| ಕೀರ್ತಿನಾರಾಯಣ ಸಿ. ಬೆಂಗಳೂರುಸರ್ಕಾರಿ ಇಲಾಖೆಗಳ ಪ್ರತಿಯೊಂದು ನೇಮಕಾತಿ ಪರೀಕ್ಷೆಗಳಲ್ಲೂ ಅಕ್ರಮದ ವಾಸನೆ ಬಡಿಯುತ್ತಿದೆ. ಕೆಲವೊಂದು ಪರೀಕ್ಷೆಗಳಲ್ಲಿ ಅವ್ಯವಹಾರ ನಡೆಯುತ್ತಿರುವಾಗಲೇ ಸಾಕ್ಷ್ಯಸಮೇತ ಸಿಕ್ಕಿಬಿದ್ದರೆ, ಮತ್ತೆ ಕೆಲವು ಎಕ್ಸಾಮ್ಳಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬರುತ್ತಿದೆ. ಪದೇಪದೆ ನಡೆಯುತ್ತಿರುವ ಅವ್ಯವಹಾರಗಳಿಂದಾಗಿ ನೇಮಕಾತಿಯು ಪಾವಿತ್ರ್ಯತೆಯೇ ಕಳೆದುಕೊಂಡು ‘ದುಡ್ಡಿದ್ದವರಿಗಷ್ಟೇ ಸರ್ಕಾರಿ ನೌಕರಿ’ ಎಂಬ ವಾತಾವರಣ ಸೃಷ್ಟಿಯಾಗಿದೆ.
ಏತನ್ಮಧ್ಯೆ ಪಿಎಸ್​ಐ ಹಗರಣದ 53 ಅಭ್ಯರ್ಥಿಗಳನ್ನು ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯದಂತೆ ಶಾಶ್ವತವಾಗಿ ಡಿಬಾರ್ ಮಾಡಿರುವಂತೆ ಬೇರೆ ಪರೀಕ್ಷೆಗಳ ಅವ್ಯವಹಾರದಲ್ಲಿ ಸಿಕ್ಕಿಬಿದ್ದವರನ್ನೂ ಶಾಶ್ವತವಾಗಿ ನಿಷೇಧಿಸು ವಂತೆ ಒತ್ತಾಯ ಕೇಳಿಬಂದಿದೆ. ಇದರ ಜತೆಗೆ ಪದೇಪದೆ ಪರೀಕ್ಷಾ ಅಕ್ರಮ ನಡೆಸಿ ಸಿಕ್ಕಿಬೀಳುವ ಪ್ರಮುಖ ಆರೋಪಿಗಳ ವಿರುದ್ಧ ಮುಲಾಜಿಲ್ಲದೆ ಕೋಕಾ ಅಸ್ತ್ರ ಜಾರಿ ಮಾಡಿ, ಜೈಲಿನಿಂದ ಬಿಡುಗಡೆ ಯಾಗದಂತೆ ನೋಡಿಕೊಳ್ಳಬೇಕು ಎಂಬ ಆಗ್ರಹ ಪ್ರಾಮಾಣಿಕ ಉದ್ಯೋಗಾಕಾಂಕ್ಷಿಗಳಿಂದ ವ್ಯಕ್ತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಪಿಎಸ್​ಐ, ಕಾನ್​ಸ್ಟೆಬಲ್, ಕೆಪಿಎಸ್ಸಿ, ಕೆಇಎ, ಪಿಡಬ್ಲುಡಿ, ಸಹಾಯಕ ಪ್ರಾಧ್ಯಾಪಕ, ಕೆಪಿಟಿಸಿಎಲ್, ಶಿಕ್ಷಕರು ಸೇರಿ ವಿವಿಧ ಹುದ್ದೆಗಳಿಗೆ ನಡೆದ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ.
ಅದರಲ್ಲೂ ಪಿಎಸ್​ಐ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು ಸರ್ಕಾರಕ್ಕೆ ಮುಜುಗರ ಉಂಟುಮಾಡಿತ್ತು. ಇಷ್ಟಾದರೂ ಸರ್ಕಾರ ಪರೀಕ್ಷೆ ಅಕ್ರಮಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ನಿಗಮ ಮಂಡಳಿಗಳ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಪರೀಕ್ಷೆಗಳಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿರುವುದು ದೃಢಪಟ್ಟಿದೆ. ಪಿಎಸ್​ಐ ಹಗರಣದ ಕಿಂಗ್​ಪಿನ್ ಆರ್.ಡಿ. ಪಾಟೀಲ್ ಮತ್ತು ಆತನ ಗ್ಯಾಂಗ್ ಈ ಅವ್ಯವಹಾರ ನಡೆಸಿದೆ. ಅಕ್ರಮ ಬೆಳಕಿಗೆ ಬಂದು ಮೂರ್ನಾಲ್ಕು ದಿನಗಳಾದರೂ ಆರ್.ಡಿ.ಪಾಟೀಲ್ ಪೊಲೀಸರ ಕೈಗೆ ಸಿಕ್ಕಿಲ್ಲ. ಪಿಎಸ್​ಐ ಸ್ಕಾ್ಯಮ್ ಹೊರಬಂದಾಗಲೂ ತಲೆಮರೆಸಿಕೊಂಡಿದ್ದ ಪಾಟೀಲ್ 3 ತಿಂಗಳ ನಂತರ ಸಿಕ್ಕಿಬಿದ್ದಿದ್ದ. 11 ತಿಂಗಳು ಜೈಲಿನಲ್ಲಿದ್ದು ಹೊರಬಂದರೂ ‘ಡೀಲ್’ಗಳಿಗೆ ಕಡಿವಾಣ ಬಿದ್ದಿಲ್ಲ.
