ಬೆಂಗಳೂರು:ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹೆಸರಲ್ಲಿ ಕೃಷಿ ಬಿಟ್ಟು ರಿಯಲ್ ಎಸ್ಟೇಟ್ ಚಟುವಟಿಕೆ ಮಾಡಿದರೆ ಅದಕ್ಕೆ ನನ್ನ ವಿರೋಧವಿದೆ ಎಂದು ಕೃಷಿ ಸಚಿವ ಬಿ.ಸಿ . ಪಾಟೀಲ್ ಹೇಳಿದ್ದಾರೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಸಂಪುಟ ಒಪ್ಪಿಗೆ ನೀಡಿದೆ. ಕೃಷಿ ವಿದ್ಯಾರ್ಥಿಗಳು ಬಹಳಷ್ಟಿದ್ದಾರೆ. ಕೃಷಿಗೆ ತೊಡಗಿಸಿಕೊಳ್ಳುವವರಿಗೆ ಈ ಹಿಂದಿನ ಕಾನೂನು ಅನನುಕೂಲವಾಗಿತ್ತು. ಈಗ ಕಾಯ್ದೆ ತಿದ್ದುಪಡಿಯಿಂದ ಕೃಷಿ ಮಾಡಲು ಅಪೇಕ್ಷಿಸುವವರು ಭೂಮಿ ಖರೀದಿ ಮಾಡಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.
ಕೃಷಿ ಭೂಮಿ ಕೃಷಿಗೆ ಮಾತ್ರ ಬಳಕೆ ಆಗಬೇಕು ಎಂಬ ನಿಟ್ಟಿನಲ್ಲಿ ಕಂದಾಯ ಇಲಾಖೆ ಕಠಿಣ ನಿಬಂಧನೆಗಳನ್ನು ಹಾಕುತ್ತದೆ. ನಾನು ಕ್ಯಾಬಿನೆಟ್​ನಲ್ಲಿ ಆ ಬಗ್ಗೆ ವಿರೋಧ ಮಾಡಿಲ್ಲ. ಕೃಷಿ ಅಲ್ಲದೆ ಇದ್ದರೂ ಆಗ್ರೋ ಇಂಡಸ್ಟ್ರೀಸ್ ಮಾಡಬಹುದು. ಇದರಿಂದ ರಿಯಲ್ ಎಸ್ಟೇಟ್ ಲಾಬಿ ಆಗುತ್ತದೆಂದು ನನಗೆ ಅನಿಸುತ್ತಿಲ್ಲ. ಕೃಷಿ ಚಟುವಟಿಕೆ ಹೆಸರಲ್ಲಿ ರಿಯಲ್ ಎಸ್ಟೇಟ್ ಮಾಡಿದರೆ ಅದಕ್ಕೆ ನನ್ನ ತೀವ್ರ ವಿರೋಧವಿದೆ ಎಂದರು. ಈ ದೇಶದಲ್ಲಿ ಎಲ್ಲರಿಗೂ ಬೆಳೆ ಬೆಳೆಯುವ ಹಕ್ಕಿದೆ. ಯುವಕರು, ಪದವೀಧರರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವವರಿಗೆ ಕಾಯ್ದೆ ತಿದ್ದುಪಡಿಯಿಂದ ಅನುಕೂಲವಾಗಲಿದೆ. ಕರ್ನಾಟಕದಲ್ಲಿ ಮಾತ್ರ ಕೃಷಿ ಭೂಮಿ ಮಾರಾಟಕ್ಕೆ ನಿರ್ಬಂಧ ಇತ್ತು. ಈಗ ಆ ನಿರ್ಬಂಧ ಸಡಿಲಿಕೆ ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಂದಾಯ ಇಲಾಖೆ ಕೃಷಿ ಭೂಮಿ ಮಾರಾಟದ ಬಗ್ಗೆ ಮಾರ್ಗಸೂಚಿ ರೂಪಿಸಲಿದೆ ಎಂದು ತಿಳಿಸಿದರು. ಸಂಸ್ಕರಣಾ ಘಟಕ, ಶೀತಲೀಕರಣ ಘಟಕ, ಆಹಾರ ಉತ್ಪಾದನಾ ಘಟಕಗಳಿಗೂ ಈ ಕಾಯ್ದೆ ತಿದ್ದುಪಡಿಯಿಂದ ಪ್ರಯೋಜನವಾಗಲಿದೆ ಎಂದರು.
