|ವಿಲಾಸ ಮೇಲಗಿರಿಬೆಂಗಳೂರು
ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಆದರೆ ಮುಂಗಾರು ಅಧಿವೇಶನದಲ್ಲೇ ವಿಧೇಯಕಕ್ಕೆ ಅಂಗೀಕಾರ ಪಡೆಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ ಭರವಸೆ ಈಡೇರದಿರುವುದು ಕನ್ನಡಪರ ಹೋರಾಟಗಾರರ ಕಣ್ಣು ಕೆಂಪಾಗಿಸಿದೆ.
ವಿಧೇಯಕವನ್ನು ತಕ್ಷಣ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಬೇಕು. ಕನ್ನಡ ರಾಜ್ಯೋತ್ಸವ, ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ದೃಷ್ಟಿಯಲ್ಲಿಟ್ಟುಕೊಂಡು ವಿಧೇಯಕ ಜಾರಿಗೊಳಿಸಬೇಕು ಎಂಬುದು ಕನ್ನಡಪರ ಹೋರಾಟಗಾರರ ಆಗ್ರಹ.
ಮನಬಂದಂತೆ ಪರಿವರ್ತನೆ:ನ್ಯಾ. ಎಸ್.ಆರ್.ಬನ್ನೂರುಮಠ, ನ್ಯಾ. ಅಶೋಕ ಜಿ.ನಿಜ ಗಣ್ಣವರ ಸೇರಿ ದಿಗ್ಗಜರು ರೂಪಿಸಿದ್ದ ವಿಧೇಯಕದ ಕರಡಿನಲ್ಲಿರುವ ಕೆಲವು ಅಂಶಗಳನ್ನು ಮನಬಂದಂತೆ ಪರಿವರ್ತಿಸಲಾಗಿದೆ. ಕನ್ನಡ ಕಲಿಸುವುದು, ಕನ್ನಡ ನಾಮಫಲಕ ಹಾಕದವರಿಗೆ ದಂಡ, ಶಿಕ್ಷೆ ವಿಧಿಸುವ ನಿಯಮವೇನೋ ಸರಿ. ಆದರೆ ಆಡಳಿತದಲ್ಲಿ ಕನ್ನಡ ಅನುಷ್ಠಾನ ವಿಚಾರದಲ್ಲಿ ಅನುಭವಿಗಳ ಪಾತ್ರ ಮುಖ್ಯ ಎಂಬುದನ್ನು ವಿಧೇಯಕ ಮರೆತಂತಿದೆ. ಸರ್ಕಾರ ವಿಧಾನಸಭೆಯಲ್ಲಿ ಸೆ.22ರಂದು ಮಂಡಿಸಿದ ವಿಧೇಯಕದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಅಡಿ ರಾಜಭಾಷಾ ಆಯೋಗ ರಚನೆಗೆ ಅವಕಾಶ ಮಾಡಲಾಗಿದೆ. ಅದರಲ್ಲಿ ಅಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳನ್ನು ನಿವೃತ್ತ ಅಧಿಕಾರಿಗಳಿಗೆ ನೀಡಲು ಅನುವು ಮಾಡಿಕೊಂಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಸಚಿವರ ಅಧ್ಯಕ್ಷತೆಗೆ ಆಕ್ಷೇಪ:ರಾಜ್ಯಮಟ್ಟದ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೂ ಅಪಸ್ವರ ವ್ಯಕ್ತವಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಕಸಾಪ ಅಧ್ಯಕ್ಷರನ್ನು ಸದಸ್ಯ ಸ್ಥಾನದಿಂದಲೂ ಕೈಬಿಡಲಾಗಿದೆ. ಅಧಿಕಾರೇತರರು ಕಾನೂನು ಚೌಕಟ್ಟು ಮೀರಿ ಹೋಗುವುದನ್ನು ತಡೆಯುವಲ್ಲಿ ಅಧಿಕಾರಿಗಳ ಪಾತ್ರ ಅವಶ್ಯ. ಆದರೆ ಎಲ್ಲದ್ದಕ್ಕೂ ಅಧಿಕಾರಿಗಳೇ ಮುಖ್ಯರಾದರೆ ಹೇಗೆ ಎಂಬ ಪ್ರಶ್ನೆ ತಲೆ ಎತ್ತಿದೆ.
ವಿಳಂಬವೇಕೆ?:ನ್ಯಾ. ಎಸ್.ಆರ್.ಬನ್ನೂರುಮಠ ಸಮಿತಿ ಮೂರು ತಿಂಗಳ ಹಿಂದೆಯೇ ವರದಿ ಸಲ್ಲಿಸಿದ್ದರೂ ಸೆ.14 ರಂದು ಮುಖ್ಯಮಂತ್ರಿಗಳು ಕನ್ನಡ ಸಮಗ್ರ ಅನುಷ್ಠಾನಕ್ಕೆ ತರಲು ಕಾಯ್ದೆ ಜಾರಿ ತರುವುದಾಗಿ ಘೋಷಿಸುವವರೆಗೂ ಈ ಕುರಿತ ಕಡತ ಸರ್ಕಾರದಿಂದ ಅತ್ತಿತ್ತ ಅಲ್ಲಾಡಿರಲಿಲ್ಲ. ಬಳಿಕ ತರಾತುರಿಯಲ್ಲಿ ಮಂಡಿಸಲಾಗಿದೆ .