ಪ್ರಶ್ನೆಪತ್ರಿಕೆ ಸಿಗೋದ್ಹೇಗೆ?:ಡೀಲ್ ಕುದುರಿಸಿಕೊಂಡ ಅಭ್ಯರ್ಥಿಗಳಿರುವ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ, ಆ ಕೇಂದ್ರಗಳ ಮೇಲ್ವಿಚಾರಕರನ್ನು ಶಾಮೀಲು ಮಾಡಿಕೊಳ್ಳಲಾಗುತ್ತದೆ. ಪ್ರಶ್ನೆಪತ್ರಿಕೆ ವಿತರಣೆಯಾದ ಕೆಲವೇ ನಿಮಿಷಗಳಲ್ಲಿ ಪ್ರಶ್ನೆಪತ್ರಿಕೆ ಫೋಟೋ ತೆಗೆದು ಕಿಂಗ್​ಪಿನ್​ನ ವಾಟ್ಸ್​ಆಪ್​ಗೆ ಕಳುಹಿಸಲಾಗುತ್ತದೆ. ಆತ ಮೊದಲೇ ನಿಗದಿಪಡಿಸಿದ ತಂಡಕ್ಕೆ ಕಳುಹಿಸಿ, ಅವರು ಬ್ಲೂಟೂತ್ ಮೂಲಕ ಅಭ್ಯರ್ಥಿಗೆ ಉತ್ತರ ಹೇಳಿ ಬರೆಸುತ್ತಾರೆ. ಪಿಎಸ್​ಐ ಹಾಗೂ ಕೆಇಎ ಪರೀಕ್ಷೆಯಲ್ಲಿ ಆರ್.ಡಿ. ಪಾಟೀಲ್ ಗ್ಯಾಂಗ್ ಇದೇ ತಂತ್ರ ಅನುಸರಿಸಿದೆ.
ಕೋಕಾ ಜಾರಿಗೆ ಒತ್ತಾಯ:ಈ ಹಿಂದೆ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಕುಖ್ಯಾತಿ ಪಡೆದಿದ್ದ ಕಿಂಗ್​ಪಿನ್ ಶಿವಕುಮಾರಯ್ಯ ಅಲಿಯಾಸ್ ಗುರೂಜಿ(67) ಮತ್ತು ಆತನ ಗ್ಯಾಂಗ್ ಪದೇಪದೆ ಅಕ್ರಮದಲ್ಲಿ ಭಾಗಿಯಾಗುತ್ತಿತ್ತು. ಶಿವಕುಮಾರಯ್ಯ ವಿರುದ್ಧ 2016ರಲ್ಲಿ ಕೋಕಾ ಜಾರಿ ಮಾಡಲಾಗಿತ್ತು. ಈ ಕಾಯ್ದೆ ಜಾರಿ ಮಾಡಿದರೆ 1 ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸಲಾಗದು. ಹೀಗಾಗಿ ಆರ್.ಡಿ. ಪಾಟೀಲ್​ನಂತಹ ಆರೋಪಿಗಳ ವಿರುದ್ಧವೂ ಕೋಕಾ ಜಾರಿಗೆ ಒತ್ತಾಯ ಕೇಳಿಬಂದಿದೆ.
ನಿಗಮ ಮಂಡಳಿಗಳಲ್ಲಿನ ಖಾಲಿ ಹುದ್ದೆಗಳ ನೇಮಕಕ್ಕಾಗಿ ಕೆಇಎ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಬ್ಲೂಟೂತ್ ಬಳಸಿಕೊಂಡು ಅಕ್ರಮ ನಡೆಸಿದ ಪ್ರಕರಣವನ್ನು ಸಿಬಿಐಗೆ ವಹಿಸುವ ಮಾತೇ ಇಲ್ಲ. ಈ ಕುರಿತು ಉನ್ನತಮಟ್ಟದ ತನಿಖೆ ನಡೆಸಲಾಗುವುದು.
| ಪ್ರಿಯಾಂಕ್ ಖರ್ಗೆ, ಐಟಿ-ಬಿಟಿ ಸಚಿವ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − three =
Remember me