ಕೃಷಿ ಅಧಿಕಾರಿಗಳೂ ಕರೊನಾ ಯೋಧರು
ಬೆಂಗಳೂರು: ರೈತರು ಕರೊನಾ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಕೃಷಿ ಅಧಿಕಾರಿಗಳು ಸಹ ಕರೊನಾ ಯೋಧರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು. ವಿಕಾಸಸೌಧದಲ್ಲಿ ಮುಂಗಾರು ಹಂಗಾಮು ಕಾರ್ಯಾಗಾರ ಉದ್ಘಾಟಿಸಿದ ಅವರು, ಕೃಷಿ ಸಚಿವನಾಗಿ ಕಳಪೆ ಬಿತ್ತನೆ ಬೀಜ ಮಾರಾಟಗಾರರಿಗೆ ಕ್ಷಮೆ ನೀಡುವುದು ರೈತರಿಗೆ ಮಾಡಿದ ಅನ್ಯಾಯವೆಂದು ಭಾವಿಸಿ ಕೆಲಸ ಮಾಡಿದ್ದೇನೆ ಎಂದರು. ಜುಲೈವರೆಗೆ ಬೇಕಾದ ಗೊಬ್ಬರ ದಾಸ್ತಾನು ಇಟ್ಟುಕೊಂಡಿದ್ದೇವೆ. ಈ ಸಲ ಹೆಚ್ಚಿನ ಬೇಡಿಕೆ ಬಿತ್ತನೆ ಬೀಜಕ್ಕೆ ಬಂದಿದೆ. 7 ಲಕ್ಷ ಹೆಕ್ಟೇರ್​ವರೆಗೆ ಬಿತ್ತನೆ ನಡೆದಿದೆ. ಪ್ರತಿ ವರ್ಷ 5 ಲಕ್ಷ ಹೆಕ್ಟೇರ್ ಬಿತ್ತನೆ ನಡೆಯುತ್ತಿತ್ತು ಎಂದು ತಿಳಿಸಿದರು.
ಸಚಿವ ರವಿ ಸಮರ್ಥನೆ
ಎಸಿ-ತಹಸೀಲ್ದಾರ್ ಆಗಿ ಬರುವುದಕ್ಕೆ ಪೈಪೋಟಿ ನಡೆಸುತ್ತಿದ್ದರು. ಭೂಸ್ವಾಧೀನ ಕಾಯ್ದೆ ಕಲಂ 79ಎ ಮತ್ತು 79ಬಿ ಕೂಡ ಆದಾಯದ ಒಂದು ಮೂಲವಾಗಿತ್ತು. ಇವೆರಡು ಕಲಂ ರದ್ದು ಮಾಡಿದ್ದರಿಂದ ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಕೆಲವರ ವೈಯಕ್ತಿಕ ಲಾಭದ ಮೂಲ ಕಟ್ ಮಾಡಲು ಸರ್ಕಾರದ ಈ ತೀರ್ವನದಿಂದ ಸಾಧ್ಯವಾಗಲಿದೆ ಎಂದು ಕಾಯ್ದೆ ತಿದ್ದುಪಡಿಯನ್ನು ಸಚಿವ ಸಿ.ಟಿ.ರವಿ ಸಮರ್ಥಿಸಿಕೊಂಡರು. ಹಿಂದೆಯೂ ನೀರಾವರಿ ಸೇರಿ ಕೃಷಿ ಭೂಮಿ ಖರೀದಿಸಿದ ನಂತರ ಕಂಪನಿ ಹೆಸರಿಗೆ ಪರಿವರ್ತಿಸಿಕೊಳ್ಳುತ್ತಿದ್ದರು. ಈಗ ರೈತರು ಹಾಗೂ ಖರೀದಿದಾರರ ಮಧ್ಯೆ ನೇರ ವ್ಯವಹಾರ ನಡೆಯುತ್ತದೆ. ಈ ನಿರ್ಧಾರವನ್ನು ಕೆ.ಸಿ.ಕೊಂಡಯ್ಯ ಸೇರಿ ಕೆಲವು ಕಾಂಗ್ರೆಸ್​ನವರೇ ಸ್ವಾಗತಿಸಿದ್ದಾರೆ ಎಂದರು.
