ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು, ಲೋಕಸಭೆ ಚುನಾವಣೆಯಲ್ಲಿ ಸಮಾಧಾನಕರ ಸಾಧನೆಯಿಂದ ಪ್ರತಿಪಕ್ಷ ಬಿಜೆಪಿ ಪುಟಿದೆದ್ದಿದೆ.
ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಗೆ ಬೇಸರ ಮಡುಗಟ್ಟಿದೆ. ಗ್ಯಾರಂಟಿ ಯೋಜನೆ ಗಳು ಪೂರ್ಣ ಪ್ರಮಾಣದ ಪ್ರಭಾವಬೀರಿಲ್ಲ ಎಂಬ ಜನರ ನಾಡಿಮಿಡಿತ ಫಲಿತಾಂಶದಲ್ಲಿ ಬಿಂಬಿತವಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ಹುರುಪಿನಿಂದ ತಾಲೀಮು ಶುರು ಮಾಡಿದ್ದು, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮೊದಲ ಅಧಿವೇಶನ ಇದಾಗಲಿದೆ. ಆಡಳಿತಪಕ್ಷದ ವೈಫಲ್ಯ, ವಾಲ್ಮೀಕಿ ನಿಗಮದ ಹಗರಣ, ಬೆಲೆಗಳ ಏರಿಕೆ, ಆರ್ಥಿಕ ದುಃಸ್ಥಿತಿಯಂತಹ ಅಸ್ತ್ರಗಳು ಪಕ್ಷದ ಬತ್ತಳಿಕೆಗೆ ಸೇರಿವೆ. ಸರ್ಕಾರ ಕೈಕಟ್ಟಿ ಹಾಕುವುದಕ್ಕಾಗಿ ‘ಹೋಮ್ ವರ್ಕ್’ ನೆಡೆಗೂ ಕಮಲಪಡೆ ನಾಯಕರು ಚಿತ್ತ ನೆಟ್ಟಿದ್ದಾರೆ.
ಕೋರ್ ಗ್ರೂಪ್:ವಿಧಾನಸಭೆ ಪ್ರತಿಪಕ್ಷ ನಾಯಕ, ಹಿರಿಯರು, ನುರಿತ ಶಾಸಕರನ್ನು ಒಳಗೊಂಡ ಐದಾರು ಜನರ ಕೋರ್ ಗ್ರೂಪ್​ವೊಂದನ್ನು ರಚಿಸಿಕೊಂಡು, ಕಾರ್ಯತಂತ್ರ ಹೆಣೆಯಲು ಯೋಚಿಸಿದೆ.
ಸಂವಿಧಾನಪಟುಗಳನ್ನು ಸಂರ್ಪಸಿ ಮಾರ್ಗ ದರ್ಶನ ಪಡೆಯಲಿದೆ. ಕಾಂಗ್ರೆಸ್ ಸರ್ಕಾರ ಒಂದು ವರ್ಷ ಕಾರ್ಯನಿರ್ವಹಿಸಿದ ರೀತಿ, ಎಡೆವಿದ್ದೆಲ್ಲಿ ? ಎಂದು ಆಧಾರಸಹಿತ ಪ್ರತಿಪಾದಿಸಲು ಉತ್ಸಾಹಿ ತಂಡ ಸನ್ನದ್ಧವಾಗಲಿದೆ. ರಚನಾತ್ಮಕ ಪ್ರತಿಪಕ್ಷ, ಜನರ ಧ್ವನಿಯಾಗಲು ಸಮರ್ಥವೆಂಬ ಸಂದೇಶವು ಜನರಿಗೆ ರವಾನಿಸಲು ಬೇಕಾದ ‘ಸದನ-ಕದನ ವ್ಯೂಹ’ ಸಿದ್ಧಗೊಳಿಸಲಿದ್ದೇವೆ ಎಂದು ಶಾಸಕರೊಬ್ಬರು ಹೇಳಿದರು. ಆಯ್ದ ಶಾಸಕರನ್ನು ಒಳಗೊಂಡ ಕೋರ್​ಗ್ರೂಪ್ ಪರಸ್ಪರ ವಿಚಾರ ವಿನಿಮಯ ನಡೆಸಲಿದೆ. ನಂತರ ಎಲ್ಲ ಶಾಸಕರೊಂದಿಗೆ ರ್ಚಚಿಸಿ, ತಂತ್ರಗಾರಿಕೆಗೆ ಸ್ಪಷ್ಟರೂಪ ನೀಡಲಿದೆ.
