| ಬಾಬುರಾವ ಯಡ್ರಾಮಿ ಕಲಬುರಗಿ
ಅನ್ಯರ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆಯುವ ಹಾವಳಿ ಜತೆಗೆ ಈಗ ಪ್ರತಿಷ್ಠಿತರು, ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳು, ಪ್ರಾಧ್ಯಾಪಕರು, ಗಣ್ಯರ ಹೆಸರಿನಲ್ಲಿ ನಕಲಿ ಖಾತೆ ಮೂಲಕ ಯಾಮಾರಿಸಿ ಹಣ ಪೀಕುವ ಕೆಲಸ ಕಲಬುರಗಿಯಲ್ಲೂ ಶುರುವಾಗಿದೆ. ಇದು ಕ್ರೀಮ್ ಆಫ್ ದಿ ಸೊಸೈಟಿ ಎಂದು ಕರೆಸಿಕೊಳ್ಳುವವರಿಗೆ ತಲೆನೋವಾಗಿ ಪರಿಣಿಮಿಸಿದೆ. ಅಲ್ಲದೆ ಫೇಸ್ ಬುಕ್ ಸ್ನೇಹಿತರಲ್ಲಿ ಯಾರು ಅಸಲಿ, ಯಾರು ನಕಲಿ ಎಂಬ ಗೊಂದಲ ಮೂಡಿಸಿದೆ.
ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಫೇಸ್​ಬುಕ್ ಖಾತೆ ತೆರೆದು ಸ್ನೇಹಿತರಿಗೆ ಇಲ್ಲದ ನೆಪ ಹೇಳಿ ಹಣ ಪಡೆಯುತ್ತಿದ್ದ ಜಾಲವನ್ನು ರಾಜಧಾನಿ ಪೊಲೀಸರು ಭೇದಿಸಿ ಹಲವರನ್ನು ಬಂಧಿಸಿದ್ದರು. ಬಳಿಕ ಕೆಲದಿನ ತಣ್ಣಗಾದಂತೆ ಕಂಡರೂ ಸಂಪೂರ್ಣ ನಿಂತಿಲ್ಲ.
ಕಲಬುರಗಿ ಇತರ ಕಡೆಯ ವಂಚಕರು ತೊಗರಿ ಕಣಜದ ಪ್ರತಿಷ್ಠಿತರ ಹೆಸರಿನಲ್ಲಿ ಫೇಕ್​ಬುಕ್ ತೆರೆದು ಹಣ ಪೀಕುವ ದಂಧೆಗೆ ಕೈಹಾಕಿದ್ದಾರೆ. ಆದರೆ ಇವರೆಲ್ಲ ಯಾರು? ಎಲ್ಲಿಯವರು ಎಂಬ ಮಾಹಿತಿಯನ್ನು ಸೈಬರ್ ಕ್ರೖೆಂ ಪೊಲೀಸರು ಜಾಲಾಡಿದ ಬಳಿಕ ರಾಜಸ್ಥಾನ, ಹರಿಯಾಣ ಕಡೆಯವರು ಎಂಬ ಮಾಹಿತಿ ಸಿಕ್ಕಿದೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಹೆಸರಲ್ಲಿ ಖಾತೆ ತೆರೆದು ಮೆಸೆಂಜರ್ ಮೂಲಕ ಸ್ನೇಹಿತರಿಗೆ ಹಣದ ಕೋರಿಕೆ ಕಳುಹಿಸಿದ್ದು ಬೆಳಕಿಗೆ ಬರುತ್ತಲೇ, ಜಾಡು ಅರಸಿ ಹೊರಟ ವಿಜಯವಾಣಿಗೆ ಇದು ಕೇವಲ ಸಣ್ಣ ಪುಟ್ಟವರಿಗೆ ಸೀಮಿತವಾಗಿಲ್ಲ. ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಾಧ್ಯಾಪಕರು, ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳು, ಇತರ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲೂ ಇಂತಹ ನಕಲಿ ಖಾತೆಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.
ಆಂತರಿಕ ಭದ್ರತಾ ವಿಭಾಗದ ಎಸ್​ಪಿ ಅರುಣ ರಂಗರಾಜನ್, ಡಿಸಿಪಿ ಕಿಶೋರಬಾಬು, ಇನ್​ಸ್ಪೆಕ್ಟರ್​ಗಳಾದ ಸೋಮಲಿಂಗ ಕಿರದಳ್ಳಿ, ಶ್ರೀಮಂತ ಇಲ್ಲಾಳ, ಎಸ್.ಎಸ್. ಹಿರೇಮಠ, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಗುಲ್ಬರ್ಗ ವಿಶ್ವವಿದ್ಯಾಲಯದ ಐವರು ಪ್ರಾಧ್ಯಾಪಕರು ಹೀಗೆ ಹಲವರ ಹೆಸರಿನಲ್ಲಿ ಫೇಸ್​ಬುಕ್ ನಕಲಿ ಖಾತೆ ತೆರೆದು ಸಾಮಾಜಿಕ ಜಾಲತಾಣದಲ್ಲಿ ಮಂಕುಬೂದಿ ಎರಚುವ ಕೆಲಸ ನಡೆದಿದೆ.
ಕಲಬುರಗಿ ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ ಸೆನ್ ಠಾಣೆಯಲ್ಲೇ ಇಂತಹ 40ಕ್ಕೂ ಹೆಚ್ಚಿನ ದೂರು ಸಲ್ಲಿಕೆಯಾಗಿದ್ದು, ಮಾಹಿತಿ ಸಂಗ್ರಹ ಜತೆಗೆ ದುಷ್ಕರ್ವಿುಗಳನ್ನು ಬಂಧಿಸುವ ಕೆಲಸವನ್ನು ಇನ್​ಸ್ಪೆಕ್ಟರ್ ಸಂಜೀವಕುಮಾರ ಕುಂಬಾರಗೇರಿ ನೇತೃತ್ವದ ತಂಡ ಮಾಡುತ್ತಿದೆ. ಹಣ ಪೀಕುವುದು ಒಂದು ಗುರಿಯಾದರೆ, ಕೆಲವರು ತಮಗೆ ಆಗದವರ ಹೆಸರಲ್ಲಿ ಖಾತೆ ತೆರೆದು ಅಶ್ಲೀಲ ಸಂದೇಶ ಪೋಸ್ಟ್ ಹರಿಬಿಟ್ಟು ವಿಕೃತಿ ಮೆರೆಯುತ್ತಿದ್ದಾರೆ. ಇದಕ್ಕೂ ಕಡಿವಾಣ ಹಾಕಲು ಪೊಲೀಸರು ಮುಂದಾಗಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
