| ಪಂಕಜ ಕೆ.ಎಂ. ಬೆಂಗಳೂರು
ರಾಜ್ಯದಲ್ಲಿ ವಿವಿಧ ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿರುವ ಸಾವಿರಾರು ಮಂದಿಯಲ್ಲಿ, ಅಂಗಾಂಗ ಕಸಿಗಾಗಿ ಹೆಸರು ನೋಂದಾಯಿಸಿರುವವರ ಸಂಖ್ಯೆ 8,500ಕ್ಕೂ ಅಧಿಕವಿದೆ. ಇವರಲ್ಲಿ ಕಿಡ್ನಿಗಾಗಿ 5,945 ಹಾಗೂ ಯಕೃತ್ತಿಗಾಗಿ 2,198 ಮಂದಿ ಕಾಯುತ್ತಿದ್ದಾರೆ. ಬದಲಾದ ಜೀವನಶೈಲಿ ಹಾಗೂ ಆಹಾರಕ್ರಮದಿಂದಾಗಿ ಪ್ರತಿ ಒಂದು ದಶಲಕ್ಷ ಜನರಲ್ಲಿ 800 ಮಂದಿ ಕಿಡ್ನಿ ಸಮಸ್ಯೆಗೆ ಒಳಗಾಗುತ್ತಿದ್ದು, ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿರುವವರಲ್ಲಿ ಯುವಜನರೇ ಹೆಚ್ಚಿನವರಾಗಿದ್ದಾರೆ.
ಈ ನಿಟ್ಟಿನಲ್ಲಿ ಅಂಗಾಂಗ ದಾನಕ್ಕೆ ಜನರನ್ನು ಪ್ರೇರೇಪಿಸಲು ಹಾಗೂ ಕುಟುಂಬದ ಸದಸ್ಯರನ್ನು ಕಳೆದುಕೊಂಡ ದುಃಖದ ಸಂದರ್ಭದಲ್ಲಿ ಅಂಗಾಂಗ ದಾನಕ್ಕೆ ಸಮ್ಮತಿಸುವ ಮೂಲಕ ಮಾನವೀಯತೆ ಮೆರೆದ ಕುಟುಂಬಗಳನ್ನು ಗೌರವಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು 2023-24ನೇ ಸಾಲಿನಲ್ಲಿ ಅಂಗಾಂಗ ದಾನ ಮಾಡಿರುವ ಕುಟುಂಬಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತಿದೆ.
ರಾಜ್ಯಕ್ಕೆ 2ನೇ ಸ್ಥಾನ: ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಖಣಖಖಣ)ಯಲ್ಲಿ 8,552 ಮಂದಿ ವಿವಿಧ ಅಂಗಾಂಗ ಕಸಿಗಾಗಿ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ದಾನಿಗಳು ಹಾಗೂ ಅಂಗಾಂಗಗಳು ಲಭ್ಯವಾಗುತ್ತಿಲ್ಲ. ಹಿಂಜರಿಕೆ ಮತ್ತು ಅರಿವಿನ ಕೊರತೆಯೇ ಇದಕ್ಕೆ ಕಾರಣ. ಆದರೆ ಕಳೆದ ವರ್ಷದಿಂದ ಈ ಬಗ್ಗೆ ಜನರು ಒಂದಿಷ್ಟು ಜಾಗೃತರಾಗಿದ್ದಾರೆ. 2022ರಲ್ಲಿ 151 ಮಂದಿ, 2023ರಲ್ಲಿ 178 ಮಂದಿ ಹಾಗೂ 2024ರ ಜುಲೈ ಅಂತ್ಯದವೇಳೆಗೆ 88 ಮಂದಿಯ ಅಂಗಾಂದ ದಾನ ಪ್ರಕ್ರಿಯೆ ನಡೆಸಿದ್ದು, ನೂರಾರು ಮಂದಿಗೆ ಮರುಜೀವ ದೊರೆತಿದೆ. ಇದರೊಂದಿಗೆ ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ ಏರಿದೆ. ಇದಕ್ಕಾಗಿ 2023ನೇ ಸಾಲಿಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಘಣಖಖಣ) ವತಿಯಿಂದ ಪ್ರಶಸ್ತಿ ಸಹ ಪಡೆದುಕೊಂಡಿದೆ.
ಎಷ್ಟು ಮಂದಿ ದಾನ:2017ರಲ್ಲಿ 88 ಮಂದಿ ಅಂಗಾಂಗ ದಾನ ಮಾಡಿದರೆ, 2018ರಲ್ಲಿ 89, 2019ರಲ್ಲಿ 105ಕ್ಕೆ ಏರಿಕೆಯಾಗಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಸಂಖ್ಯೆ 35ಕ್ಕೆ ಇಳಿಕೆಯಾಗಿತ್ತು. ನಂತರದಲ್ಲಿ ಏರಿಕೆ ಕಂಡುಬಂದಿದ್ದು, 2021ರಲ್ಲಿ 70, 2022ರಲ್ಲಿ 151, 2023ರಲ್ಲಿ 178 ಹಾಗೂ 2024ರ ಜುಲೈ ಅಂತ್ಯದವರೆಗೆ 98 ಮಂದಿಯಿಂದ ಅಂಗಾಂಗ ದಾನವಾಗಿದೆ.
