ಬೆಂಗಳೂರು:ರಾಜ್ಯದಲ್ಲಿರುವ ಎಲ್ಲ 270 ಸರ್ಕಾರಿ ಹಾಗೂ 196 ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿರುವ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (NCVT) ಸಂಯೋಜನೆ ಹೊಂದಿರುವ ವೃತ್ತಿಗಳಿಗೆ ಆನ್​ಲೈನ್ ಮೂಲಕ ಇಲಾಖೆ ವೆಬ್​ಸೈಟ್​ www/emptrg.kar.nic.in ನಲ್ಲಿ ಪ್ರಕಟಿಸಿರುವಂತೆ ಅರ್ಹತೆಯೊಂದಿಗೆ ಮೀಸಲಾತಿ ಆಧಾರದ ಮೇಲೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಗಳು ಇಲಾಖೆ ವೆಬ್​ಸೈಟ್ ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ:ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ
NCVT ಯಿಂದ ಸಂಯೋಜನೆ ಹೊಂದಿ ಅನುಷ್ಠಾನಗೊಳಿಸಿರುವ 40 ವಿವಿಧ ವೃತ್ತಿಗಳಲ್ಲಿ ತರಬೇತಿ ನೀಡಲಾಗುವುದು.ಎಸ್​ಎಸ್​ಎಲ್​​ಸಿ ಮಂಡಳಿ ಅಥವಾ ಸಿಒಬಿಎಸ್​ಇ (Council of Boards of School Education, New Delhi) ಯಿಂದ ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಗಳಿಂದ 10 ನೇ ತರಗತಿ ಪ್ರಮಾಣ ಪತ್ರ ಹೊಂದಿರುವಂತಹ ಅಭ್ಯರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.ಆಗಸ್ಟ್ 31ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಇದನ್ನೂ ಓದಿ:ತಾಯಿ, ಅಜ್ಜಿಯ ಗಂಟಲು ಸೀಳಿದ್ದೇನೆ, ನೋಡಿ ಬನ್ನಿ ಎಂದು ಕರೆದ ಷಾಟ್‌ಪುಟ್‌ ಚಾಂಪಿಯನ್‌!
ರಾಜ್ಯದಲ್ಲಿ ಪಿಪಿಪಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸೋಲಾರ್ ಟೆಕ್ನಾಲಜಿ, ಬೇಕರಿ ಆ್ಯಂಡ್ ಕಾನ್​ಫೆಕ್ಷನರಿ, ಬೇಸಿಕ್ ಕಾಸ್ಮೆಟಾಲಜಿ, ಫುಡ್ ಪ್ರೊಡಕ್ಷನ್ (ಜನರಲ್) ಇತ್ಯಾದಿ ವಿಶೇಷ ವೃತ್ತಿಗಳನ್ನು ಹೊಸದಾಗಿ ಆರಂಭಿಸಲಾಗಿದೆ.ಅರ್ಜಿದಾರರು ಭಾರತದ ಸರ್ಕಾರದ ಡಿಜಿಟಿ ನವದೆಹಲಿ ಯಿಂದ ಸಂಯೋಜನೆಗೊಂಡಿರುವ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ವೃತ್ತಿಗಳ ಬಗ್ಗೆ ಖಚಿತಪಡಿಸಿಕೊಂಡು ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಆರೋಗ್ಯ ಇನ್ನಷ್ಟು ಕ್ಷೀಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
