ಚಿಕ್ಕಬಳ್ಳಾಪುರ:ಕೋವಿಡ್​-19 ಸೋಂಕಿನಿಂದ ಸಾವಿಗೀಡಾದವರ ಪಾರ್ಥಿವ ಶರೀರ ಮನೆಯವರಿಗೇ ನೋಡಲು ಸಿಗದ ಪರಿಸ್ಥಿತಿ ಒಂದೆಡೆಯಾದರೆ, ಸಿಕ್ಕರೂ ನೋಡಲು ಸಂಬಂಧಿಕರು-ಆಪ್ತರೂ ಬಂದು ನೋಡಲಾಗದ ಪರಿಸ್ಥಿತಿ ಮತ್ತೊಂದೆಡೆ. ಇಂಥ ಸಂದರ್ಭದಲ್ಲಿ ಕಳ್ಳರು ಕೋವಿಡ್​-19 ಸೋಂಕಿತರು ಎಂಬುದನ್ನೂ ಲೆಕ್ಕಿಸದೆ ಕರೊನಾದಿಂದಾಗಿ ಮೃತಪಟ್ಟವರ ಶವಗಳ ಮೇಲಿನ ಚಿನ್ನಾಭರಣಗಳನ್ನು ಕೂಡ ಕಳವು ಮಾಡಿಕೊಂಡು ಹೋಗುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಇಂಥ ಕಳ್ಳರ ಕಾಟ ಹೆಚ್ಚಾಗಿದ್ದು, ಇಂದು ಕೂಡ ಮತ್ತೊಂದು ಇಂಥದ್ದೇ ಕಳವು ಪ್ರಕರಣ ವರದಿಯಾಗಿದೆ. ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದ, ಚಿಕ್ಕಬಳ್ಳಾಪುರದ ನಿವಾಸಿ, ನಿವೃತ್ತ ಶಿಕ್ಷಕಿ ಜಯಮ್ಮ ಅವರ ಶವದ ಮೇಲಿದ್ದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ.
ಕೋವಿಡ್​-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಯಮ್ಮ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ನಿನ್ನೆ ರಾತ್ರಿ ಮೃತಪಟ್ಟಿದ್ದರು. ಅವರ ದೇಹದ ಮೇಲಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದು, ಕೋವಿಡ್​ ಆಸ್ಪತ್ರೆ ಉಸ್ತುವಾರಿಗಳಿಂದ ಬೇಜವಾಬ್ದಾರಿ ಉತ್ತರ ಕೇಳಿಬಂದಿದೆ ಎಂದು ಮೃತರ ಕಡೆಯವರು ಆರೋಪಿಸಿದ್ದಾರೆ.
ಅಯೋಧ್ಯೆಯ ಬ್ರಹ್ಮರಥ ನಿರ್ಮಾಣಕ್ಕೆ ಇಂದು ಕುಂದಾಪುರದ ಕುಂಭಾಶಿಯಲ್ಲಿ ಚಾಲನೆ: ಶ್ರೀರಾಮನಿಗಾಗಿ ವಿಶ್ವದ ಅತಿ ಎತ್ತರದ ರಥ

2 ದಿನಗಳ ಹಿಂದೆ ನಾಪತ್ತೆಯಾಗಿದ್ದ ದಾಯಾದಿ ಸಹೋದರಿಯರ ಶವ ಬಾವಿಯಲ್ಲಿ ಪತ್ತೆ; ಸಾವಿನ ಸುತ್ತ ಮೂಡಿವೆ ಹಲವು ಅನುಮಾನಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 7 =
Remember me