ತಿದ್ದುಪಡಿ ವಿರುದ್ಧ ಕಾಂಗ್ರೆಸ್ ಹೋರಾಟ
ಬೆಂಗಳೂರು: ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿವಿಧ ಪಕ್ಷ, ರೈತ ಸಂಘಟನೆಗಳನ್ನು ಸೇರಿಸಿಕೊಂಡು ಈ ತಿದ್ದುಪಡಿ ವಿರುದ್ಧ ಹೋರಾಡಲು ನಿರ್ಧರಿಸಿದೆ. ಸರ್ಕಾರ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವುದರಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿ.ಎಂ.ಇಬ್ರಾಹಿಂ, ರಮೇಶ್ ಕುಮಾರ್, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ವಿ.ಎಸ್.ಉಗ್ರಪ್ಪ, ಬಿ.ಎಲ್.ಶಂಕರ್, ಕೃಷ್ಣ ಬೈರೇಗೌಡ ಮತ್ತಿತರರು ಭಾಗವಹಿಸಿದ್ದರು. ತಿದ್ದುಪಡಿಯಿಂದ ರೈತರಿಗೆ ಆಗುವ ಅನ್ಯಾಯಗಳ ಬಗ್ಗೆ ಇನ್ನೂ ವಿಸ್ತೃವಾಗಿ ರ್ಚಚಿಸಿ ಸದ್ಯದಲ್ಲೇ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುತ್ತದೆ. ಸಭೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಉಳುವವರೇ ಭೂಮಿಯ ಒಡೆಯರಾಗಬೇಕೆಂದು ಜಾರಿಗೆ ತಂದ ಕಾಯ್ದೆಯನ್ನು ಸರ್ಕಾರ, ಉಳ್ಳವರೇ ಭೂಮಿಯ ಒಡೆಯರನ್ನಾಗಿಸಲು ಹೊರಟಿದೆ’ ಎಂದರು.
ಪ್ರಾಂತ ರೈತ ಸಂಘ ಕಳವಳ
ಯಾರು ಬೇಕಾದರೂ ಕೃಷಿ ಭೂಮಿ ಹೊಂದಲು ಅವಕಾಶ ಕಲ್ಪಿಸುವುದರಿಂದ ಗಂಭೀರ ಸಂಕಟ ಸೃಷ್ಟಿಯಾಗಲಿದ್ದು, ಗ್ರಾಮೀಣ ಪ್ರದೇಶ, ಸಣ್ಣ, ಮಧ್ಯಮ ಕೈಗಾರಿಕೆಗಳು ನಾಶವಾಗಲಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಕಳವಳ ವ್ಯಕ್ತಪಡಿಸಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಾಯ್ದೆಯನ್ನು ದುರ್ಬಲಗೊಳಿಸಲಾಗಿತ್ತು. ಇದೀಗ ಕಲಂ 79ಎ ಮತ್ತು 79ಬಿ ರದ್ದುಪಡಿಸಿ, ಕಾಪೋರೇಟ್ ಕಂಪನಿಗಳಿಗೆ ಒತ್ತೆಯಿಡಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಸಂಘ ಆರೋಪಿಸಿದೆ.
ಬಡವರ ಹಣದಲ್ಲಿ ಕುಬೇರನಾದ ಕೆಐಎಡಿಬಿ ಅಧಿಕಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 11 =
Remember me
