ಬೆಂಗಳೂರು:ಏಷ್ಯಾದ ಅತೀ ದೊಡ್ಡ ಏರೋ ಶೋ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಈಗಾಗಲೇ ಭಾರತ ನಿರ್ಮಿತ ಯುದ್ಧ ವಿಮಾನಗಳಿಗೆ ಬೇಡಿಕೆ ಶುರುವಾಗಿದೆ! ಹೌದು. ಇದೀಗ ತೇಜಸ್​ ಯುದ್ಧ ವಿಮಾನವನ್ನು ಖರೀದಿಸಲು ಅರ್ಜೆಂಟೀನಾ, ಮಲೇಷ್ಯಾ ಈಜಿಪ್ಟ್​ ಮುಂತಾದ ದೇಶಗಳು ಸರತಿ ಸಾಲಿನಲ್ಲಿ ನಿಲ್ಲಲು ತಯಾರಾಗಿವೆ.
ಎಲ್​ಸಿಎ ತೇಜಸ್​ ಹಗುರ ಯುದ್ಧ ವಿಮಾನವಾಗಿದ್ದು ಇದನ್ನು ಬಳಸಿಕೊಂಡು ಅತೀ ವೇಗವಾಗಿ ಶತ್ರು ದೇಶದ ಒಳಕ್ಕೆ ನುಗ್ಗಿ ದಾಳಿ ಮಾಡಿ ಅಷ್ಟೇ ವೇಗದಲ್ಲಿ ಹಿಂತಿರುಗಿ ಬರಬಹುದು. ಅಂತಹ ಯುದ್ಧ ವಿಮಾನವನ್ನೇ ಹುಡುಕಾಡುತ್ತಿರುವ ಮಲೇಷ್ಯಾ, ಈಜಿಪ್ಟ್​ ಮುಂತಾದ ದೇಶಗಳು ಭಾರತದ ಬಳಿಗೆ ಆಗಮಿಸಿವೆ. ಈಗ ಮಲೇಷ್ಯಾದಿಂದ ತೇಜಸ್​ ಯುದ್ಧ ವಿಮಾನಕ್ಕೆ ಬೇಡಿಕೆ ಬಂದಿದ್ದು ಕಾಂಟ್ರಾಕ್ಟ್ ಸಿಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎಚ್​ಎಎಲ್ ಎಂಡಿ ಸಿಎಂಡಿ ಅನಂತಕೃಷ್ಣನ್, ‘ಅರ್ಜಂಟೈನಾ, ಈಜಿಫ್ಟ್ ಜೊತೆಗೂ ಮಾತುಕತೆ ನಡೆಯುತ್ತಿದ್ದು ಅವರ ಇಂಜಿನಿಯರ್ ನಮ್ಮಲ್ಲಿಗೆ ಬಂದು ಚರ್ಚಿಸಿದ್ದಾರೆ. ಸಾಕಷ್ಟು ಆರ್ಡರ್ ಸಿಗುವ ನಿರೀಕ್ಷೆ ಇದೆ. ಎಚ್​ಎಎಲ್ ಉಪಕರಣಗಳಿಗೆ ಡಿಮ್ಯಾಂಡ್ ಹೆಚ್ಚುತ್ತಿದೆ. ಅರ್ಜಂಟೈನಾದಿಂದ 15 LCA ಏರ್ ಕ್ರಾಫ್ಟ್ ಗೆ ಬೇಡಿಕೆ ಬಂದಿದೆ’ ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 1 =
Remember me
