ತುಮಕೂರು:ಶಿರಾದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದರು. ಸಮ್ಮಿಶ್ರ ಸರ್ಕಾರವನ್ನು ವಾಮಮಾರ್ಗದಿಂದ ಕೆಡವಿದ್ದಲ್ಲದೆ, ಕುದುರೆ ವ್ಯಾಪಾರ ಮಾಡಿ ಸಿಎಂ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬರಲಿಲ್ಲ. ಹಾಗಾಗಿ ನಮ್ಮ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆದರೆ ಅದನ್ನು ಅಸ್ಥಿರಗೊಳಿಸಿ ಹುಟ್ಟಿಕೊಂಡ ಅನೈತಿಕ ಕೂಸು ಈ ಬಿಜೆಪಿ ಸರ್ಕಾರ. ಜನಾಶೀರ್ವಾದಿಂದ ಅಧಿಕಾರ ಹಿಡಿಯಲಿಲ್ಲ ಎಂದು ಹೇಳಿದರು.
ದೇಶದ ರಾಜಕಾರಣ ಇತಿಹಾಸದಲ್ಲಿ ಆಪರೇಷನ್ ಕಮಲ ಪದ ಹುಟ್ಟಿದ್ದೇ ಯಡಿಯೂರಪ್ಪನವರ ಕಾಲದಲ್ಲಿ. ಇದರ ಜನಕ ಮಿಸ್ಟರ್ ಯಡಿಯೂರಪ್ಪ. ಆಪರೇಷನ್ ಕಾಂಗ್ರೆಸ್, ಆಪರೇಷನ್ ಜೆಡಿಎಸ್ ಆಗಲಿ ಎಂದೂ ಇರಲಿಲ್ಲ. ಆಪರೇಷನ್ ಕಮಲ ಬಳಿಕ ಪಕ್ಷಾಂತರ ರೂಪ ಪಡೆದುಕೊಂಡಿದ್ದು ಹಣದ ಆಸೆ, ಆಪರೇಷನ್ ಕಮಲ ನಡೆಸಿ ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾರೆ ಎಂದರು.ಇದನ್ನೂ ಓದಿ:43 ವರ್ಷದ ವ್ಯಕ್ತಿಯಿಂದ 11ನೇ ವಯಸ್ಸಿಗೆ ತಾಯಿ: ಸಾವಿಗೂ ಮುನ್ನ ಬಾಲಕಿ ಬಿಚ್ಚಿಟ್ಟಳು ದುರಂತ ಕತೆ!
ಈ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗುತ್ತಾ ಬಂದಿದ್ದು ಭ್ರಷ್ಟಾಚಾರವೇ ಪಾರದರ್ಶಕವಾಗಿಬಿಟ್ಟಿದೆ. ಯಡಿಯೂರಪ್ಪ ಮತ್ತು ಅವರ ಮಕ್ಕಳು ಜೆಸಿಬಿ ಮೂಲಕ ಹಣ ಗೋರಲಿಕ್ಕೆ ಶುರು ಮಾಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಶಾಸಕ ಯತ್ನಾಳ್ ಅವರೇ ಗಂಭೀರವಾದ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಭ್ರಷ್ಟಾಚಾರ ವಂಶಪಾರಂಪರ್ಯವಾಗಿದೆ ಅಂತ ಬಿಹಾರದಲ್ಲಿ ಹೇಳಿರುವುದು ಬಹುಶಃ ಯಡಿಯೂರಪ್ಪ ಮತ್ತು ಮಕ್ಕಳನ್ನು ನೋಡಿಯೇ ಅಂದಿರಬೇಕು. ನ ಕಾವುಂಗಾ…ನ ಕಾನೇ ದೂಂಗಾ ಅಂದಿದ್ರು ಮೋದಿ. ಇಲ್ಲಿ ನೋಡಿದ್ರೆ ಲೂಟಿ ಹೊಡೀತಾ ಇದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆ ಆಶಾಗೋಪುರ ಉರುಳಿಬಿದ್ದಿದೆ. ಇದೀಗ ನಿರುದ್ಯೋಗ ಹೆಚ್ಚಾಗಿದೆ. ಹಾಗಾಗಿ ಯುವಕರು ಕಾಂಗ್ರೆಸ್​​ನತ್ತ ಮುಖಮಾಡುತ್ತಿದ್ದಾರೆ. ಶಿರಾ, ಆರ್​.ಆರ್​. ನಗರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ, ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಇದ್ದರು.
ಕೆ.ಕಲ್ಯಾಣ್​ ಕುಟುಂಬದಲ್ಲಿ ಹುಳಿ ಹಿಂಡಿದ್ದ ಗಂಗಾ ಕುಲಕರ್ಣಿ ಡೆತ್​ನೋಟ್​ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + two =
Remember me
