ಮಂಡ್ಯ:ಅನಾರೋಗ್ಯಕ್ಕೀಡಾಗಿದ್ದ ಪತಿಯ ಕಾಲು ಕತ್ತರಿಸಿ, ಆಸ್ಪತ್ರೆಯ ಸಿಬ್ಬಂದಿ ಅದನ್ನು ಪತ್ನಿಯ ಕೈಗಿಟ್ಟ ಪ್ರಕರಣಕ್ಕೆ ಈಗ ತಿರುವು ಸಿಕ್ಕಿದೆ. ಎಡವಟ್ಟಾಗಿದ್ದ ಸುದ್ದಿ ಎಲ್ಲೆಡೆ ವ್ಯಾಪಿಸುತ್ತಿದ್ದಂತೆ ಎಚ್ಚೆತ್ತ ಆಸ್ಪತ್ರೆಯವರು ಅದನ್ನು ವಾಪಸ್ ಪಡೆದಿದ್ದಲ್ಲದೆ, ಮಿಮ್ಸ್ ಮುಖ್ಯಸ್ಥರು ಆ ಕುರಿತು ಸ್ಪಷ್ಟನೆಯನ್ನೂ ನೀಡಿದ್ದಾರೆ.
ಗ್ಯಾಂಗ್ರೀನ್​ಗೆ ಒಳಗಾಗಿದ್ದ ಮಂಡ್ಯದ ಕೀಲಾರ ಗ್ರಾಮದ ಪ್ರಕಾಶ್ ಎಂಬವರು ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಗ್ಯಾಂಗ್ರೀನ್​ಗೆ ಒಳಗಾಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದರು. ಆದರೆ ಅದಾದ ಬಳಿಕ ಆಸ್ಪತ್ರೆ ಸಿಬ್ಬಂದಿ ಕತ್ತರಿಸಲಾಗಿದ್ದ ಕಾಲಿನ ಭಾಗವನ್ನು ತಂದು ಪ್ರಕಾಶ್ ಅವರ ಪತ್ನಿ ಭಾಗ್ಯಮ್ಮ ಅವರಿಗೆ ನೀಡಿದ್ದರು.
ಏಕಾಏಕಿ ಹೀಗೆ ಕತ್ತರಿಸಿದ್ದ ಕಾಲನ್ನು ತಂದು ಕೈಗಿಟ್ಟಿದ್ದರಿಂತ ತಬ್ಬಿಬ್ಬಾದ ಭಾಗ್ಯಮ್ಮ ಏನು ಮಾಡಬೇಕು ಎಂದು ತೋಚದೆ ಅತ್ತಿದ್ದರು. ಅಲ್ಲದೆ ಆ ಕಾಲನ್ನು ನೀವೇ ಎಲ್ಲಾದರೂ ಮಣ್ಣು ಮಾಡಿ, ನಾವೇ ಮಾಡಬೇಕೆಂದರೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ ಎಂದು ಆಸ್ಪತ್ರೆಯವರು ಹೇಳಿದ್ದಾಗಿ ಭಾಗ್ಯಮ್ಮ ಆರೋಪಿಸಿದ್ದರು.\

ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಮಂಡ್ಯದ ಮಿಮ್ಸ್​ ನಿರ್ದೇಶಕ ಡಾ.ಮಹೇಂದ್ರ ಸ್ಪಷ್ಟನೆಯನ್ನು ನೀಡಿದ್ದಾರೆ. ರೋಗಿಯ ಮೊಣಕಾಲಿನ ಕೆಳಭಾಗವನ್ನು ತೆಗೆಯಲಾಗಿತ್ತು. ವೈದ್ಯಕೀಯ ನಿಯಮಗಳ ಪ್ರಕಾರ ಅದನ್ನು ಸಂಬಂಧಿತ ಏಜೆನ್ಸಿಯವರ ಮೂಲಕವೇ ವಿಲೇ ಮಾಡಿಸಬೇಕು. ಆದರೆ ಕತ್ತರಿಸಿದ ಕಾಲಿನ ಭಾಗವನ್ನು ದುರದೃಷ್ಟವಶಾತ್​ ಡಿ ಗ್ರೂಪ್ ಸಿಬ್ಬಂದಿ ರೋಗಿಯ ಪತ್ನಿಗೆ ನೀಡಿದ್ದಾರೆ. ಆಕೆ ಗಾಬರಿಯಾಗಿ ಕಣ್ಣೀರು ಹಾಕಿದ್ದಾರೆ. ಅದು ನನ್ನ ಗಮನಕ್ಕೆ ಬರುತ್ತಿದ್ದಂತೆ ವಾಪಸ್ ಪಡೆಯಲಾಗಿದ್ದು, ಅದನ್ನು ನಿಯಮ ಪ್ರಕಾರ ವಿಲೇ ಮಾಡಲಾಗುವುದು ಎಂದು ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.
ಇದನ್ನೂ ಓದಿ:ಪತಿಯ ಕಾಲನ್ನು ಕತ್ತರಿಸಿ ಪತ್ನಿಯ ಕೈಗಿಟ್ರು ಆಸ್ಪತ್ರೆ ಸಿಬ್ಬಂದಿ!; ತಬ್ಬಿಬ್ಬಾದ ಮಹಿಳೆ..
ಪ್ರಕರಣದ ಕುರಿತಂತೆ 24 ಗಂಟೆಯೊಳಗೆ ವರದಿ ನೀಡುವಂತೆ ಸರ್ಜರಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ಆಸ್ಪತ್ರೆಯ ಯಾವುದೇ ತ್ಯಾಜ್ಯವನ್ನು ರೂಲ್ಸ್ ಪ್ರಕಾರವೇ ವಿಲೇವಾರಿ ಮಾಡುವಂತೆ ಸುತ್ತೋಲೆ ಹೊರಡಿಸಿದ್ದೇನೆ. ಕಾನೂನು ಬಾಹಿರವಾಗಿ ವಿಲೇವಾರಿ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇನೆ. ರೋಗಿಯ ಪತ್ನಿ ಬಳಿ ಸಿಬ್ಬಂದಿ ಹಣ ಕೇಳಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ವಿಚಾರಣೆ ವೇಳೆ ಅದು ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.
18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..
ಇಷ್ಟವಿಲ್ಲದ ಮದುವೆ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − ten =
Remember me
