ದಾವಣಗೆರೆ:ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಕೇವಲ ಒಂದು ದಿನವಷ್ಟೇ ಆಗಿದೆ. ಫಲಿತಾಂಶಕ್ಕೆ ಇನ್ನೊಂದು ದಿನವಷ್ಟೇ ಬಾಕಿ ಇದೆ. ಇದರ ನಡುವೆ ಯಾರು ಯಾರು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ಚುನಾವಣಾ ಬೆಟ್ಟಿಂಗ್​ ಎಲ್ಲೆಡೆ ಜೋರಾಗಿ ನಡೆಯುತ್ತಿದೆ. ಅದರಲ್ಲೂ ದಾವಣಗೆರೆಯಲ್ಲಿ ಡಂಗುರ ಸಾರುವ ಮೂಲಕವೇ ಬಾಜಿ ಕಟ್ಟಲು ಪಂಥಾಹ್ವಾನ ನೀಡಿರುವುದು ಎಲ್ಲರ ಗಮನ ಸೆಳೆದಿದೆ.
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಚುನಾವಣಾ ಬೆಟ್ಟಿಂಗ್ ಜೋರಾಗಿದ್ದು, ಬಾಜಿ ಕಟ್ಟುವವರಿದ್ದರೆ ಬನ್ನಿ ಅಂತ ಡಂಗುರ ಸಾರಿ ಪಂಥಾಹ್ವಾನ ನೀಡಲಾಗಿದೆ. ಈ ಘಟನೆ ಹೊನ್ನಾಳಿ ತಾಲೂಕಿನ ಚಿಕ್ಕಗೋಣಿಗೆರೆಯಲ್ಲಿ ನಡೆದಿದೆ. ಎರಡು ಎಕರೆ ಜಮೀನು ಬಾಜಿಗಿಟ್ಟು ಆಹ್ವಾನ ನೀಡಲಾಗಿದೆ.
ಹೊನ್ನಾಳಿ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ ಗೆಲ್ಲುತ್ತಾರೆ ಅಂತ 2 ಎಕರೆ ಜಮೀನನ್ನು ಹೊನ್ನಾಳಿ ತಾಲೂಕಿನ ಚಿಕ್ಕಗೋಣಿಗೆರೆ ಗ್ರಾಮದ ಹೆಬ್ಬಾರ ನಾಗಣ್ಣ ಎಂಬುವರು ಬಾಜಿಗಿಟ್ಟಿದ್ದಾರೆ. ಡಂಗುರ ಸಾರಿಸಿ ಚಿಕ್ಕಗೋಣಿಗೆರೆ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಬರುವಂತೆ ಗ್ರಾಮದ ಬೀದಿ ಬೀದಿಯಲ್ಲಿ ಡಂಗುರ ಸಾರಿಸಿ ಪಂಥಾಹ್ವಾನ ನೀಡಿದ್ದಾರೆ.
ಇದನ್ನೂ ಓದಿ:ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ: ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅಸಮಾಧಾನ
ಜಿಲ್ಲಾದ್ಯಂತ 5 ಕೋಟಿಗೂ ಅಧಿಕ ಬೆಟ್ಟಿಂಗ್ ನಡೆದಿರುವ ಶಂಕೆ ವ್ಯಕ್ತವಾಗಿದೆ. 500, 1000, 5000 ಮತ್ತು 10000 ಸಾವಿರದಿಂದ ಹಿಡಿದು ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿದೆ. ಅಡಿಕೆ ತೋಟ, ಭತ್ತದ ಗದ್ದೆ, ಸೈಟ್ ಅನ್ನು ಜನರು ಬಾಜಿ ಕಟ್ಟುತ್ತಿದ್ದಾರೆ. ಕಾಂಗ್ರೆಸ್​, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಮೇಲೆ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ.
ಜಿದ್ದಾಜಿದ್ದಿನ ಕ್ಷೇತ್ರಗಳಾದ ಚನ್ನಗಿರಿ-ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬೆಟ್ಟಿಂಗ್ ಜೋರಾಗಿದೆ. ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ, ಅಜಯ ಕುಮಾರ್ ಗೆಲ್ತಾರೆ ಅಂತ ಬೆಂಬಲಿಗರು ಬೆಟ್ಟಿಂಗ್ ಕಟ್ಟಿದ್ದಾರೆ. ಚನ್ನಗಿರಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ ಪರ ಬೆಟ್ಟಿಂಗ್‌ ಜೋರು ನಡೆಯುತ್ತಿದೆ.(ದಿಗ್ವಿಜಯ ನ್ಯೂಸ್​)
ISSF ವರ್ಲ್ಡ್​ಕಪ್​: ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಕನ್ನಡತಿ

ಪೋಷಕರ ಬೇಜವಾಬ್ದಾರಿಗೆ ಪೊಲೀಸರು ಶಾಕ್; ಮಗಳು ಕಿಡ್ನಾಪ್ ಆಗಿದ್ದಾಳೆ ಎಂದುಕೊಂಡು ದೂರು!

ಪೋಷಕರ ಬೇಜವಾಬ್ದಾರಿ; ಮನೆಯಲ್ಲಿ ಮಲಗಿದ್ದ ಮಗಳಿಗಾಗಿ ಪೊಲೀಸರ ಜತೆ ಊರೆಲ್ಲಾ ಹುಡುಕಿದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
