ಕಲಬುರಗಿ:ಕಲಬುರಗಿ ತಾಲೂಕಿನ ಸಾವಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸಿಂದಗಿ (ಬಿ) ಗ್ರಾಮದಲ್ಲಿ ಸಿನಿಮೀಯ ಶೈಲಿಯಲ್ಲಿ ಕಿಡ್ನ್ಯಾಪ್​ ಯತ್ನ ನಡೆದಿದೆ. ಇದಕ್ಕೆಲ್ಲಾ ಕಾರಣ ಗ್ರಾಮ ಪಂಚಾಯಿತಿ ಚುನಾವಣೆ! ನಾಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯ ಅಪರಹಣಕ್ಕೆ ಯತ್ನ ನಡೆದಿದೆ.
ನಾಳೆ ಸಾವಳಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಗದ್ದುಗೆ ಹಿಡಿಯಲು ಹರಸಾಹಸ ನಡೆಯುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​ ಬೆಂಬಲಿತ ಸದಸ್ಯರ ನಡುವೆ ಭಾರೀ ಸ್ಪರ್ಧೆ ಉಂಟಾಗಿದೆ ಎನ್ನಲಾಗುತ್ತಿದೆ. ಸಾವಳಗಿ ಗ್ರಾ.ಪಂ.ನ ಬಿಜೆಪಿ ಬೆಂಬಲಿತ ಸದಸ್ಯೆ ನಾಗಮ್ಮ ಕೊಂಡೆದ್ ಅವರ ಅಪಹರಣಕ್ಕೆ ಅದೇ ಗ್ರಾಮದ ಕಾಂಗ್ರೆಸ್ ಬೆಂಬಲಿತ ಶಿವಕುಮಾರ್ ಮಲ್ಲು ಕಡಗಂಚಿ ಸೇರಿದಂತೆ ಇತರರು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ, ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪ್ರೀತಿಯ ವಿಚಾರಕ್ಕೆ ಯುವಕನನ್ನು ಕಿಡ್ನ್ಯಾಪ್‍ ಮಾಡಿ ಪೆಟ್ರೋಲ್ ಹಚ್ಚಿ ಸುಟ್ಟ ದುಷ್ಕರ್ಮಿಗಳು!
ಜಮೀನಿನಲ್ಲಿ‌ ಕೆಲಸ ಮಾಡ್ತಿರುವಾಗ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯೆಯನ್ನು, ಕ್ರೂಸರ್‌ನಲ್ಲಿ ಬಂದ 5 ರಿಂದ 6 ಜನ ಅಪಹರಣಕಾರರು, ಪೊಲೀಸರ ಹೆಸರು ಹೇಳಿ ಕಿಡ್ನ್ಯಾಪ್​ ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭ ಅವರು ಮಾರಕಾಸ್ತ್ರಗಳನ್ನು ಹಾಗೂ ಬಡಿಗೆಗಳನ್ನೂ ಹಿಡಿದುಕೊಂಡು ಸದಸ್ಯೆ ನಾಗಮ್ಮರನ್ನು ಅಪರಹಣ ಮಾಡಲು ಮುಂದಾಗಿದ್ದರು.
ಇದನ್ನೂ ಓದಿ:ಫೇಸ್​​ಬುಕ್​ ಸ್ನೇಹಿತನೊಂದಿಗೆ ಪತ್ನಿ ಪರಾರಿ: ಕಿಡ್ನ್ಯಾಪ್​​​ ಎಂದು ಪತಿಯಿಂದ ದೂರು
ಈ ವೇಳೆ ಸ್ಥಳಕ್ಕೆ ನಾಗಮ್ಮ ಅವರ ಪುತ್ರ ಹಾಗೂ ಗ್ರಾಮಸ್ಥರು ಬಂದಿದ್ದಾರೆ. ಜನ ಸೇರುವುದನ್ನು ಕಂಡು ಅಪಹರಣಕಾರರು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಸದಸ್ಯೆ ನಾಗಮ್ಮ ಮತ್ತು ಪುತ್ರ ಮಲ್ಲಿಕಾರ್ಜುನಿಗೆ ಗಾಯಗಳಾಗಿವೆ. ಅಪಹರಣಕಾರರಲ್ಲಿ ನಾಲ್ವರು ತಪ್ಪಿಸಿಕೊಂಡಿದ್ದು, ಗ್ರಾಮಸ್ಥರ ಕೈಗೆ ಓರ್ವ ಸಿಕ್ಕಿಬಿದ್ದಿದ್ದಾನೆ. ಆತನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ.
ಈತ, ಸಿಕ್ಕಿ ಬೀಳುತ್ತಿದ್ದಂತೆಯೇ, ಆತನನ್ನು ಮರಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರು ಮನಬಂದಂತೆ ಥಳಿಸಿದ್ದಾರೆ. ನಂತರ ಆತನನ್ನೂ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯಾವ ತರಬೇತಿಯನ್ನೂ ಪಡೆಯದ ‘ಕ್ರೀಡಾಪಟು’ವಿಗೆ ಅವಕಾಶ ಕೊಟ್ಟು ಕೆಟ್ಟಿತು ಈ ದೇಶ!

ಟ್ರಕ್​ ಡ್ರೈವರ್​ಗಳಿಗೆ ಇನ್ನು ನಿರಾಳ; ಈ ವರ್ಗದ ಟ್ರಕ್​ ಕ್ಯಾಬಿನ್​ಗಳಲ್ಲಿನ್ನು AC ಕಡ್ಡಾಯ!

ಖರ್ಗೆ ಮೈಬಣ್ಣದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಆರಗ ಜ್ಞಾನೇಂದ್ರ; ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + eleven =
Remember me
