವಿಸõತ ವೇಳಾಪಟ್ಟಿಯನ್ನು ಇನ್ನಷ್ಟೇ ಹೊರಡಿಸಬೇಕಿದೆ. ಭೌತಿಕ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
15 ಜನರಿಗೆ ವ್ಯವಸ್ಥೆ: ಪ್ರತಿ ತರಗತಿಯಲ್ಲಿ 15 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದ್ದರೂ, ಕೊಠಡಿ ವಿಸ್ತೀರ್ಣ ಹಾಗೂ ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಬದಲಾಯಿಸಿ ಕೊಳ್ಳಬಹುದು. ಆದರೆ, ವಿದ್ಯಾರ್ಥಿಗಳು, ಬೋಧಕರು ಅಥವಾ ಸಿಬ್ಬಂದಿ ನಡುವೆ ಕನಿಷ್ಠ ಆರು ಅಡಿ ಅಂತರ ಇರುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಭೌತಿಕ ತರಗತಿ ಹಾಜರಾಗಬಹುದು. ಆದರೆ, ಇದಕ್ಕೆ ಪಾಲಕರಿಂದ ಅನುಮತಿ ಪತ್ರ ತರುವುದು ಕಡ್ಡಾಯ ವಾಗಿದೆ. ಜತೆಗೆ, ಕೋವಿಡ್ ಯಾವುದೇ ಲಕ್ಷಣಗಳಿಲ್ಲ ಎಂಬುದನ್ನು ಪಾಲಕರು ದೃಢಪಡಿಸಬೇಕು. ಆಡಳಿತ ಮಂಡಳಿಗಳು ಬಯೋಮೆಟ್ರಿಕ್ ಹಾಜರಾತಿ ಬದಲು ಪರ್ಯಾಯ ಕ್ರಮಗಳಿಂದ ಹಾಜರಾತಿಯನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.
ಸಂದರ್ಶಕರ ಪ್ರವೇಶ ನಿಷೇಧ:ಕಾಲೇಜು ಆವರಣ ಪ್ರವೇಶಿಸುವವರನ್ನು ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಿಸಬೇಕು. ಸ್ಯಾನಿಟೈಸರ್ ಒದಗಿಸಬೇಕು. ಸಂದರ್ಶಕರ ಪ್ರವೇಶವನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು ಅಥವಾ ನಿಷೇಧಿಸಬೇಕು ಎಂದು ಸೂಚಿಸಲಾಗಿದೆ. ಕಾಲೇಜಿನ ಹೊರಾಂಗಣದಲ್ಲೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ.
ಪ್ರಾರ್ಥನೆಗಿಲ್ಲ ಅವಕಾಶ
ಕಾಲೇಜುಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಕ್ರೀಡೆಗಳು, ಯಾವುದೇ ಚಟುವಟಿಕೆಗಳಿಂದ ಉಂಟಾಗುವ ಜನಸಂದಣಿಯನ್ನು ಕಡ್ಡಾಯವಾಗಿ ನಿಷೇಧಿಲಾಗಿದೆ ಎಂದು ಮಾರ್ಗಸೂಚಿ ಯಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ, ಹೊರಡುವಾಗ ಹಾಗೂ ವಿರಾಮದ ಸಮಯದಲ್ಲಿ ಒಟ್ಟುಗೂಡದಂತೆ ಎಚ್ಚರ ವಹಿಸಬೇಕು.