ದಾನಕ್ಕೆ ಅರ್ಹರು ಯಾರು?:ಅಂಗಾಂಗ ದಾನ ಮಾಡಲು ಹಾಗೂ ಪಡೆಯಲು ವಯಸ್ಸಿನ ಮಿತಿಯಿಲ್ಲ. ಆದರೆ ಕ್ಯಾನ್ಸರ್, ಏಡ್ಸ್ ಸೋಂಕಿತರನ್ನು ಹೊರತುಪಡಿಸಿ ಎಲ್ಲರೂ ದಾನ ಮಾಡಬಹುದಾಗಿದೆ. ಅಪಘಾತ, ಬ್ರೖೆನ್​ಸ್ಟ್ರೋಕ್​ನಂತಹ ಸಂದರ್ಭದಲ್ಲಿ ರೋಗಿಯ ಮಿದುಳು ನಿಷ್ಕ್ರಿಯವಾಗಿರುತ್ತದೆ. ಆದರೆ ಹೃದಯಬಡಿತವಿರುತ್ತದೆ. ಆಗಲೂ ಕಣ್ಣು ದಾನ ಮಾಡಬಹುದು. ಮರಣಾನಂತರ ನಿರ್ದಿಷ್ಟ ಸಮಯದೊಳಗೆ ಹೃದಯ, ಮೂತ್ರಪಿಂಡ, ಯಕೃತ್, ಕರುಳು, ಶ್ವಾಸಕೋಶ, ಮೇದೋಜೀರಕ ಗ್ರಂಥ ದಾನ ಪಡೆದು ನಿಗದಿತ ಸಮಯದೊಳಗೆ ಕಸಿ ಮಾಡಬೇಕು ಎನ್ನುತ್ತಾರೆ ವೈದ್ಯರು.
ಕಸಿ ಚಿಕಿತ್ಸೆ ಹೇಗೆ?:ಮಿದುಳು ನಿಷ್ಕ್ರಿಯಗೊಂಡವರ ದೇಹದಿಂದ ತೆಗೆದ ಮೂತ್ರಪಿಂಡ ವನ್ನು 24 ಗಂಟೆಗಳಲ್ಲಿ ಕಸಿ ಮಾಡಬೇಕು. ಹೃದಯವನ್ನು 4-6 ಗಂಟೆಯೊಳಗೆ, ಯಕೃತ್, ಶ್ವಾಸಕೋಶ, ಮೇದೋಜೀರಕ, ಸಣ್ಣ ಕರುಳು ಇವು ಗಳನ್ನು 6 ಗಂಟೆಯೊಳಗೆ ಕಸಿ ಮಾಡಬೇಕು. ಕಣ್ಣು 14 ದಿನಗಳವರೆಗೆ ಸಂರಕ್ಷಿಸಿ ಇಡಬಹುದಾಗಿದೆ. ಇದಕ್ಕಾಗಿ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಖಣಖಖಣ) ದಾನಿಯ ಕುಟುಂಬ, ಕಸಿಗಾಗಿ ಕಾಯುತ್ತಿರುವ ರೋಗಿ ಹಾಗೂ ಆಸ್ಪತ್ರೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
ಎಸ್​ಒಟಿಟಿಒ ಇತಿಹಾಸ:1995ರಲ್ಲಿ ಫೌಂಡೇಷನ್ ಫಾರ್ ಆರ್ಗನ್ ರಿಟ್ರಿವಲ್ ಆಂಡ್ ಟ್ರಾನ್ಸ್ ಪ್ಲಾಂಟ್ ಎಜ್ಯುಕೇಷನ್ (ಎಫ್​ಒಆರ್​ಟಿಇ) ಎನ್​ಜಿಒ ಸಂಸ್ಥೆಯ ಮೂಲಕ ಅಂಗಾಂಗ ದಾನ ಮತ್ತು ಕಸಿ ಪ್ರಕ್ರಿಯೆ ಆರಂಭವಾಯಿತು. 2004ರಲ್ಲಿ ಝೋನಲ್ ಕೋಅರ್ಡಿನೇಷನ್ ಕಮಿಟಿ ಆಫ್ ಕರ್ನಾಟಕ ಫಾರ್ ಟ್ರಾನ್ಸ್​ಪ್ಲಾಂಟ್ (ಝುಡ್​ಸಿಸಿಕೆ) ಎಂದು ಹೆಸರು ಬದಲಾಯಿತು. 2016ರಲ್ಲಿ ಜೀವಸಾರ್ಥಕತೆ ಎಂದು ಹೆಸರಾಯಿತು. ಇದೀಗ ಸ್ಟೇಟ್ ಆರ್ಗನ್ ಟಿಶ್ಶು ಟ್ರಾನ್ಸ್​ಪ್ಲಾಂಟ್ ಅರ್ಗನೈಸೇಷನ್ (ಎಸ್​ಒಟಿಟಿಒ) ಎಂಬ ಹೆಸರು ಪಡೆದುಕೊಂಡಿದೆ.
ವಿವರಗಳಿಗಾಗಿ ಅಂಗಾಂಗ ವಿಫಲರಾದವರು ಹಾಗೂ ಅಂಗಾಂದ ದಾನ ಮಾಡಲು ಬಯಸುವವರು ಮಾಹಿತಿಗಾಗಿ ದೂ: 080-23295636/ಮೊ: 9845006768. ಇಮೇಲ್ ವಿಳಾಸ:jeevasarthakathe @gmail.com ಸಂರ್ಪಸಬಹುದು.
ಆಗಸ್ಟ್​ 13ರಿಂದ 15ರವರೆಗೆ ಪೀಣ್ಯ ಇಂಡಸ್ಟ್ರೀ-ನಾಗಸಂದ್ರ ನಡುವೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
