ಶಿರಸಿ: ರಾಜ್ಯ ಸರ್ಕರವು ಹಿಂದು ದೇವಾಲಯಗಳ ಮೇಲೆ ಕಾಯ್ದೆ ಜಾರಿಗೆ ತಂದು ಪ್ರಹಾರ ಮಾಡಲು ಹೊರಟಿದೆ. ಇದು ಸಲ್ಲ. ದೇವಾಲಯಗಳ ಸ್ವಾಯತ್ತತೆ ಸಂಬಂಧ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್​ನಲ್ಲಿ ದಾಖಲಿಸಿರುವ ಎರಡು ಮೇಲ್ಮನವಿಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕು ಎಂದು ಜಿಲ್ಲಾ ಹಿಂದು ಧಾರ್ವಿುಕ ದೇವಾಲಯಗಳ ಮಹಾಮಂಡಳದ ಕಾರ್ಯಾಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.
ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಹಾಮಂಡಳದ ಸ್ಥಳೀಯ ಘಟಕದ ವತಿಯಿಂದ ನಡೆದ ಧಾರ್ವಿುಕ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ದೇವಾಲಯಗಳ ಆಡಳಿತದ ಕುರಿತು ಏಕರೂಪದ ಕಾಯ್ದೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಬಾಂಬೆ ಪಬ್ಲಿಕ್ ಟ್ರಸ್ಟ್ ಕಾಯ್ದೆ ರದ್ದುಪಡಿಸಿದೆ. ಅದರ ಬದಲು ಕರ್ನಾಟಕ ಹಿಂದು ಧಾರ್ವಿುಕ ಸಂಸ್ಥೆಗಳು ಹಾಗೂ ಧರ್ವದಾಯ ದತ್ತಿ ಅಧಿನಿಯಮ 1997 ಎನ್ನುವ ಹೊಸ ಕಾಯ್ದೆಯನ್ನು 2003ರಲ್ಲಿ ಜಾರಿಗೆ ತಂದಿದೆ. ಈ ಕಾಯ್ದೆ ಹಿಂದುಗಳ ಧಾರ್ವಿುಕ ಸ್ವಾತಂತ್ರ್ಯ ಕಸಿದುಕೊಳ್ಳುವ ಮತ್ತು ದೇವಾಲಯವನ್ನು ಸರ್ಕಾರೀಕರಣಗೊಳಿಸುವಂತೆ ಭಾಸವಾದ ಕಾರಣಕ್ಕೆ ಧಾರ್ವಿುಕ ಪ್ರಮುಖರು ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ನಿರಂತರ ಕಾನೂನಿನ ಹೋರಾಟದ ನಡುವೆಯೂ 2011ರಲ್ಲಿ ತಿದ್ದುಪಡಿಆದ ಕಾಯ್ದೆ ಜಾರಿಗೆ ತರಲಾಯಿತು. ಈ ಕಾನೂನು ಕೂಡ ಬಹುತೇಕ ಈ ಹಿಂದಿನಂತೆ ಇರುವ ಕಾರಣ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಧಾರ್ವಿುಕ ಪ್ರಮುಖರ ಪರ ತೀರ್ಪು ಬಂದಿತ್ತು. ಆದರೂ ಮೇಲ್ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರವು, ಹೈಕೋರ್ಟ್​ನ ಈ ಆದೇಶಕ್ಕೆ ತಡೆಯಾಜ್ಞೆ ತಂದಿತು. ಅಲ್ಲದೆ, ಸಂವಿಧಾನ ಬಾಹಿರ ಎಂದು ಘೊಷಿಸಲ್ಪಟ್ಟ ಕಾನೂನನ್ನು ಜಾರಿ ಮಾಡುತ್ತಿದೆ. ಇದು ಖಂಡನೀಯವಾಗಿದೆ ಎಂದರು.
ಹಿಂದು ದೇವಾಲಯಗಳ ಮೇಲೆ ಆಡಳಿತವು ಪ್ರಹಾರ ಮಾಡುತ್ತಿದೆ. ಯಾವುದೇ ಸರ್ಕಾರವಿದ್ದರೂ ಮುಜರಾಯಿ ಇಲಾಖೆ ಮೂಲಕ ದೇವಾಲಯಗಳ ಸ್ವಾಯತ್ತತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿವೆ. ಇದು ಅಕ್ಷಮ್ಯವಾಗಿದೆ. ಎಲ್ಲ ದೇವಾಲಯಗಳು ಮಹಾಮಂಡಳದ ಸದಸ್ಯತ್ವ ಹೊಂದಬೇಕು. ಸಂಘಟನಾತ್ಮಕವಾಗಿ, ಏಕರೂಪವಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ಸರ್ಕಾರದ ಈ ಕಾನೂನು ಜಾರಿಯಾದರೆ ದೇವಾಲಯಗಳು ಸರ್ಕಾರಿ ಕಚೇರಿಯಂತಾಗುತ್ತವೆ. ಆಸ್ತಿಕರ ಭಾವನೆಗೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚುತ್ತದೆ. ಸಂಪ್ರದಾಯಗಳು ಮೂಲೆಗುಂಪಾಗುತ್ತವೆ. ಹೀಗಾಗಿ ದೇವಾಲಯದ ಸ್ವಾಯತ್ತತೆಗೆ ತಡೆಯೊಡ್ಡುವ ಈ ಕಾನೂನಿನ ವಿರುದ್ಧ ಕಾನೂನು ಹೋರಾಟ ನಿರಂತರವಾಗಿ ಮಾಡಲಾಗುವುದು ಎಂದರು. ಸುಪ್ರಿಂ ಕೋರ್ಟ್ ನಲ್ಲಿರುವ ಪ್ರಕರಣ ಇತ್ಯರ್ಥ ಆಗುವವರೆಗೆ ರಾಜ್ಯ ಸರ್ಕಾರ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಬಾರದು. ಭಕ್ತರು, ಧಾರ್ವಿುಕ ಮುಖಂಡರ ಭಾವನೆಗೆ ಧಕ್ಕೆ ತರುವ ಕಾರ್ಯ ಕೈಬಿಡಬೇಕು. ಜತೆ, ರಾಜ್ಯದ ಎಲ್ಲ ಹಿಂದುಗಳಿಗೆ ಸರ್ವಸಮ್ಮತವಾದ, ಸರ್ಕಾರದ ಹಸ್ತಕ್ಷೇಪಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ ಕಾನೂನು ಜಾರಿಗೆ ತರಬೇಕು ಎಂದರು.
ಹಿಂದು ಧಾರ್ವಿುಕ ದೇವಾಲಯಗಳ ಮಹಾಮಂಡಲದ ಪ್ರಮುಖ ಕುಮಟಾದ ಎಲ್.ಬಿ. ಶಾನಭಾಗ ಸಭೆ ಉದ್ಘಾಟಿಸಿದರು.
ಈ ವೇಳೆ ಮಂಡಳದ ಪ್ರಮುಖರಾದ ಟಿ.ಜಿ. ನಾಡಿಗೇರ, ರವೀಂದ್ರ ಪವಾರ ಇದ್ದರು. ಪ್ರಮುಖರಾದ ಗೋಪಾಲಕೃಷ್ಣ ವೈದ್ಯ ನಿರೂಪಿಸಿದರು.
ಪ್ರಮುಖ ಅಂಶಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 5 =
Remember me