ನಮ್ಮ ನಡುವೆ ಸಮನ್ವಯ ಇದೆ
ಬೆಂಗಳೂರು: ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ, ಅಸಮಾಧಾನ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್​ಕುಮಾರ್ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವಿಬ್ಬರೂ ಸಹೋದರರಂತೆ ಇದ್ದೇವೆ. ಸಿಎಂ ನೇತೃತ್ವದಲ್ಲಿ ಸಮನ್ವಯದಿಂದ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಡಾ.ಸುಧಾಕರ್ ಹೇಳಿದ್ದು: ಶಿಕ್ಷಣ ಸಚಿವರು ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ. ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಸಿಎಂ ನೇತೃತ್ವದಲ್ಲಿ ತೀರ್ಮಾನ ತೆಗೆದು ಕೊಳ್ಳಲಾಗಿತ್ತು. 11 ಗಂಟೆ ಬಳಿಕ ಬಹುತೇಕ ಯಾವುದೇ ಚಟುವಟಿಕೆ ಇರುವುದಿಲ್ಲ. ಆದರೂ, ಬಾರ್ ಪಬ್​ಗಳಲ್ಲಿ ಹಬ್ಬ, ಹೊಸ ವರ್ಷ ಆಚರಣೆ ವೇಳೆ ಜನರು ಸೇರುತ್ತಾರೆ ಇದನ್ನು ನಿಯಂತ್ರಿಸಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಇದನ್ನು ಬಿಟ್ಟರೆ ಬೇರೇನು ಉದ್ದೇಶವಿರಲಿಲ್ಲ. ಸಂಸದ ಡಿ.ಕೆ.ಸುರೇಶ್ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ಅವರ ಹಿನ್ನೆಲೆ ಹೇಳಲು ನಾನು ಹೋಗಲ್ಲ. ಅವರ ಹಿನ್ನೆಲೆ ಏನೆಂದು ಜನರಿಗೆ ಗೊತ್ತಿದೆ. ಕೆಲವು ಮಾಧ್ಯಮಗಳಲ್ಲಿ ನಮ್ಮಿಬ್ಬರ ಬಗ್ಗೆ ಸುಳ್ಳು ಸುದ್ದಿ ಪ್ರಸಾರವಾಗುತ್ತಿದೆ.
ಸುರೇಶ್​ಕುಮಾರ್ ಸಮರ್ಥನೆ
ನನ್ನ ಹಾಗೂ ಸುಧಾಕರ್ ಬಗ್ಗೆ ಕೆಲ ಮಾಧ್ಯಮಗಳಲ್ಲಿ ತಪ್ಪು ಸುದ್ದಿ ಹೋಗುತ್ತಿದೆ. ಶಾಲೆಗಳ ಆರಂಭ ವಿಚಾರದಲ್ಲಿ ಸರ್ಕಾರ ಪ್ರತಿಷ್ಠೆ ತೋರಿಸುತ್ತಿಲ್ಲ. ಟಿಎಸಿ ಸಮಿತಿ ತಜ್ಞರ ಸಲಹೆಯಂತೆ ನಿರ್ಧಾರ ಕೈಗೊಳ್ಳಲಾಗಿದೆ. ಶಾಲೆಗಳ ಆರಂಭ ಮಾಡಲು ನಾನು ಹಠ ಹಿಡಿದಿಲ್ಲ. ಮಕ್ಕಳ ಬಗ್ಗೆ ನಮಗೂ ಬದ್ಧತೆ ಇದೆ. ಶಾಲೆಗಳಿಲ್ಲದೇ ಬಾಲಕಾರ್ವಿುಕರು, ಬಾಲ್ಯ ವಿವಾಹ ಹೆಚ್ಚಾಗಿದೆ. ಈ ದೃಷ್ಟಿಯಲ್ಲಿ ಯೋಚಿಸಿದ್ದೀವಿ. ನಮ್ಮಿಬ್ಬರ ನಡುವೆ ಜಂಗೀಕುಸ್ತಿ ಇಲ್ಲ. ನಾವಿಬ್ಬರೂ ಪರಸ್ಪರ ಸಹಕಾರದಿಂದ, ಸಮನ್ವಯತೆಯಿಂದ ಕೆಲಸ ಮಾಡ್ತಿದ್ದೇವೆ.
ಮಕ್ಕಳ ಹಿತ ದೃಷ್ಟಿಯಿಂದ ಶಾಲಾ-ಕಾಲೇಜು ಪ್ರಾರಂಭಿಸುತ್ತ ಇದ್ದೇವೆಯೇ ಹೊರತು, ಇದರಲ್ಲಿ ಯಾವುದೇ ವೈಯುಕ್ತಿಕ ಹಿತಾಸಕ್ತಿ ಇಲ್ಲ.
ಆನ್​ಲೈನ್ ತರಗತಿಗಳಿಂದ ನಗರ ಕೇಂದ್ರೀಕೃತ ಮಕ್ಕಳಿಗೆ ಅನುಕೂಲವಾಗುತ್ತಿದೆ. ಆದರೆ ಗ್ರಾಮೀಣ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ತಲುಪಿಸಲು ಆಗುತ್ತಿಲ್ಲ. ಹೀಗಾಗಿ ಹಂತ ಹಂತವಾಗಿ ಶಾಲೆ ಪ್ರಾರಂಭ ಮಾಡಲಾಗುತ್ತಿದೆ.
| ಎಸ್.ಸುರೇಶ್​ಕುಮಾರ್ ಶಿಕ್ಷಣ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seven =
Remember me
