ಬೆಂಗಳೂರುಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರಿಗೆ ಮಾಸಿಕ ಕನಿಷ್ಠ ವೇತನ ಹಾಗೂ ವಾರ್ಷಿಕ ವ್ಯತ್ಯಾಸವಾಗುವ ತುಟ್ಟಿ ಭತ್ಯೆಯನ್ನು ಪಾವತಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಸೂಚನೆ ನೀಡಿದೆ.
ಕಾರ್ಮಿಕ ಇಲಾಖೆಯು 2022ರ ಜು.28ರಂದು ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡಿದೆ. ಅದರಂತೆ, ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳನ್ನು ಸೇರ್ಪಡೆಗೊಳಿಸಿ 16,382 ರೂ.ಗಳನ್ನು ನಿಗದಿಪಡಿಸಿದೆ. ಕನಿಷ್ಠ ವೇತನ ಮತ್ತು ವಾರ್ಷಿಕ ವ್ಯತ್ಯಾಸವಾಗುವ ತುಟ್ಟಿ ಭತ್ಯೆಯನ್ನು ಪಾವತಿಸಲು ಆದೇಶಿಸಿದೆ.
ಆ ಪ್ರಕಾರ, ಗ್ರಂಥಾಲಯ ಉಪಕರವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಉಳಿಸಿಕೊಂಡು ವ್ಯತ್ಯಾಸವಾಗುವ ಕನಿಷ್ಠ ವೇತನ ಮತ್ತು ವ್ಯತ್ಯಾಸವಾಗುವ ತುಟ್ಟಿ ಭತ್ಯೆಯನ್ನು ಪಾವತಿಸಬೇಕು.
2023-24ನೇ ಸಾಲಿಗೆ ಗ್ರಂಥಾಲಯ ಮೇಲ್ವಿಚಾರಕರಿಗೆ ಮಾಸಿಕ ಕನಿಷ್ಠ ವೇತನ 16,382 ಮತ್ತು ವ್ಯತ್ಯಾಸವಾಗುವ ತುಟ್ಟಿ ಭತ್ಯೆ 1,542 ರೂ. ಸೇರಿ 17,924 ರೂ,ಗಳನ್ನು ಪಾವತಿಸುವಂತೆ ಆದೇಶ ಹೊರಡಿಸಲಾಗಿದೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:eleven + 4 =
Remember me