ಜಂಟಿ ವ್ಯೂಹ ರಚನೆ:ಪರಿಣಾಮಕಾರಿ ಸಂವಹನ- ಸಂಪರ್ಕ ಬೆಳೆಸಿಕೊಂಡು, ಬೆಳಗಾವಿ ಅಧಿವೇಶನದ ಅಪಸವ್ಯಗಳು ಮರುಕಳಿಸದಂತೆ ಎಚ್ಚರಿಕೆವಹಿಸಲು ಪಕ್ಷದ ವರಿಷ್ಠರು ಸೂಚಿಸಿಯಾಗಿದೆ. ಒಗ್ಗಟ್ಟಿನ ಪ್ರದರ್ಶನದ ಜತೆಗೆ ಎತ್ತಿದ ವಿಷಯದ ಬಗ್ಗೆ ಒಮ್ಮತ, ಬಜೆಟ್ ಅಧಿವೇಶನದ ರೀತಿಯಲ್ಲಿ ಮಿತ್ರಪಕ್ಷ ಜೆಡಿಎಸ್ ಜತೆಗೆ ಜಂಟಿ ವ್ಯೂಹ ರಚಿಸಲು ಉತ್ಸುಕವಾಗಿದೆ. ಪಕ್ಷದ ಕೋರ್ ಗ್ರೂಪ್ ಸಭೆ ಬಳಿಕ ಜೆಡಿಎಸ್ ನಾಯಕರೊಂದಿಗೆ ಸಭೆ ನಡೆಸಿ, ಜಂಟಿ ಮತ್ತು ಪ್ರತ್ಯೇಕ ಕಾರ್ಯಸೂಚಿಗಳನ್ನು ಗೊತ್ತುಪಡಿಸುವ ಚಿಂತನೆಯಿದೆ ಮೂಲಗಳು ತಿಳಿಸಿವೆ.
ಅಧಿವೇಶನಕ್ಕೆ ಮುನ್ನವೇ ಸಭೆ:ಪರಸ್ಪರ ಸಹಕಾರ, ಸಮನ್ವಯದ ದೃಷ್ಟಿಯಿಂದ ಈ ಬಾರಿ ಅಧಿವೇಶನಕ್ಕೆ ಮುನ್ನವೇ ಶಾಸಕಾಂಗ ಪಕ್ಷದ ಸಭೆ ನಡೆಸಲು ಯೋಚಿಸಲಾಗಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರು ಲೋಕಸಭೆ ಪ್ರವೇಶಿಸಿಯಾಗಿದೆ. ಅನುಭವಿಗಳಿಬ್ಬರ ‘ಕೊರತೆ’ ತುಂಬಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಆಡಳಿತ, ತಾಂತ್ರಿಕವಾಗಿ ವಿಷಯಗಳನ್ನು ಪ್ರಸ್ತುತಪಡಿಸುವಲ್ಲಿ ಇಬ್ಬರದೂ ಎತ್ತಿದ ಕೈಯಾಗಿತ್ತು. ಕೋಟ ಮತ್ತು ಬೊಮ್ಮಾಯಿ ಅನುಪಸ್ಥಿತಿ ಕಾಡದಂತೆ ನೋಡಿಕೊಳ್ಳುವುದು ಉಳಿದ ಶಾಸಕರ ಜವಾಬ್ದಾರಿಯಾಗಿದೆ. ಮುಂಚಿತವಾಗಿ ಶಾಸಕಾಂಗ ಪಕ್ಷದ ಸಭೆ ನಡೆಸುವುದೇ ಸೂಕ್ತವೆಂಬ ಸಲಹೆ ನಾಯಕರು ಪರಿಗಣಿಸಿದ್ದಾರೆ. ಈ ನಡುವೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಪ್ರವಾಸ ಕೈಗೊಂಡು, ಆಯಾ ಜಿಲ್ಲೆ ವಸ್ತುಸ್ಥಿತಿ, ಸಮಸ್ಯೆಗಳು, ಪರಿಹಾರೋಪಾಯಗಳ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