ಹಿನ್ನೆಲೆ ಏನು?:ಕನ್ನಡವನ್ನು ಅಧಿಕೃತ ಭಾಷೆಯಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ 1963 ಮತ್ತು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳು (ಅಧಿಕೃತ ಭಾಷೆ) ಅಧಿನಿಯಮ 1981 ಅನ್ನು ಜಾರಿಗೆ ತರಲಾಗಿದೆ. ಎಲ್ಲ ಹಂತದಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಶಾನಸಬದ್ಧ ನಿಕಾಯವಾಗಿ ಸ್ಥಾಪಿಸಲಾಗಿದೆ. ಹೀಗೆ ಅಧಿನಿಯಮ, ಅಧಿಸೂಚನೆ, ಹತ್ತಾರು ಆದೇಶಗಳಿದ್ದಾಗಲೂ ರಾಜ್ಯದಲ್ಲಿ ಅಧಿಕೃತ ಭಾಷೆಯಾದ ಕನ್ನಡವನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷಾ ಪ್ರಸಾರ ಮತ್ತು ಪ್ರಚಾರಕ್ಕಾಗಿ ಹಾಗೂ ಕನ್ನಡವನ್ನು ಅಧಿಕೃತ ಭಾಷೆಯಾಗಿ ಅನುಷ್ಠಾನಗೊಳಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ನನ್ನು ರಚಿಸಿ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ರಲ್ಲಿ ಜಾರಿಪ್ರಾಧಿಕಾರದ ರಾಜ್ಯ ಮಟ್ಟದ ಸಮಿತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಕೈಬಿಟ್ಟಿರುವುದು ಅಕ್ಷಮ್ಯ ಅಪರಾಧ. ಈ ಲೋಪ ಸರಿಪಡಿಸುವ ಮೂಲಕ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಸರ್ಕಾರ ತಕ್ಷಣ ಜಾರಿಗೊಳಿಸಬೇಕು.
|ಡಾ. ಮಹೇಶ ಜೋಶಿಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವಲ್ಲಿ ತೋರಿದ ಆಸಕ್ತಿಯನ್ನೂ ಈ ವಿಚಾರದಲ್ಲಿಯೂ ತೋರಿಸಬೇಕು. ಸುಗ್ರೀವಾಜ್ಞೆ ಮೂಲಕ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ತಕ್ಷಣ ಜಾರಿಗೊಳಿಸಬೇಕು.
|ಅಶೋಕ ಚಂದರಗಿಕನ್ನಡಪರ ಹೋರಾಟಗಾರ
ಅಧಿಕೃತ ಭಾಷೆಯ ಕಾರ್ಯಾನುಷ್ಠಾನಕ್ಕೆ ರಾಜ್ಯಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಅಧ್ಯಕ್ಷರನ್ನಾಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಸಹ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಸದಸ್ಯರನ್ನಾಗಿ ಮಾಡುವಂತೆ ತಿಳಿಸಲಾಗಿದೆ. ಆದರೆ ಇಲ್ಲೂ ಕರಡು ಉಲ್ಲಂಘನೆಯಾಗಿದೆ. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಪಂ ಸಿಇಒ ಅಥವಾ ಅವರಿಂದ ನೇಮಿಸಲ್ಪಟ್ಟ ಯಾವುದೇ ಅಧಿಕಾರಿ ಅಧ್ಯಕ್ಷರಾದರೆ, ಕಸಾಪ ಅಧ್ಯಕ್ಷರು ಸದಸ್ಯರಾಗಿದ್ದಾರೆ. ಇನ್ನೂ ಅಧ್ವಾನವೆಂದರೆ ತಾಲೂಕು ಸಮಿತಿಯಲ್ಲಿ ಕಸಾಪ ತಾಲೂಕು ಅಧ್ಯಕ್ಷರಿಗೆ ಯಾವುದೇ ಸ್ಥಾನ ಕಲ್ಪಿಸಿಲ್ಲ. ಈ ಕ್ರಮದಿಂದ ತಳಮಟ್ಟದಲ್ಲಿ ಕನ್ನಡ ಅನುಷ್ಠಾನಕ್ಕೆ ಇದು ಅಡ್ಡಿ ಆಗಬಹುದೆಂಬ ಆಲೋಚನೆಯೂ ಅಧಿಕಾರಿಗಳಲ್ಲಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ.
ಇದು ವಿದೇಶದಲ್ಲಿನ ಪ್ರಪ್ರಥಮ ಸ್ವಂತ ಕನ್ನಡ ಭವನ; 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ..

ಮತ್ತೆ ಆಯತಪ್ಪಿ ಎಡವಿದ ಮಾಜಿ ಸಿಎಂ; ಈ ಊರಲ್ಲಿ ಸಿದ್ದರಾಮಯ್ಯಗೆ ಇದೇನಿದು ಸಮಸ್ಯೆ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 1 =
Remember me
